ಸೋನಾಲಿಕಾ ಟ್ರ್ಯಾಕ್ಟರ್ ಆಫ್ರಿಕಾ ಯೋಜನೆ ವಿಸ್ತರಣೆ

By Nagaraja

ದೇಶದ ನಾಲ್ಕನೇ ಅತಿದೊಡ್ಡ ಟ್ರ್ಯಾಕ್ಟರ್ ಉತ್ಪಾದಕಾ ಸಂಸ್ಥೆಯಾಗಿರುವ ಸೋನಾಲಿಯಾ ಇಂಟರ್‌ನ್ಯಾಷನಲ್, ತನ್ನ ವಹಿವಾಟನ್ನು ಆಫ್ರಿಕಾಗೆ ವಿಸ್ತರಿಸುವ ಮಹತ್ತರ ಯೋಜನೆ ಹೊಂದಿದೆ. ಈ ಅಭಿವೃದ್ಧಿ ಹೊಂದುತ್ತಿರುವ ಖಂಡದಲ್ಲಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎರಡು ನೂತನ ಜೋಡಣಾ ಘಟಕಗಳನ್ನು ಸೇರಿಸುವಲ್ಲಿ ಟ್ರ್ಯಾಕ್ಟರ್ ತಯಾರಿಕಾ ಸಂಸ್ಥೆ ವಿಶೇಷ ಆಸಕ್ತಿ ಹೊಂದಿದೆ.

ಆಫ್ರಿಕಾಗೆ 6000 ಟ್ರ್ಯಾಕ್ಟರ್‍‌ಗಳನ್ನು ವಾರ್ಷಿಕವಾಗಿ ರಫ್ತು ಮಾಡುತ್ತಿರುವ ಸೋನಾಲಿಕಾ ಇಂಟರ್‌ನ್ಯಾಷನಲ್ ಈಗ ಆಫ್ರಿಕಾದಲ್ಲಿ ತನ್ನ ಪ್ರಸ್ತುತ ಮೂರು ಘಟಕಗಳ ಜೊತೆಗೆ ಇನ್ನೂ ಎರಡು ಹೊಸ ಜೋಡಣಾ ಘಟಕಗಳನ್ನು ಸೇರಿಸಲು ಯೋಜನೆ ಹೊಂದಿದೆ. ಈ ಮೂಲಕ 54 ದೇಶಗಳ ಖಂಡದಲ್ಲಿ ಇದುವರೆಗೆ ಉಪಯೋಗವಾಗದೇ ಇರುವ ಉಳುಮೆ ಯೋಗ್ಯ ನೆಲವನ್ನು ಬಳಸಿಕೊಳ್ಳುವ ಯೋಜನೆ ಹೊಂದಿದೆ.

ಪ್ರಸಕ್ತ ವರ್ಷ ಇನ್ನೂ ಎರಡು ಜೋಡಣಾ ಘಟಕಗಳನ್ನು ಆರಂಭಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ. ಭಾರತೀಯ ಉತ್ಪನ್ನಗಳು ಈ ಪ್ರದೇಶಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ದಕ್ಷಿಣ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾ ದೇಶಗಳಲ್ಲಿ ಕಂಪನಿಗಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಮತ್ತಷ್ಟು ಮುಖ್ಯವಾಗಿರುತ್ತದೆ ಎಂದು ಸೋನಿಕಾ ಸಮೂಹದ ಕಂಪನಿಯಾದ ಇಂಟರ್‌ನ್ಯಾಷನಲ್ ಟ್ರ್ಯಾಕ್ಟರ್ಸ್‌ ಲಿಮಿಟೆಡ್‍ನ ಅಂತಾರಾಷ್ಟ್ರೀಯ ವಹಿವಾಟಿನ ಹಿರಿಯ ಉಪಾಧ್ಯಕ್ಷ ರಾಜೀವ್ ವಾಹಿ ಹೇಳಿದ್ದಾರೆ.

ಕೆಮರೂನ್, ನೈಜೀರಿಯಾ ಮತ್ತು ಅಲ್ಜೀರಿಯಾಗಳಲ್ಲಿ ಪ್ರಸ್ತುತ ಮೂರು ಜೋಡಣಾ ಘಟಕಗಳಿದ್ದು, ಜೋಡಣಾ ಘಟಕವನ್ನು ಸ್ಥಾಪಿಸಲು ಸುಮಾರು 5 ದಶಲಕ್ಷದಿಂದ 20 ದಶಲಕ್ಷ ಡಾಲರ್ ಅಗತ್ಯವಿರುತ್ತದೆ. ಭಾರತಕ್ಕಿಂತ 5 ಪಟ್ಟು ದೊಡ್ಡದಾಗಿರುವ ಆಫ್ರಿಕಾ ಶೇ. 60ರಷ್ಟು ಉಪಯೋಗಿಸದಂತಹ ಉಲುಮೆ ಯೋಗ್ಯ ಭೂಮಿ ಹೊಂದಿದೆ. ಈ ದೇಶ ಅತ್ಯಂತ ಹಿಂದುಳಿದ ಮೂಲ ಕೃಷಿ ಕ್ರಮಗಳನ್ನು ಆಧರಿಸಿದೆ ಅಲ್ಲದೆ ಕೃಷಿ ಉತ್ಪನ್ನಗಳ ಆಮದು ಮಾಡಿಕೊಳ್ಳುತ್ತಿದೆ.

ಆಫ್ರಿಕಾ ಖಂಡ ಒಂದು ಲಕ್ಷ ಟ್ರ್ಯಾಕ್ಟರ್‌ಗಳ ಅಗತ್ಯ ಹೊಂದಿದೆ. ಪ್ರಸ್ತುತ 70,000 ಟ್ರ್ಯಾಕ್ಟರ್‌ಗಳ ಕೊರತೆ ಇದೆ. ಬೆಲೆ ಮತ್ತು ದೀರ್ಘ ಬಾಳಿಕೆಯ ಅಂಶಗಳಿಂದಾಗಿ ಆಫ್ರಿಕಾದಲ್ಲಿ ಭಾರತ ಟ್ರ್ಯಾಕ್ಟರ್ ಕೈಗಾರಿಕೆಯಲ್ಲಿ ಆದ್ಯಪ್ರವರ್ತಕ ಸ್ಥಾನ ಹೊಂದಿದೆ. ಭಾರತ 30 ವರ್ಷಗಳ ಹಿಂದೆ ಇದ್ದಂತಹ ಸ್ಥಿತಿಯಲ್ಲಿ ಆಫ್ರಿಕಾ ಈಗಿದೆ. 1970ರ ಆರಂಭದಲ್ಲಿ ಭಾರತೀಯ ಟ್ರ್ಯಾಕ್ಟರ್ ಮಾರುಕಟ್ಟೆ ವಾರ್ಷಿಕವಾಗಿ 30,000ದಿಂದ 40,000ರಷ್ಟಿತ್ತು. ಆ ಸಂದರ್ಭದಲ್ಲಿ ಭಾರತ ಆಮದು ಮಾಡಿಕೊಳ್ಳುತ್ತಿತ್ತು.

11 ವರ್ಷಗಳ ಹಿಂದೆ ಆಫ್ರಿಕಾಗೆ ರಫ್ತು ಮಾಡಲು ಆರಂಭಿಸಿದ ಸೋನಾಲಿಕಾ ಟ್ರ್ಯಾಕ್ಟರ್ ಇಂದು ಈ ಖಂಡದಲ್ಲಿ ಸುಮಾರು 30 ದೇಶಗಳಲ್ಲಿ ಹಾಜರಿ ಹೊಂದಿದೆ. ಆಫ್ರಿಕಾದ ವಾತಾವರಣ ಭಾರತದ ವಾತಾವರಣದಂತೆಯೇ ಇದೆ. ಇದರಿಂದ ಭಾರತೀಯ ಉತ್ಪನ್ನಗಳಿಗೆ ಹೊಂದಿಕೊಳ್ಳಲು ಸೂಕ್ತವಾಗಿದೆ. ದಕ್ಷಿಣ ಆಫ್ರಿಕಾ, ಮೊರಾಕೊ, ಅಲ್ಜೀರಿಯಾ, ಟುನಿಷಿಯಾ ಮತ್ತು ಈಜಿಪ್ಟ್‍ಗಳಲ್ಲಿ ಖಂಡದ ಶೇ. 90ರಷ್ಟು ಟ್ರ್ಯಾಕ್ಟರ್‍ಗಳು ಕಂಡು ಬರುತ್ತವೆ.

ಸೋನಾಲಿಕಾ ಟ್ರ್ಯಾಕ್ಟರ್ಸ್ ಭಾರತದಲ್ಲಿ ಐಎಸ್‍ಒ 14,001 ಮಾನ್ಯತೆ ಪಡೆದ ಮೊದಲ ಟ್ರ್ಯಾಕ್ಟರ್ ಕಂಪನಿಯಾಗಿದೆ. ಇಂಟರ್‍ನ್ಯಾಷನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್ 5000 ಕೋಟಿ ರೂ. ಮೌಲ್ಯದ ಸೋನಾಲಿಕಾ ಸಮೂಹದ ಅಂಗವಾಗಿದೆ. ಟ್ರ್ಯಾಕ್ಟರ್‍‌ಗಳು, ಬಹು ಉಪಯೋಗಿ ವಾಹನಗಳು, ಡೀಸೆಲ್ ಜನರೇಟರುಗಳು, ಪಿಕ್ ಅಂಡ್ ಕ್ಯಾರಿ ಕ್ರೇನ್‍ಗಳು ಮುಂತಾದ ಉತ್ಪನ್ನಗಳನ್ನು ಸಮೂಹ ತಯಾರಿಸುತ್ತಿದೆ.

Most Read Articles

Kannada
English summary
Sonalika International, India's fourth largest tractor manufacturer, has announced its plans to expand its business in the African continent with the setting up of two new manufacturing facilities.
Story first published: Monday, March 24, 2014, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more