ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

By Praveen Sannamani

ಪ್ರತಿ ಕಾರು ಪ್ರೇಮಿಗೂ ಮಾಡಿಫೈ ಕಾರಿನ ಬಗೆಗೆ ಎಲ್ಲಿದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದೇ ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೆ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ. ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ದುಬಾರಿ ಮೌಲ್ಯದ ಹಮ್ಮರ್ ಕಾರಿನ ಮಾಡಿಫೈ ಮಾಡಿದ್ದು, ಆಪ್ ರೋಡ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ನಗರ ಪ್ರದೇಶಗಳಲ್ಲಿ ಕಾರು, ಬೈಕ್‌ಗಳನ್ನು ಮಾಡಿಫೈ ಮಾಡಿಸುವುದು ಹೊಸತೆನಲ್ಲ. ಆದರೂ ಕೆಲ ಬಾರಿ ಮಾಡಿಫೈ ವಾಹನ ತಯಾಕರು ಮೂಲ ವಾಹನಗಳಿಂತಲೂ ಅದ್ಭುತ ರೀತಿಯಲ್ಲಿ ಹೊಸ ಹೊಸ ನಮೂನೆಯ ವಾಹನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಮುಂಬೈ ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆಯಾದ ಎಸ್‌ಪಿ ಕಸ್ಟಮ್ ಎನ್ನುವ ಸಂಸ್ಥೆ ಅಭಿವೃದ್ಧಿ ಮಾಡಿರುವ ಮಾಡಿಫೈ ವರ್ಷನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನಸೆಳೆಯುತ್ತಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಮಾಡಿಫೈ ಕಾರುಗಳನ್ನು ಅಭಿವೃದ್ಧಿ ಮಾಡುವಲ್ಲಿ ಜನಪ್ರಿಯತೆ ಸಾಧಿಸಿರುವ ಎಸ್‌ಪಿ ಕಸ್ಟಮ್ ಸಂಸ್ಥೆಯು ಮಹೀಂದ್ರಾ ಥಾರ್ 4x4 ಎಂಜಿನ್ ಬಳಕೆ ಮಾಡಿಕೊಂಡು ಹಮ್ಮರ್ ವಿನ್ಯಾಸಗಳನ್ನು ನೀಡಲಾಗಿದ್ದು, ವಿಭಿನ್ನ ಮಾಡಿಫೈನೊಂದಿಗೆ ಆಕರ್ಷಕ ಲುಕ್ ಪಡೆದುಕೊಂಡಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಸುಮಾರು 2 ತಿಂಗಳು ಕಾಲ ಮಾಡಿಫೈ ವಿನ್ಯಾಸ ಮಾಡಲು ಕಾಲಾವಕಾಶ ತೆಗೆದುಕೊಂಡಿರುವ ಎಸ್‌ಪಿ ಕಸ್ಟಮ್ ಸಂಸ್ಥೆಯು ಕಾರಿನ ಬಾಡಿ ಮತ್ತು ಕಾರಿನ ಚಕ್ರಗಳನ್ನು ಸಂಪೂರ್ಣ ಬದಲಾವಣೆ ಮಾಡಿದೆ. ಮಾಡಿಫೈ ಕಾರಿನ ಒದಗಿಸಲಾಗಿರುವ ಫ್ರಂಟ್ ಗ್ರೀಲ್, ಫ್ರಂಟ್ ಬಂಪರ್ ಮತ್ತು ಅಂಡರ್ ಬಾಡಿ ಕ್ಲಿಡ್ ಪ್ಲೇಟ್ ಗಮನಸೆಳೆಯುತ್ತದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಜೊತೆಗೆ ಬಾಗಿಲ ರೀತಿಯಲ್ಲಿರುವ ರೂಫ್ ಲೈನ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಮೂಲ ಕಾರಿನ ಹೋಲಿಕೆಯನ್ನೇ ಪಡೆದುಕೊಂಡಿದ್ದು, ಒಳಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆ ತರಲಾಗಿದೆ. ನಾಲ್ಕು ಜನ ಆರಾಮವಾಗಿ ಕುಳಿತಬಹುದಾಗಿದ್ದು, ಲೆದರ್ ಸೀಟುಗಳು ಕಾರಿನ ಖದರ್ ಹೆಚ್ಚಿಸಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಎಂಜಿನ್ ಸಾಮರ್ಥ್ಯ

ಕಾರಿನ ಹೊರಭಾಗದ ವಿನ್ಯಾಸಗಳನ್ನು ಹೊರತು ಪಡಿಸಿ ಎಂಜಿನ್ ವಿಭಾಗದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹೀಗಾಗಿ ಮೂಲ ಕಾರಿನಲ್ಲಿರುವಂತೆಯೇ 2.5-ಲೀಟರ್ ಸಿಆರ್‌ಡಿ ಡಿಸೇಲ್ ಎಂಜಿನ್‌ನೊಂದಿಗೆ 105-ಬಿಎಚ್‌ಪಿ ಮತ್ತು 247-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಮಾಡಿಫೈ ವೆಚ್ಚ

ದುಬಾರಿ ಬೆಲೆಯ ಹಮ್ಮರ್ ಕಾರಿನ ಮಾಡಿಫೈ ಹೊಂದಿರುವ ಥಾರ್ ಕಾರುಗಳನ್ನು ಮಾಡಿಫೈ ಮಾಡಲು ಬರೋಬ್ಬರಿ ರೂ. 5.50 ಲಕ್ಷ ಖರ್ಚು ಮಾಡಲಾಗಿದ್ದು, ಮೂಲ ಕಾರಿನ ವಿನ್ಯಾಸಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮವಹಿಸಲಾಗಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಇನ್ನು ಕಾರಿನಲ್ಲಿ ಇನ್ಪೋಟೈನ್‌ಮೆಂಟ್ ಮತ್ತು ಕ್ಲಸ್ಟರ್‍‌ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು, ಸುರಕ್ಷಾ ವಿಚಾರದ ಸೌಲಭ್ಯಗಳ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಹಾಗೆಯೇ 2010ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶ ಮಾಡಿದ್ದ ಮಹೀಂದ್ರಾ ಥಾರ್ ಆಪ್ ರೋಡ್ ಎಸ್‌ಯುವಿ ಕಾರುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಲೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಸುಧಾರಿತ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮತ್ತೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಆಪ್ ರೋಡ್ ಪ್ರಿಯರನ್ನು ಸೆಳೆಯುವ ಉದ್ದೇಶದಿಂದ ಥಾರ್ ಉತ್ಪಾದನಾ ತಂತ್ರಗಳನ್ನು ಬದಲಾವಣೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಮುಂಬರುವ ಥಾರ್‌ಗಳನ್ನು ಉತ್ಪಾದನೆ ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹಲವು ವೈಶಿಷ್ಟ್ಯತೆಗಳೊಂದಿಗೆ ಮಾಡಿಫೈಗೊಂಡಿರುವ ಥಾರ್ ಕಾರಗಳು ಆಪ್ ರೋಡಿಂಗ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಒಂದು ವೇಳೆ ನಿಮ್ಮ ಬಳಿಯು ಥಾರ್ ಇದ್ದು, ಮಾಡಿಫೈ ಮಾಡಿಸಬೇಕೆಂಬ ಯೋಜನೆ ಇದ್ರೆ ಎಸ್‌ಪಿ ಕಸ್ಟಮ್ ಸಂಸ್ಥೆಯನ್ನು ಸಂಪರ್ಕಿಸಬಹುದು.

Most Read Articles

Kannada
Read more on car modification
English summary
Mahindra Thar modified to look like Hummer.
Story first published: Saturday, June 16, 2018, 17:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X