Just In
Don't Miss!
- Movies
ಟಾಲಿವುಡ್ ಗೆ ಹಾರಿದ ಮತ್ತೋರ್ವ ಕನ್ನಡದ ನಟಿ
- News
ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: 1 ತಿಂಗಳಲ್ಲಿ ಕನಿಷ್ಠ ಮಟ್ಟ
- Finance
ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರೀಟಿಸ್ ನಿಂದ ಐದು ಖರೀದಿ ಆಯ್ಕೆ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ಬೆಲೆಯ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ ಸೊನಾಲಿಕಾ
ದೇಶಯ ಜನಪ್ರಿಯ ಟ್ರ್ಯಾಕ್ಟರ್ ಉತ್ಪದನಾ ಕಂಪನಿಗಳಲ್ಲಿ ಒಂದಾಗಿರುವ ಸೊನಾಲಿಕಾ ಟ್ರ್ಯಾಕ್ಟರ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪನಿಯು ತನ್ನ ಟೈಗರ್ ಸರಣಿ ಟ್ರ್ಯಾಕ್ಟರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮಾದರಿಯನ್ನು ಯುರೋಪಿನ್ ಮಾರುಕಟ್ಟೆಯಲ್ಲಿ ಅಭಿವೃದ್ದಿಗೊಳಿಸಿರುವ ಸೊನಾಲಿಕಾ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯೊಂದಿಗೆ ವಿದೇಶಿ ಮಾರುಕಟ್ಟೆಗಳಿಗೂ ಹೊಸ ಟ್ರ್ಯಾಕ್ಟರ್ ಮಾದರಿಯನ್ನು ರಫ್ತು ಮಾಡಿಲಿದೆ. ಹೊಸ ಟ್ರ್ಯಾಕ್ಟರ್ ಮಾದರಿಯು ಎಕ್ಸ್‌ಶೋರೂಂ ದರದಂತೆ ರೂ. 5.99 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಖರೀದಿಗಾಗಿ ಈಗಾಗಲೇ ದೇಶಾದ್ಯಂತ ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.

ಗರಿಷ್ಠ ಮಟ್ಟದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿರುವ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮಾದರಿಯು ಐಪಿ67 ನಿಮಮಾನುಸಾರ ಅಭಿವೃದ್ದಿಗೊಂಡಿದ್ದು, 25.5kW ನ್ಯಾಚುರಲ್ ಕೂಲಿಂಗ್ ಕಂಪ್ಯಾಕ್ಟ್ ಬ್ಯಾಟರಿ ಜೋಡಣೆ ಮಾಡಲಾಗಿದೆ.

25.5kW ಬ್ಯಾಟರಿ ಪ್ಯಾಕ್ ಅನ್ನು ಚಾರ್ಜಿಂಗ್ ಮಾಡಲು ಹೋಂ ಚಾರ್ಜರ್ ಮೂಲಕ ಗರಿಷ್ಠ 10 ಗಂಟೆಗಳ ಕಾಲ ತೆಗೆದುಕೊಳ್ಳಲಿದ್ದು, ಆಸಕ್ತ ಗ್ರಾಹಕರು ಹೆಚ್ಚುವರಿಯಾಗಿ ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಮಾಡುವ ಸೌಲಭ್ಯವು ಕೂಡಾ ಲಭ್ಯವಿದೆ.

ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 8 ಗಂಟೆಗಳ ಕಾಲ 2 ಟನ್ ಭಾರದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿರುವ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮಾದರಿಯು ಪ್ರತಿ ಗಂಟೆಗೆ 24.9ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ. ಹಾಗೆಯೇ ಹೊಸ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಶೂನ್ಯ ನಿರ್ವಹಣಾ ವೆಚ್ಚದಾಯಕ ವಾಹನ ಮಾದರಿಯಾಗಿದ್ದು, ಕೃಷಿ ಕ್ಷೇತ್ರದಲ್ಲೇ ಹೊಸ ಟ್ರ್ಯಾಕ್ಟರ್ ಮಾದರಿಯು ಭಾರೀ ಸಂಚಲನ ಉಂಟು ಮಾಡುವ ತವಕದಲ್ಲಿದೆ.

ಹೊಸ ಇವಿ ಟ್ರ್ಯಾಕ್ಟರ್ ಮಾದರಿಯನ್ನು ಕಂಪನಿಯು ಮೇಕ್ ಇನ್ ಇಂಡಿಯಾ ಅಭಿಯಾನದಡಿ ನಿರ್ಮಾಣ ಮಾಡಲಾಗುತ್ತಿದ್ದು, ಹೊಸ ಟ್ರ್ಯಾಕ್ಟರ್ ಅನ್ನು ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

2030ರ ವೇಳೆಗೆ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತಿದ್ದು, ಭವಿಷ್ಯ ಯೋಜನೆಗಳಿಗೆ ಪೂರಕವಾಗಿ ಸೊನಾಲಿಕಾ ಕಂಪನಿಯು ಮಹತ್ವದ ಯೋಜನೆ ಜಾರಿಗೆ ತಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ 2030ರಿಂದ ಕೇವಲ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವೇ ಮಾರಾಟ ಅವಕಾಶ ನೀಡಲಾಗುತ್ತಿದ್ದು, ಈಗಿನಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನ ಮಾರಾಟವನ್ನು ಪರಿಣಾಮಕಾರಿ ತಗ್ಗಿಸಲಾಗುತ್ತಿದೆ.

ಜೊತೆಗೆ ಡೀಸೆಲ್ ಎಂಜಿನ್ ವಾಹನಗಳ ಬಳಕೆಗೆ ಹಂತ ಹಂತವಾಗಿ ನಿರ್ಬಂಧ ವಿಧಿಸಲಾಗುತ್ತಿದ್ದು, ಹೊಸ ನಿಯಮಗಳಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಬ್ಸಡಿ, ತೆರಿಗೆ ವಿನಾಯ್ತಿ, ನೋಂದಣಿ ಶುಲ್ಕದಲ್ಲಿ ವಿನಾಯ್ತಿ ಸೇರಿದಂತೆ ಹಲವಾರು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದೆ.