ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಸಾಮಾನ್ಯವಾಗಿ ಪೊಲೀಸರು ಅಪರಾಧ ನಡೆದ ಸ್ಥಳಗಳಿಗೆ ಹಾಗೂ ಗಸ್ತು ನಿರ್ವಹಣೆಗಾಗಿ ಕಾರು ಮತ್ತು ಬೈಕ್‌ನಲ್ಲಿ ಬರುವುದನ್ನು ನೋಡಿದ್ದೇವೆ. ಆದ್ರೆ ಇನ್ಮುಂದೆ ಪೊಲೀಸರು ಹಾರುವ ಬೈಕ್‌ಗಳಲ್ಲಿ ಬರಲಿದ್ದಾರೆ ಎಂದ್ರೆ ನೀವು ನಂಬಲೇಬೇಕು.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಹೌದು, ಅಭಿವೃದ್ಧಿ ಹೊಂದಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ ಅಪರಾಧ ಕೃತ್ಯಗಳು ಹೊಸ ಆಯಾಮ ಪಡೆದುಕೊಳ್ಳುತ್ತಿವೆ. ಹೀಗಾಗಿ ಗಸ್ತು ನಿರ್ವಹಣೆಗಾಗಿ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ದುಬೈ ಪೊಲೀಸರು ಹಾರುವ ಬೈಕ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಇತರೆ ದೇಶಗಳ ಪೊಲೀಸ್ ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ದುಬೈ ಪೊಲೀಸರು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹಾರುವ ಬೈಕ್‌ಗಳ ಬಳಕೆಗೆ ಚಾಲನೆ ನೀಡಿದ್ದಾರೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಈ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿರುವ ದುಬೈ ಪೊಲೀಸರು, ರಷ್ಯಾ ಮೂಲದ 'ಹೋವರ್ ಸರ್ಫ' ಸಂಸ್ಥೆಯ ನಿರ್ಮಾಣದ ಹೋವರ್ ಬೈಕ್‌ಗಳನ್ನು ಬಳಕೆ ಮಾಡುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಹೋವರ್ ಬೈಕ್ ವಿಶೇಷತೆ ಏನು?

ಹೋವರ್ ಸರ್ಫ ಸಂಸ್ಥೆಯು ನಿರ್ಮಾಣ ಮಾಡಿರುವ ಹೋವರ್ ಬೈಕ್ ಹಲವು ವಿಶೇಷತೆಗಳಿಂದ ಕೂಡಿದ್ದು, ನೆಲದಿಂದ 16 ಅಡಿ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಒಂದು ಬಾರಿ ನೆಲದಿಂದ ಎತ್ತರಕ್ಕೆ ಜಿಗಿದರೆ 25 ನಿಮಿಷಗಳ ಕಾಲ ಚಾಲನಾ ಸಾಮರ್ಥ್ಯ ಪಡೆದುಕೊಂಡಿದೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಹೋವರ್ ಬೈಕ್‌ನಿಂದ ಏನು ಲಾಭ?

ಹೋವರ್ ಬೈಕ್‌ಗಳಿಂದ ಸಾಕಷ್ಟು ಲಾಭಗಳಿಂದ ತುರ್ತು ಸಂದರ್ಭದಲ್ಲಿ ನಿಗದಿತ ಪ್ರದೇಶಗಳಿಗೆ ಅತಿ ವೇಗವಾಗಿ ತಲುಪಲು ಸಹಕಾರಿಯಾಗಲಿವೆ. ಜೊತೆಗೆ ವಾಹನಗಳು ಚಾಲನೆ ಮಾಡಲು ಸಾಧ್ಯವಾದ ಪ್ರದೇಶಗಳನ್ನು ತಲುಪಲು ಕೂಡಾ ಇದು ಬಳಕೆಯಾಗಲಿದೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಇದರಿಂದ ತುರ್ತು ಪರಿಸ್ಥಿತಿ ನಡೆದ ಸ್ಥಳಗಳನ್ನು ಅತಿವೇಗವಾಗಿ ತಲುಪಬಹುದಲ್ಲದೆ ಅಪಘಾತಗಳ ಭೀಕರತೆಯನ್ನು ತಗ್ಗಿಸಬಹುದು. ಹೀಗಾಗಿಯೇ ದುಬೈ ಪೊಲೀಸ್ ಇಲಾಖೆಯು ಇಂತದೊಂದು ಮಹತ್ವದ ಯೋಜನೆಗೆ ಹಸಿರು ನಿಶಾನೆ ತೊರಿದೆ.

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಈ ಬಗ್ಗೆ ಕಳೆದ ವರ್ಷದಿಂದಲೇ ವಿವಿಧ ಮಾದರಿಯ ಪರೀಕ್ಷಾರ್ಥ ಕಾರ್ಯಗಳನ್ನು ಮುಗಿಸಿರುವ ದುಬೈ ಪೊಲೀಸರು ಮುಂದಿನ 2019ರ ಆರಂಭದಿಂದಲೇ ಹೋವರ್ ಬೈಕ್‌ಗಳನ್ನು ತನ್ನ ಗಸ್ತುನಿರ್ವಹಣೆಗಾಗಿ ಬಳಕೆ ಮಾಡಲು ನಿರ್ಧರಿಸಿದ್ದು, ತಂತ್ರಜ್ಞರಿಂದ ಈಗಾಗಲೇ ಎಲ್ಲಾ ಬಗೆಯ ತರಬೇತಿ ಪ್ರಕ್ರಿಯೆಯನ್ನು ಸಹ ಮುಗಿಸಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಭಾರತದಲ್ಲೂ ಇದು ಸಾಧ್ಯವೇ?

ಭಾರತದಲ್ಲೂ ಇಂತಹ ಮುಂದುವರಿದ ತಂತ್ರಜ್ಞಾನಗಳ ಅಳವಡಿಕೆ ಅವಶ್ಯಕತೆಯಿದ್ದು, ಸಂಬಂಧಪಟ್ಟ ಇಲಾಖೆಗಳನ್ನು ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯಿದೆ ಎಂದ್ರೆ ತಪ್ಪಾಗಲಾರದು.

ದುಬೈ ಪೊಲೀಸರು ಹೋವರ್ ಬೈಕ್ ಕಾರ್ಯಾಚರಣೆಯ ಕುರಿತು ನಡೆಸಿದ ಪರೀಕ್ಷಾರ್ಥ ಪ್ರಕ್ರಿಯೆಯ ವಿಡಿಯೋ ಇಲ್ಲಿದೆ ನೋಡಿ.

MOST READ: ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಗಸ್ತು ನಿರ್ವಹಣೆಗಾಗಿ ಇನ್ಮುಂದೆ ಹಾರುವ ಬೈಕ್‌‌ಗಳ ಕಣ್ಗಾವಲು..!

ಪ್ರಿಯ ಡ್ರೈವ್ ಸ್ಪಾರ್ಕ್ ಓದುಗರೇ ಹೋವರ್ ಬೈಕ್ ಕುರಿತು ನಿಮ್ಮ ಅಭಿಪ್ರಾಯಗಳ ಹಂಚಿಕೊಳ್ಳಿ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಇಂತಹ ಯೋಜನೆಗಳ ಅವಶ್ಯಕತೆ ಇದೆಯೇ ಎಂಬುವುದರ ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ನಿಮ್ಮಅಭಿಪ್ರಾಯ ಹಂಚುಕೊಳ್ಳಿ.

Most Read Articles

Kannada
English summary
Dubai Police Flying Bikes Aka The Hoversurf S3 2019 To Be In Operation Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X