Maruti: ಹೈಬ್ರಿಡ್ ಮಾರುತಿ ಕಾರು ಬಿಡುಗಡೆಗೆ ಸರ್ವಸಿದ್ಧ: ತೀರಾ ಕಮ್ಮಿಬೆಲೆ, ಬೊಂಬಾಟ್ ಮೈಲೆಜ್: ಬೆಲೆ?

ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇವುಗಳ ಬೆಲೆ ಕೂಡ ದುಬಾರಿಯಾಗಿದೆ. ಈ ಹೈಬ್ರಿಡ್ ಕಾರುಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಮಾರುತಿ ಸುಜುಕಿ (Maruti Suzuki) ಕೆಲಸ ಮಾಡುತ್ತಿದೆ. ಮಾರುತಿ ಸುಜುಕಿಯ ಜನಪ್ರಿಯ ಸ್ಟೈಲಿಷ್ ಕಾರಾಗಿರುವ 'ಫ್ರಾಂಕ್ಸ್ ಫೇಸ್‌ಲಿಫ್ಟ್ 2026' ಹೈಬ್ರಿಡ್ ಮಾಡಲ್ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಕಾರು ಅಗ್ಗದ ಬೆಲೆಗೆ ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್ ಸೇರಿದಂತೆ ಉತ್ತಮ ಡಿಸೈನ್ ಹೊಂದಿರುವ ಕಾರಾಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ಮುಂಬರುವ ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಈಗಾಗಲೇ ಹಲವಾರು ಬಾರಿ ಕಾರನ್ನು ರೋಡ್‌ ಟೆಸ್ಟಿಂಗ್ ವೇಳೆ ಉರುತಿಸಲಾಗಿದ್ದು, ಡಿಸೈನ್ ಬಗ್ಗೆ ಕೆಲವೊಂದು ಮಾಹಿತಿ ಬಹಿರಂಗವಾಗಿದೆ. ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಗ್ರಿಲ್ ಜೊತೆಗೆ ಬರಲಿದೆ. ಉಳಿದಂತೆ ವಿನ್ಯಾಸ ಬದಲಾವಣೆಗಳು ಹೆಚ್ಚಾಗಿ ಕಾಣದಿದ್ದರೂ, ಟೈಲ್ ಗೇಟ್ ಮೇಲೆ ಮಾತ್ರ 'ಹೈಬ್ರಿಡ್' ಬ್ಯಾಡ್ಜ್ ಅನ್ನು ಹೊಂದಿದೆ. ಇನ್ನು ಯಾವುದೇ ಹೆಚ್ಚವರಿ ಡಿಸೈನ್ ಬದಲಾವಣೆ ಕಾಣಿಸಿಲ್ಲ.

new-2026-maruti-suzuki-fronx-hybrid-launch-soon

2026 ರಲ್ಲಿ ಫ್ರಾಂಕ್ಸ್ ಫೇಸ್‌ಲಿಫ್ಟ್ ಕನಿಷ್ಠ ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದ್ದರೂ, ಇದು ಹೊಸ ಲೆವೆಲ್ 2 ADAS ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇತರ ಗಮನಾರ್ಹ ವೈಶಿಷ್ಟ್ಯ ಸೇರ್ಪಡೆಗಳಲ್ಲಿ ಕ್ಯಾಬಿನ್ ಒಳಗೆ ದೊಡ್ಡ ಟಚ್‌ಸ್ಕ್ರೀನ್, ಹೆಚ್ಚು ಪ್ರೀಮಿಯಂ ಅಪ್ಹೋಲ್ಸ್ಟರಿ ವಸ್ತು, ಹೊಸ ಸ್ಟೀರಿಂಗ್ ವೀಲ್ ಮತ್ತು ಇನ್ನೂ ಹೆಚ್ಚಿನವು ಒಳಗೊಂಡಿರಬಹುದು.

ಫ್ರಾಂಕ್ಸ್ ಫೇಸ್‌ಲಿಫ್ಟ್ 2026 ರ ಮೂಲಮಾದರಿಯು ADAS ಮಾಡ್ಯೂಲ್‌ನೊಂದಿಗೆ ಹೊಸ 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿದ ಸಂಖ್ಯೆಯ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ನೀಡಲಾಗಿದೆ. ಪ್ರಸ್ತುತ ಮಾರಾಟದಲ್ಲಿರುವ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು, ರೂ.7.51 ಲಕ್ಷದಿಂದ ರೂ.13.04 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಆದರೆ ಮುಂಬರಲಿರುವ ಫೇಸ್‌ಲಿಫ್ಟ್ ಮಾಡಲ್ ತುಸು ಬೆಲೆ ಹೆಚ್ಚಿರಬಹುದು.

new-2026-maruti-suzuki-fronx-hybrid-launch-soon

ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ 2026 ಪವರ್‌ಟ್ರೇನ್‌ನ ವಿಷಯದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಪಡೆಯುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ 2026 ರ ಪರೀಕ್ಷಾ ಮಾಡಲ್ ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಪರೀಕ್ಷಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಶೀಘ್ರದಲ್ಲೆ ಹೆಚ್ಚಿನ ಮಾಹಿತಿ ಹೊರಬರಲಿದೆ.

ಫ್ರಾಂಕ್ಸ್ ಫೇಸ್‌ಲಿಫ್ಟ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ ಎಂಜಿನ್ ಆಯ್ಕೆಗಳಳು ಮುಂದುವರಿಯಲಿದೆ. 1.2-ಲೀಟರ್ NA ಪೆಟ್ರೋಲ್ ಎಂಜಿನ್ ಕ್ರಮವಾಗಿ 80 hp ಪವರ್ ಮತ್ತು 113 Nm ಪವರ್ ಉತ್ಪಾದಿಸುತ್ತದೆ. ಮತ್ತೊಂದೆಡೆ, 1.0-ಲೀಟರ್ ಟರ್ಬೊ ಪೆಟ್ರೋಲ್ ಕ್ರಮವಾಗಿ 99 hp ಪವರ್ ಮತ್ತು 147 Nm ಟಾರ್ಕ್ ಉತ್ಪಾದಿಸುತ್ತದೆ.

new-2026-maruti-suzuki-fronx-hybrid-launch-soon

ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಮೂಲಕ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.

ಇದು ಈ ವರ್ಷದ ಕೊನೆಯಲ್ಲಿ ಅನಾವರಣವಾಗಬಹುದು. ಮಾರುತಿ ಸುಜುಕಿ ಹೊಸ ಹೈಬ್ರಿಡ್ ಸಿಸ್ಟಮ್‌ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಮಾರುತಿಯಿಂದ ಅಧಿಕೃತ ಮಾಹಿತಿ ಹೊರಬರಬಹುದು. ಒಂದು ವೇಳೆ ಎಲ್ಲವು ಅಂದುಕೊಂಡಂತಾದರೆ ನಮಗಿರುವ ವರದಿಗಳ ಪ್ರಕಾರ, ಫ್ರಾಂಕ್ಸ್ ಹೈಬ್ರಿಡ್ 2026 ರಲ್ಲಿ ಮಾರಾಟಕ್ಕೂ ಬರಬಹುದು.

More from DriveSpark

Article Published On: Sunday, March 1, 2026, 12:40 [IST]
English summary
New 2026 maruti suzuki fronx hybrid launch soon
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+