Rinku Singh: ಏಷ್ಯಾ ಕಪ್ ಗೆದ್ದ ಸಂಭ್ರಮ: ಅಣ್ಣ-ತಂಗಿ ಫುಲ್ ಜೋಷ್: ಬೊಂಬಾಟ್ ಗಿಫ್ಟ್

ಭಾರತದ ಸ್ಟಾರ್ ಕ್ರಿಕೆಟಿಗ 'ರಿಂಕು ಸಿಂಗ್' ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ, ಬದಲಾಗಿ ತಮ್ಮ ಸಹೋದರಿಗೆ ಸೊಗಸಾದ ವಿಡಾ VX2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ರಿಂಕು ಅವರ ಸಹೋದರಿ ನೇಹಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಉಡುಗೊರೆಗಾಗಿ ತನ್ನ ಸಹೋದರನಿಗೆ "ಥ್ಯಾಂಕ್ಯೂ ರಿಂಕು ಭಯ್ಯಾ" ಎಂದು ಕ್ಯಾಪ್ಷನ್ ನಲ್ಲಿ ಬರೆದು ಧನ್ಯವಾದ ಹೇಳಿದ್ದಾರೆ. ರಿಂಕು ಸಿಂಗ್ ಉಡುಗೊರೆಯಾಗಿ ನೀಡಿದ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳನ್ನು ನೋಡೋಣ.

ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರೀಮಿಯಂ VIDA ಸಬ್-ಬ್ರಾಂಡ್ ಅಡಿಯಲ್ಲಿ ತಯಾರಿಸಲ್ಪಟ್ಟ ವಿಡಾ VX2 ಇವಿ ಸ್ಕೂಟರ್, ನಗರ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. VX2 ಸಿರೀಸ್ Go ಮತ್ತು Plus ಎಂಬ ಎರಡು ಪ್ರಮುಖ ವೇರಿಯೆಂಟ್‌ಗಳನ್ನು ಒಳಗೊಂಡಿದೆ. ವಿಡಾ ವಿಎಕ್ಸ್2ಪ್ಲಸ್ 3.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದರೆ, VX2 Go ವೇರಿಯೆಂಟ್ 2.2kWh ಬ್ಯಾಟರಿ ಪ್ಯಾಕ್ ಹೋಂದಿದೆ.

cricketer-rinku-singh-gifts-vida-vx2-electric-scooter-to-his-sister

VX2 Go ವೇರಿಯೆಂಟ್ ಪ್ರತಿ ಚಾರ್ಜ್‌ಗೆ ಸುಮಾರು 92 ಕಿಮೀ ರೇಂಜ್ ನೀಡುತ್ತದೆ. ಹಾಗೆಯೇ ಹೆಚ್ಚಿನ ಪ್ರಯಾಣ ಮಾಡುವವರಿಗೆ, VX2 ಪ್ಲಸ್, ಅದರ ದೊಡ್ಡ ಬ್ಯಾಟರಿ ಪ್ಯಾಕ್‌ನಿಂದ, ಒಮ್ಮೆ ಚಾರ್ಜ್ ಮಾಡಿದರೆ ಗಣನೀಯವಾಗಿ 142 ಕಿ.ಮೀ ಓಡಬಲ್ಲದು. ಇದು ಕಂಪನಿ ಹೇಳಿರುವ ರೇಂಜ್ ಆಗಿದೆ, ರಿಯಲ್ ವರ್ಲ್ಡ್‌ ರೇಂಜ್ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ 90 ರಿಂದ 110 ಕಿ.ಮೀ ರೇಂಜ್ ನೀಡುತ್ತದೆ.

ಪರ್ಫಾಮೆನ್ಸ್ ವಿಷಯದಲ್ಲಿ, VX2 ಲೈನ್-ಅಪ್ 6 kW PMSM ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಚುರುಕಾದ ವೇಗವರ್ಧನೆ ಮತ್ತು ಉನ್ನತ ವೇಗವನ್ನು ನೀಡುತ್ತದೆ. Go ನಲ್ಲಿ 70 km/h ಮತ್ತು Plus ನಲ್ಲಿ 80 km/h ವರೆಗೆ ಟಾಪ್‌ ಸ್ಪೀಡ್ ಲಿಮಿಟ್ ಇದೆ. ಇದರ ತೆಗೆದು ಹಾಕಬಹುದಾದ ಬ್ಯಾಟರಿಯು ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

cricketer-rinku-singh-gifts-vida-vx2-electric-scooter-to-his-sister

ತೆಗೆಯಬಹುದಾದ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಸುಮಾರು 2 ರಿಂದ 3.5 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗಬಲ್ಲದು. ಡಿಜಿಟಲ್ ಡ್ಯಾಶ್‌ಬೋರ್ಡ್, ಕ್ಲೌಡ್ ಕನೆಕ್ಟ್, ನ್ಯಾವಿಗೇಷನ್, ಕರೆ/SMS ನೋಟಿಫಿಕೇಷನ್, ಬಹು ರೈಡ್ ಮೋಡ್‌ಗಳು, USB ಚಾರ್ಜಿಂಗ್ ಮತ್ತು ವಿಶಾಲವಾದ 33.2-ಲೀಟರ್ ಅಂಡರ್‌ಸೀಟ್ ಸ್ಟೋರೇಜ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಸುರಕ್ಷತೆ ಮತ್ತು ಅನುಕೂಲತೆಯು ನಗರ ಖರೀದಿದಾರರನ್ನು ಆಕರ್ಷಿಸುತ್ತಿದೆ.

ವಿಡಾ VX2 Go ವೇರಿಯೆಂಟ್ ಬೆಲೆ ರೂ. 1,02,685 ನಿಂದ ಪ್ರಾರಂಭವಾಗುತ್ತದೆ. ಇನ್ನೊಂದು ರೂಪಾಂತರವಾದ VX2 ಪ್ಲಸ್‌ನ ಬೆಲೆ ರೂ. 1,13,003 ಇದೆ. ಉಲ್ಲೇಖಿಸಲಾದ VX2 ಬೆಲೆಗಳು ಬೆಂಗಳೂರಿನ ಆನ್-ರೋಡ್ ಬೆಲೆಗಳಾಗಿವೆ. ಎಕ್ಸ್‌ ಶೋರೂಂ ಬೆಲೆಗಳನ್ನು ನೋಡುವುದಾದರೆ Go ವೇರಿಯೆಂಟ್ ರೂ. 99,490 ಹಾಗೂ ಪ್ಲಸ್ ವೇರಿಯೆಂಟ್ ರೂ. 1.10 ಲಕ್ಷವಿದೆ.

cricketer-rinku-singh-gifts-vida-vx2-electric-scooter-to-his-sister

ಸ್ಕೂಟರ್ 12-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ನೀಡಲಾಗಿದೆ. ಎಲ್ಇಡಿ ಲೈಟಿಂಗ್, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಲೈವ್ ರೈಡ್ ಡೇಟಾ ಮತ್ತು 4.3-ಇಂಚಿನ ಟಿಎಫ್‌ಟಿ ಡಿಸ್ಪ್ಲೇ (ವಿಎಕ್ಸ್ 2 ಗೋನಲ್ಲಿ ಎಲ್‌ಸಿಡಿ ಡಿಸ್ಪ್ಲೇ) ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ; ರಿಂಕು ಸಿಂಗ್ ಅವರ ಚಿಂತನಶೀಲ ಉಡುಗೊರೆಯು ವೈಯಕ್ತಿಕ ಕೃತಜ್ಞತೆ ಮತ್ತು ಪರಿಸರ ಕಾಳಜಿ ಕಡೆಗೆ ಭಾರತದ ತ್ವರಿತ ಪರಿವರ್ತನೆಯನ್ನು ಎತ್ತಿ ತೋರಿಸುತ್ತದೆ. EV ಅಳವಡಿಕೆ ಹೆಚ್ಚಾದಂತೆ ಮತ್ತು Vida VX2 ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಕಾಣಿಸುತ್ತಿದ್ದಂತೆ ಭಾರತೀಯ ಕುಟುಂಬಗಳಿಗೆ ಸುಸ್ಥಿರ, ಪ್ರಾಯೋಗಿಕ ಪ್ರಯಾಣದ ಹೊಸ ಯುಗವನ್ನು ಸೂಚಿಸುತ್ತವೆ.

More from DriveSpark

Article Published On: Tuesday, October 7, 2025, 17:44 [IST]
English summary
Cricketer rinku singh gifts vida vx2 electric scooter to his sister
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+