ಸೊನಾಲಿಕಾ ಎಕ್ಸ್‌ಟ್ರೀಂ ರಸ್ತೆಗೆ, ಇದ್ಯಾವ ಕಾರ್?
ಹೊಸ ಎಕ್ಸ್‌ಟ್ರೀಂ ಥೇಟ್ ಹಳೆಯ ಸೊನಾಲಿಕಾ ರೈನೊ ಕಾರಿನಂತೆಯೇ ಇದೆ. ಹಳೆಯ ರೈನೊ ಕಾರು ಟೊಯೊಟಾ ಕ್ವಾಲಿಸ್ ಕಾರನ್ನು ಹೋಲುತ್ತಿತ್ತು. ಹೀಗಾಗಿ ರಿನೊ ಮಾರಾಟ ಕಡಿಮೆಯಾಗಿತ್ತು. ನೂತನ ಎಕ್ಸ್‌ಟ್ರೀಂ ಕಾರನ್ನು ಕೂಡ ಇದೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ.
Sonalika Extreme ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಏಸಿ ಇರುವ ಮತ್ತು ಏಸಿ ಇಲ್ಲದ ಎಲ್‌ಡಿ ಆವೃತ್ತಿಗಳು, ಎಸ್ ಡಿ ಮತ್ತು ವಿಡಿ ಎಂಬ ಆವೃತ್ತಿಗಳಲ್ಲಿ ನೂತನ ಎಕ್ಸ್‌ಟ್ರೀಂ ಲಭ್ಯವಿದೆ.
ಇದು ಡಿಐ ಮತ್ತು ಸಿಆರ್ ಡಿಎಫ್ಐ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇವೆರಡು ಎಂಜಿನ್ ಗಳು ತಲಾ 99 ಹಾರ್ಸ್ ಪವರ್ ಮತ್ತು 120 ಹಾರ್ಸ್ ಪವರ್ ನೀಡುತ್ತವೆ. ಡಿಐ ಮತ್ತು ಸಿಆರ್ ಡಿಎಫ್ಐ ಎಂಜಿನುಗಳು ಕ್ರಮವಾಗಿ 240ಎನ್ಎಂ ಮತ್ತು 285 ಟಾರ್ಕ್ ಪವರ್ ನೀಡುತ್ತವೆ.
ವಿಶೇಷವೆಂದರೆ ಷೆವರ್ಲೆ ತವೆರಾ ನಿಯೊ 3 ಎಂಯುವಿಯಲ್ಲೂ ಇದೇ ಸಿಆರ್ ಡಿಎಫ್ಐ ಎಂಜಿನ್ ಬಳಸಲಾಗಿದೆ. ಸದ್ಯ ಈ ಕಾರು ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿರಲಿದೆ. ಎಕ್ಸ್‌ಟ್ರೀಂ ಕಾರು ಮುಂದಿನ ಕೆಲವೇ ತಿಂಗಳಲ್ಲಿ ದೇಶದಲ್ಲಿರುವ ಕಂಪನಿಯ 100 ಶೋರೂಂಗಳಲ್ಲಿ ಲಭ್ಯವಿರಲಿದೆ. ಇದರ ದರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಇದರ ಎಕ್ಸ್ ಶೋರೂಂ ದರ 5.88 ಲಕ್ಷ ರುಪಾಯಿ.


Click it and Unblock the Notifications









