1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

"ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ" ಎಂಬ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆಯಲ್ಲವೇ? ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಯು ಜಾಸ್ತಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಹಲವಾರು ದಶಕಗಳಿಂದ ಕಾರುಗಳ ಸುರಕ್ಷಾ ತಂತ್ರಜ್ಞಾನಗಳಲ್ಲಿ ಭಾರೀ ಅಭಿವೃದ್ಧಿಯಾಗಿದೆ. ಆದರೆ ಇವೆಲ್ಲವನ್ನು ತಮ್ಮ ಕಪಟ ತಂತ್ರದ ಮೂಲಕ ಖದೀಮರು ತಂತ್ರಜ್ಞಾನವನ್ನೇ ಮೆಟ್ಟಿ ನಿಂತಿದ್ದಾರೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ದೇಶದಲ್ಲಿ ಇತ್ತೀಚೆಗೆ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡಾ ಖರೀದಿಮ ಮಾತ್ರ ತಮ್ಮ ಕೈಚಳಕವನ್ನು ತೋರುತ್ತಿರುವುದು ವಾಹನ ಮಾಲೀಕರಿಗೆ ಸಿಕ್ಕಾಪಟ್ಟೆ ತಲೆ ಬಿಸಿ ಉಂಟು ಮಾಡಿದೆ. ಆದ್ರೆ ಉಪ್ಪು ತಿಂದವನೂ ನೀರು ಕುಡಿಯಲೇಬೇಕು ಅಲ್ಲವೇ? ಹೀಗಾಗಿ ವಾಹನಗಳನ್ನು ಕದ್ದ ಖದೀಮರು ಯಾವುದರೂ ಒಂದು ಸುಳಿವಿನೊಂದಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಹೌದು, ರಾಷ್ಟ್ರ ರಾಜಧಾನಿಯಲ್ಲಿ ಕಾರು ಮಾಲೀಕರಿಗೆ ತಲೆ ನೋವಾಗಿದ್ದ ಪರಿಣಮಿಸಿದ್ದ ಕಾರು ಖದೀಮರ ಗ್ಯಾಂಗ್ ಒಂದು ಅಂದರ್ ಆಗಿದ್ದು, ಬರೋಬ್ಬರಿ 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ದೆಹಲಿಯ ಕೆಶೋಪುರ ವಲಯದಲ್ಲಿ ಸಿಕ್ಕಿಬಿದ್ದಿರುವ ಮೂವರು ಕಾರು ಖದೀಮರ ತಂಡವೊಂದು ಕಾರು ಕಳ್ಳತನ ಮಾಡುತ್ತಿರುವ ಸಂದರ್ಭದಲ್ಲೇ ರೆಡ್‌ಹ್ಯಾಂಡ್ ಆಗಿ ಲಾಕ್ ಆಗಿದ್ದು, ಈ ಮೂಲಕ 121 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಉತ್ತರ ಪ್ರದೇಶದ ರವೀಂದ್ರ, ದೆಹಲಿ ನಿವಾಸಿಗಳಾದ ಅನ್ವರ್ ಮತ್ತು ಅಶೋಕ್ ಎಂಬುವವರನ್ನು ಬಂಧಿಸಿರುವ ದೆಹಲಿ ಪೊಲೀಸರು, ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿರುವ ಕೆಲವು ಸೇಕೆಂಡ್ ಹ್ಯಾಂಡ್ ಕಾರು ಮಾರಾಟದ ದಲ್ಲಾಳಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಮೊದಮೊದಲು ಸಣ್ಣಪುಟ್ಟ ಕಳ್ಳತನಗಳೊಂದಿಗೆ ಮನೆಗಳ್ಳತನ ಮಾಡುತ್ತಿದ್ದ ಈ ತಂಡ ತದನಂತರ ಬಹುಬೇಗ ಶ್ರೀಮಂತರಾಗುವ ಪ್ಲ್ಯಾನ್‌ನೊಂದಿಗೆ ಐಷಾರಾಮಿ ಕಾರು ಕಳ್ಳತನಕ್ಕೆ ಕೈ ಹಾಕಿದ್ದರು. ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಆಕ್ಟಿವ್ ಆಗಿದ್ದ ಈ ತಂಡವು ದೆಹಲಿಯ ವಿವಿಧಡೆ 10ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದರು.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ತದನಂತರ ಕದ್ದ ಕಾರುಗಳನ್ನು ಉತ್ತರಪ್ರದೇಶ, ರಾಜಸ್ತಾನ ಮತ್ತು ಹರಿಯಾಣಗಳಲ್ಲಿ ಮಾರಾಟ ಮಾಡುತ್ತಿದ್ದ ಈ ಮೂವರು ಖದೀಮರು, ಸೇಕೆಂಡ್ ಹ್ಯಾಂಡ್ ಕಾರು ಖರೀದಿಗೆ ಎದುರು ನೋಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ ಅಂತವರಿಗೆಯೇ ಈ ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದರು.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಕದ್ದ ಕಾರುಗಳನ್ನು ಮಾರಾಟ ಮಾಡುವ ವೇಳೆ ವಾಹನಗಳ ದಾಖಲೆಗಳನ್ನು ಕೇಳಿದರೆ ಕುಂಟು ನೆಪಹೇಳುತ್ತಿದ್ದು ಈ ಖದೀಮರು ಒಂದು ವಾರದೊಳಗೆ ಎಲ್ಲಾ ದಾಖಲೆ ನೀಡುವುದಾಗಿ ಗ್ರಾಹಕರಿಂದ ಹಣ ಪಡೆದು ಜೂಟ್ ಆಗುತ್ತಿದ್ದಲ್ಲದೇ ವಾರದ ನಂತರ ಇವರು ಇತ್ತ ಕಡೆ ವಾಪಸ್ ಬರುತ್ತಲೇ ಇರಲಿಲ್ಲ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಈ ಖದೀಮರು ಸಿಕ್ಕಿಬಿದ್ದಿದ್ದೇ ರೋಚಕ..!

ಕದ್ದ ಕಾರುಗಳನ್ನು ನಾಜುಕಾಗಿಯೇ ಮಾರಾಟ ಮಾಡಿ ಹಣ ಮಾಡುತ್ತಿದ್ದ ಈ ಖರೀದಿಮರ ತಂಡ ಕಳೆದ ವಾರದ ಹಿಂದಷ್ಟೇ ಕದ್ದ ಟೊಯೊಟಾ ಫಾರ್ಚೂನರ್ ಕಾರನ್ನು ಮಾರಾಟ ಮಾಡಲು ಆನ್‌ಲೈನ್ ಮೋರೆ ಹೋಗಿದ್ದರು. ಇದೇ ನೋಡಿ ಕಳ್ಳರು ತಮ್ಮ ಗುಂಡಿಯನ್ನು ತಾವೇ ತೊಡಿಕೊಂಡಿದ್ದು.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಕದ್ದ ಕಾರನ್ನು ಮಾಡಿಫೈ ಮಾಡಿಸಿದ್ದ ಈ ಖರೀದಿಮರು ಸೇಕೆಂಡ್ ಹ್ಯಾಂಡ್ ಕಾರು ಮಾರಾಟದ ಏಜೆನ್ಸಿವೊಂದರ ಮೂಲಕ ಮಾರಾಟಕ್ಕೆ ಡೀಲ್ ಮಾಡಿಕೊಂಡಿದ್ದರು. ಇದೇ ವೇಳೆ ಈ ಖದೀಮರಿಗೆ ಹುಡುಕಾಟ ನಡೆಸುತ್ತಿದ್ದ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ಸ್ ವಿಭಾಗದ ಅಧಿಕಾರಿಗಳು ಏಜೆಂಟ್‌ ನೀಡಿದ ಮಾಹಿತಿ ಮೇರೆಗೆ ಖದೀಮರನ್ನು ರೆಡ್‌ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಸದ್ಯ ಖದೀಮರಿಂದ 8 ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟೊಯೊಟಾ ಫಾರ್ಚೂನರ್, ಹ್ಯುಂಡೈ ಕ್ರೇಟಾ, ಹ್ಯುಂಡೈ ಆಕ್ಸೆಂಟ್, ಫೋರ್ಡ್ ಆಸ್ಪೈರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ ಕಾರುಗಳನ್ನೇ ಕದ್ದಿರುವುದು ಸಾಬೀತಾಗಿದೆ.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಇದರಿಂದ ಕಾರು ಖರೀದಿಮರಿಗೆ ಕಾರು ಮಾಲೀಕರೇ ಅನುಕೂಲ ಮಾಡಿಕೊಟ್ಟಂತಾಗಿದ್ದು, ಸುರಕ್ಷಾ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡದೆ ಇಲ್ಲದಿರುವ ಇಂತಹ ಕಾರುಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈ ಖದೀಮರು ಕೆಲವೇ ಸೇಕೆಂಡುಗಳಲ್ಲಿ ಡೋರ್ ಲಾಕ್ ಓಪನ್ ಮಾಡಿ ಕಾರು ಕದಿಯುತ್ತಿದ್ದರು.

1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಹೀಗಾಗಿ ಅಗ್ಗದ ಬೆಲೆಯಲ್ಲಿ ಸಿಗುವ ಸೇಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವುದಕ್ಕೂ ಮುನ್ನ ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆಯಿದ್ದು, ನೀವು ಖರೀದಿ ಮಾಡುತ್ತಿರುವ ವಾಹನವು ಕಳ್ಳತನ ಮಾಡಿದ್ದೋ ಅಥವಾ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆಯೋ ಎನ್ನುವುದನ್ನು ತಿಳಿದುಕೊಂಡು ಮುಂದಿನ ವ್ಯವಹಾರ ಕೈಗೊಳ್ಳುವುದು ಒಳಿತು.

Source: News18

Most Read Articles

Kannada
Read more on crime off beat
English summary
Gang Of Auto-Lifters Busted In Delhi, Vehicles Worth More Than 1 Crore Recovered
Story first published: Wednesday, November 21, 2018, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X