ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಭಾರತದಲ್ಲಿ ವ್ಯವಸಾಯ ಪದ್ಧತಿಯು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ತಂತ್ರಜ್ಞಾನಗಳ ಸಹಾಯದಿಂದ ಹೆಚ್ಚಿನ ಇಳುವರಿ ಪಡೆಯಲು ಲಕ್ಷಾಂತರ ರೈತರು ವೈಜ್ಞಾನಿಕ ಬೇಸಾಯದತ್ತ ಮುಖ ಮಾಡಿದ್ದಾರೆ.

By Rahul Ts

ಭಾರತದಲ್ಲಿ ವ್ಯವಸಾಯ ಪದ್ಧತಿಯು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ತಂತ್ರಜ್ಞಾನಗಳ ಸಹಾಯದಿಂದ ಹೆಚ್ಚಿನ ಇಳುವರಿ ಪಡೆಯಲು ಲಕ್ಷಾಂತರ ರೈತರು ವೈಜ್ಞಾನಿಕ ಬೇಸಾಯದತ್ತ ಮುಖ ಮಾಡಿದ್ದಾರೆ. ಆದ್ರೆ ಇಲ್ಲೊಂದಷ್ಟು ರೈತರಿದ್ದಾರೆ. ಅವರು ಕೃಷಿ ಚಟುವಟಿಕೆ ಬಳಸುವ ಯಂತ್ರಗಳನ್ನು ನೋಡಿದ್ರೆ ನಿಮ್ಮಅಚ್ಚರಿಯಾಗುತ್ತೆ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಒಂದು ಕಡೆ ಜನರು ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಐಷಾರಾಮಿ ಕಾರುಗಳನ್ನ ಖರೀದಿಸಿದ್ರೆ ಇನ್ನು ಕೆಲವರಿಗೆ ಕನಿಷ್ಠ ಒಂದು ಬೈಕ್ ಖರೀದಿಸಲು ಸಹ ಸಾಧ್ಯವಾದ ಪರಿಸ್ಥಿತಿ ಇದೆ. ಹೀಗಿರುವಾಗ ಇಲ್ಲೊಂದಿಷ್ಟು ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಎಸ್‌ಯುವಿ ಕಾರುಗಳನ್ನೇ ಟ್ರ್ಯಾಕ್ಟರ್‌ಗಳನ್ನಾಗಿ ಮಾಡಿ ವ್ಯವಸಾಯ ಬಳಕೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿವೆ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಹೌದು.. ಇಂದು ದೇಶದಲ್ಲಿ ಐಷಾರಾಮಿ ಕಾರುಗಳನ್ನು ಪ್ರಯಾಣಿಸುವುದಕ್ಕೆ ಮಾತ್ರವಲ್ಲದೆ ಇಲ್ಲಿನ ರೈತರು ಟ್ರ್ಯಾಕ್ಟರ್ ಬದಲಾಗಿ ಎಸ್‍‍ಯುವಿ ಕಾರುಗಳನ್ನು ವ್ಯವಸಾಯಕ್ಕಾಗಿ ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವ ಯಾವ ಕಾರುಗಳನ್ನು ರೈತರು ವ್ಯವಸಾಯಕ್ಕೆ ಬಳಸುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಮಹೀಂದ್ರಾ ಥಾರ್

ದೇಶದಲ್ಲಿನ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಕಾರುಗಳಲ್ಲಿ ಮಹೀಂದ್ರಾ ಥಾರ್ ಕೂಡ ಒಂದು. ಥಾರ್ ರಸ್ತೆಯಲ್ಲಿ ಮಾತ್ರವಲ್ಲದೆ ತನ್ನ ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್ ನಿಂದಾಗಿ ಆಫ್ ರೋಡ್‍‍ನಲ್ಲಿಯೂ ಕೂಡಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಆದ್ದರಿಂದಲೇ ಹೆಚ್ಚಿನ ಸಿನಿಮಾಗಳಲ್ಲಿ ಥಾರ್ ಕಾರನ್ನು ಬಳಸಿದ್ದಾರೆ. ಆದ್ರೆ ಇಲ್ಲೊಬ್ಬ ರೈತ ತನ್ನ ಥಾರ್ ಕಾರಿನ ಹಿಂದೆ ಟ್ರ್ಯಾಕ್ಟರ್ ಯಂತ್ರಗಳನ್ನು ಕಟ್ಟಿ ಹೊಲ ಹದಗೊಳಿಸುತ್ತಿದ್ದಾನೆ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಮಹೀಂದ್ರಾ ಥಾರ್ ಆಫ್ ರೋಡಿಂಗ್ ಕಾರಿನಲ್ಲಿ 2.5 ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, 105 ಬಿಹೆಚ್‍‍ಪಿ ಮತ್ತು 247 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯುವುದಲ್ಲದೆ ಇದರಲ್ಲಿ 4‍x4 ಡ್ರೈವ್ ಸಿಸ್ಟಮ್ ಅನ್ನು ಕೂಡಾ ಅಳವಡಿಸಲಾಗಿದೆ.

ಹಾಗಾದ್ರೆ ಮಾಹೀಂದ್ರಾ ಥಾರ್ ಕಾರಿನಿಂದ ಹೊಲ ಹದ ಮಾಡುವುದು ಸುಲಭವೇ? ಹೌದು, ಹಾಗಾದ್ರೆ ಈ ವೀಡಿಯೊ ನೋಡಿ ನಿಮಗೆ ತಿಳಿಯುತ್ತೆ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಮಿಟ್ಸುಬಿಷಿ ಮೊಂಟೆರೊ

ದೇಶದಲ್ಲಿ ದೊರೆಯುತ್ತಿರುವ ಐಷಾರಾಮಿ ಎಸ್‍‍ಯುವಿ ಕಾರುಗಳಲ್ಲಿ ಮಿಟ್ಸುಬಿಸಿ ಮೊಂಟೆರೊ ಕಾರು ಕೂಡಾ ಒಂದು. 75 ಲಕ್ಷ ಬೆಲೆ ಬಾಳುವ ಮಿಟ್ಸುಬಿಷಿ ಐಶಾರಾಮಿ ಕಾರನ್ನು ಪಂಜಾಬ್ ಮೂಲದ ಒಬ್ಬ ರೈತ ತನ್ನ ಹೊಲ ಬೇಸಾಯ ಮಾಡಲು ಬಳಸುತ್ತಿದ್ದಾನೆ ಎಂದರೆ ನಂಬಲೇಬೇಕು..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿಟ್ಸುಬಿಷಿ ಐಷಾರಾಮಿ ಕಾರುಗಳ ಲೈ‍ನ್‍ಅಪ್‍‍ನಲ್ಲಿ ಮೊಂಟೆರೊ 3.2 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 189 ಬಿಹೆಚ್‍‍ಪಿ ಮತ್ತು 441ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಸಾಧಾರಣ ಹೊಲದಲ್ಲಿ ಎಂದರೆ ನಂಬಬಹುದು ಆದ್ರೆ ಭತ್ತದ ಗದ್ದೆಯಲ್ಲೂ ಕೂಡಾ ಐಷಾರಾಮಿ ಕಾರನ್ನು ಬಳಸಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಅಲ್ವಾ.?! ಹಾಗಾದ್ರೆ ಈ ವೀಡಿಯೊ ಅನ್ನು ನೀವು ನೋಡಲೇಬೇಕು..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಮಹೀಂದ್ರಾ ಸ್ಕಾರ್ಪಿಯೊ

ಮಹೀಂದ್ರಾ ಕಾರಿನ ಬಿಡುಗಡೆಯೊಂದಿಗೆ ಎಸ್‍‍ಯುವಿ ಕಾರಗಳ ಸರಣಿಯಲ್ಲಿ ಮಹೀಂದ್ರಾ ಸಂಸ್ಥೆಯ ಹೆಸರು ಹೆಚ್ಚಾಗಿಯೆ ಸದ್ದು ಮಾಡಿತ್ತು. ನಗರ ಮತ್ತು ಇನ್ನಿತರೆ ಪ್ರದೇಶದಲ್ಲಿ ಸ್ಕಾರ್ಪಿಯೊ ಕಾರುಗಳಿಗೆ ಹೆಚ್ಚು ಜನಪ್ರಿಯತೆಯಿದ್ದು, ವಿದೇಶದಲ್ಲಿಯೂ ಕೂಡಾ ಇದರ ಕ್ರೇಜ್ ಹೆಚ್ಚಿದೆ. ಇಂತಹ ಕಾರನ್ನು ವ್ಯವಸಾಯಕ್ಕೆ ಬಳಸಿದರೆ ಹೇಗೆ..??

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಶಕ್ತಿಶಾಲಿಯದ ಮಹೀಂದ್ರಾ ಸ್ಕಾರ್ಪಿಯೊ ಎಸ್‍‍ಯುವಿ ಕಾರುಗಳು 2.2 ಲೀಟರ್ ಎಮ್‍‍ಹಾವ್ಕ್ ಡೀಸೆಲ್ ಎಂಜಿನ್ ಸಹಾಯದಿಂದ 120 ಬಿಹೆಚ್‍‍ಪಿ ಮತ್ತು 280ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದರಲ್ಲಿ 4x4 ಡ್ರೈವ್ ಸಿಸ್ಟಮ್ ಅನ್ನು ಕೂಡಾ ಅಳವಡಿಸಲಾಗಿದೆ.

ಎಸ್‍ಯುವಿ ಕಾರುಗಳ ಸರಣಿಯಲ್ಲಿ ರಾರಾಜಿಸಿದ್ದ ಮಹೀಂದ್ರಾ ಸ್ಕಾರ್ಪಿಯೊ ಕಾರನ್ನು ವ್ಯವಸಾಯಕ್ಕೆ ಬಳಸಿರುವ ವೀಡಿಯೊ ಇಲ್ಲಿದೆ ನೋಡಿ..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಟೊಯೊಟಾ ಫಾರ್ಚೂನರ್

ದೇಶಿಯ ಮಾರಕಟ್ಟೆಯಲ್ಲಿ ಬಿಡುಗಡೆಗೊಂಡ ಸಮಯದಿಂದಲೂ 7 ಆಸನವುಳ್ಳ ಟೊಯೊಟಾ ಫಾರ್ಚೂನರ್ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದಿಕೊಂಡಿದೆ. ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸರಣಿಯಲ್ಲಿ ಫಾರ್ಚೂನರ್ ಕಾರು ಕೂಡಾ ಇದೆ. ನೋಡಲು ಗೂಳಿಯಂತೆ ಇದೆ ಎಂದು ಇದನ್ನು ಕೂಡಾ ವ್ಯವಸಾಯಕ್ಕೆ ಬಳಸುವುದಾ.??

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಐಷಾರಾಮಿ ಟೊಯೊಟಾ ಫಾರ್ಚೂನಾರ್ ಎಸ್‍‍ಯುವಿ ಕಾರು 3.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 169 ಬಿಹೆಚ್‍ಪಿ ಮತ್ತು 343 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದರಲ್ಲಿ ಶಿಫ್ಟ್ ಆನ್ ಫ್ಲೈ ಆಲ್ ವೀಲ್ ಡ್ರೈವ್ ಸಿಸ್ಟಮ್ ಅನ್ನು ಕೂಡಾ ಅಳವಡಿಸಲಾಗಿದೆ.

ಟೊಯೊಟಾ ಫಾರ್ಚೂನರ್ ಕಾರನ್ನು ಗದ್ದೆ ಕೆಲಸಕ್ಕೆ ಬಳಸುತ್ತಿರುವ ವೀಡಿಯೊ ಇಲ್ಲಿದೆ ನೋಡಿ..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಟಾಟಾ ಸಫಾರಿ ಸ್ಟ್ರೋಮ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಎಸ್‍‍ಯುವಿ ಕಾರುಗಳ ಪಟ್ಟಿಯಿಂದ ಸಫಾರಿ ಸ್ಟೋರ್ಮ್ ಕಾರನ್ನು ತೊಲಗಿಸಿದ್ದರೂ ಇಂದಿಗೂ ಇದರ ಜನಪ್ರಿಯತೆಯು ಗ್ರಾಹಕರಲ್ಲಿ ಹಾಗೆಯೇ ಉಳಿದಿದೆ. ಸಫಾರಿ ಸ್ಟೋರ್ಮ್ ಕಾರನ್ನು ಒಬ್ಬ ರೈತ ತನ್ನ ಹೊಲದ ಕೆಲಸಕ್ಕಾಗಿ ಬಳಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು ವಾರಿಕೊರ್ 2.5-ಲೀಟರ್ ಡಿಸೇಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, 154 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಸಫಾರಿ ಸ್ಟೋರ್ಮ್ ಕಾರು ಕೇವಲ ರಿಯರ್ ಡ್ರೈವ್ ಸಿಸ್ಟಮ್ ಮಾತ್ರವಲ್ಲದೆ ಆಲ್ ವ್ಹೀಲ್ ಡ್ರೈವ್ ಅನ್ನು ಕೂಡಾ ಪಡೆದಿದೆ.

ಟಾಟಾ ಸಫಾರಿ ಸ್ಟೋರ್ಮ್ ಕಾರನ್ನು ವ್ಯವಸಾಯಕ್ಕೆ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊ ಇಲ್ಲಿದೆ ನೋಡಿ..

Most Read Articles

Kannada
Read more on tractor suv
English summary
Indian suv's that replaced tractors.
Story first published: Wednesday, June 13, 2018, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X