ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರುಗಳು ಭವಿಷ್ಯದಲ್ಲಿ ಭಾರೀ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಈ ಹಿನ್ನೆಲೆ ಪ್ರಮುಖ ಆಟೋ ಉತ್ಪಾದಕರು ಉತ್ತಮ ಮೈಲೇಜ್ ರೇಂಜ್ ಹೊಂದಿರುವ ಇವಿ ಕಾರುಗಳನ್ನು ಪರಿಚಯಿಸಲಾಗುತ್ತಿ

By Rahul Ts

ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರುಗಳು ಭವಿಷ್ಯದಲ್ಲಿ ಭಾರೀ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಈ ಹಿನ್ನೆಲೆ ಪ್ರಮುಖ ಆಟೋ ಉತ್ಪಾದಕರು ಉತ್ತಮ ಮೈಲೇಜ್ ರೇಂಜ್ ಹೊಂದಿರುವ ಇವಿ ಕಾರುಗಳನ್ನು ಪರಿಚಯಿಸಲಾಗುತ್ತಿದೆ. ಇವುಗಳಲ್ಲಿ ಮಹೀಂದ್ರಾ ನಿರ್ಮಾಣದ ಎಲೆಕ್ಟ್ರಿಕ್ ಕಾರುಗಳು ಭಾರೀ ಚರ್ಚೆಗೆ ಕಾರಣವಾಗಿದ್ದು, ಅತಿ ಮೈಲೇಜ್ ಹೊಂದಿರುವ ಸೆಡಾನ್ ಕಾರಿನ ಮಾಹಿತಿ ಇಲ್ಲಿದೆ ನೋಡಿ..

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ನಮೂನೆಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಇ-ವೆರಿಟೋ ನಂತರ ಇ-ವೆರಿಟೊ ಡಿ2 ಎನ್ನುವ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರು ಹೊರತರುತ್ತಿದ್ದು, ಮೈಲೇಜ್ ವಿಚಾರವಾಗಿ ಸದ್ದು ಮಾಡುತ್ತಿರುವ ಈ ಕಾರು ಇಂಧನ ವೆಚ್ಚವನ್ನು ಯಾವ ಮಟ್ಟದಲ್ಲಿ ಉಳಿತಾಯ ಮಾಡಲಿದೆ ಎನ್ನುವುದೇ ಪ್ರಮುಖ ವಿಚಾರವಾಗಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ದೇಶದಲ್ಲಿ ಹಲವು ದಿನಗಳಿಂದ ಏರುಗತಿಯಲ್ಲಿರುವ ಇಂಧನದ ಬೆಲೆಯು ಸಾಮಾನ್ಯ ಪ್ರಜೆಯ ಪಾಲಿಗೂ ಕಷ್ಟಕರವಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಖರ್ಚು ಕಡಿತ ಮಾಡಲು, ಪರಿಸರ ಮಾಲಿನ್ಯ ತಡೆಯಲು ಉತ್ತಮ ಮಾರ್ಗ ಎನ್ನಬಹುದು.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಹೀಗಾಗಿ ಮಹೀಂದ್ರಾ ಸಂಸ್ಥೆಯು ಪರಿಚಯಿಸುತ್ತಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಇ-ವೆರಿಟೊ ವಿದ್ಯುತ್ ಕಾರುಗಳು 1 ಕಿಲೋಮೀಟರ್‍‍ಗೆ ಕೇವಲ ರೂ. 1.15 ಪೈಸೆ ವೆಚ್ಚವದಲ್ಲಿ ನೆಮ್ಮದಿಯಾಗಿ ರೈಡಿಂಗ್ ಅನುಭವದೊಂದಿಗೆ ಖರ್ಚನ್ನು ಸಹ ಪರಿಣಾಮಕಾರಿಯಾಗಿ ತಗ್ಗಿಸಬಹುದು.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಸಾಮಾನ್ಯವಾಗಿ ನಿಮ್ಮ ಸ್ವಂತದ ಡಿಸೇಲ್ ಅಥವಾ ಪೆಟ್ರೋಲ್ ಕಾರುಗಳಲ್ಲಿ ಪ್ರಯಾಣಿಸುವುದಾದರೇ ಪ್ರತಿ ಕಿ.ಮೀ ಗೆ ರೂ.4 ರಿಂದ ರೂ.6 ವೆಚ್ಚವಾಗಲಿದ್ದು, ಮಹೀಂದ್ರಾ ಇ-ವೆರಿಟೊ ಡಿ2 ಕಾರುಗಳನ್ನು ಬಳಕೆ ಮಾಡಿದ್ದಲ್ಲಿ ಅದು ಕೇವಲ ರೂ.1.15 ಪೈಸೆ ಎಂದ್ರೆ ನೀವು ನಂಬಲೇಬೇಕು.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

2010ರಲ್ಲಿ ರೆನಾಲ್ಟ್ ಇಂಡಿಯಾ ಮತ್ತು ಮಹೀಂದ್ರಾ ನಡುವಿನ ಜಾಯಿಂಟ್ ವೆಂಚುರ್ ಮುಗಿದ ನಂತರ ಮಹೀಂದ್ರಾ ಸಂಸ್ಥೆಯು ಈ ಕಾರನ್ನು ನಿರ್ಮಾಣ ಮಾಡುವ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದ್ದು, ಇ-ವೆರಿಟೊ ಡಿ2 ಕಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ.10.11 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಈ ಹಿಂದೆ ಈ ಕಾರು ಸರ್ಕಾರಿ ಅಧಿಕಾರಿಗಳ ಬಳಕೆಗಾಗಿ EISL ಸಂಸ್ಥೆಯು ಖರೀದಿ ಮಾಡುತ್ತಿತ್ತು. ನಂತರ ಗ್ರಾಹಕ ಬಳಕೆಗಾಗಿ ಈ ಕಾರು ಮಾರುಕಟ್ಟೆಗೆ ಪರಿಚಯಿಸಲಾಯ್ತು. ಇದೀಗ ಈ ಕಾರು ನವೀಕಣಗೊಂಡು ಇ-ವೆರಿಟೋ ಡಿ2 ಮಾದರಿಯಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಮೇಲೆ ಹೇಳಿದಂತೆ ಮಹೀಂದ್ರಾ ಇ-ವೆರಿಟೊ ಡಿ2 ಕಾರುಗಳು ರೂ.10.11 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ನೋಡಲು ಸಾಧಾರಣ ಇಂಧನ ಕಾರಿನಂತೆಯೇ ಕಾಣುತ್ತದೆ. ಆದರೆ ಈ ಕಾರಿನಲ್ಲಿ ಸಾಮಾನ್ಯ ಮತ್ತು ಫಾಸ್ಟ್ ಚಾರ್ಜಿಂಗ್ ಪ್ಲಗ್ ಪಾಯಿಂಟ್‍‍ಗಳನ್ನು ಅಳವಡಿಸಲಾಗಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ತುರ್ತು ಸಂದರ್ಭಗಳಲ್ಲಿ 8 ಕಿ.ಮೀ ಹೆಚ್ಚುವರಿ ವ್ಯಾಪ್ತಿಯನ್ನು ಒದಗಿಸುವ 'ರಿವೈವ್' ವೈಶಿಷ್ಟ್ಯದೊಂದಿಗೆ ಇ-ವೆರಿಟೊ ಬರಲಿದ್ದು, ಇಕೋ ಮತ್ತು ಬೂಸ್ಟ್ ಎಂಬ ಎರಡು ಡ್ರೈವ್ ಮೊಡ್‍‍ಗಳನ್ನು ಪಡೆದುಕೊಂಡಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ರಿಮೋಟ್ ಲಾಕಿಂಗ್, ಕೊಲಾಪ್ಸಿವಲ್ ಫೀಚರ್ಸ್, ಡ್ರೈವರ್ ಸೈಡ್ ಏರ್‍‍ಬ್ಯಾಗ್, ಆಟೋ ಡೋರ್ ಲಾಕ್, ಇಮ್‌ಮೊಬಿಲೈಜರ್ ಮತ್ತು ಹಿಲ್ ಹೋಲ್ಡ್ ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಇನ್ನು ಕಾರಿನ ಒಳಭಾಗದಲ್ಲಿ ಮಾಮೂಲು ವೇರಿಯಂಟ್ ಇ-ವೆರಿಟೊ ಕಾರಿನಂತೆಯೇ ವಿನ್ಯಾಸಗೊಂಡಿದ್ದು, ಗೇರ್ ಲಿವರ್ ಮತ್ತು ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ನವೀಕರಿಸಲಾಗಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಇ-ವೆರಿಟೊ ಡಿ2 ಎಲೆಕ್ಟ್ರಿಕ್ ಕಾರುನಲ್ಲಿ 18.55 ಕಿಲೋ ವ್ಯಾಟ್ಸ್ ಲೀಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 45ಬಿಹೆಚ್‍‍ಪಿ ಮತ್ತು 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಇದರಲ್ಲಿನ ಎಲೆಕ್ಟ್ರಿಕ್ ಪವರ್‍‍ಟ್ರೈನ್ ಒಂದು ಬಾರಿ ಫುಲ್ ಚಾರ್ಜ್‍ ಮಾಡಿದಲ್ಲಿ 140 ಕಿಲೋ ಮೀಟರ್ ಗರಿಷ್ಠ ಮೈಲೇಜ್ ನೀಡಲಿದ್ದು, ಗಂಟೆಗೆ 86 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಇನ್ನು ಈ ಕಾರಿನ ಬ್ಯಾಟರಿಯು ಸಂಪೂರ್ಣ ಚಾರ್ಜ್ ಮಾಡಲು 11.5 ಗಂಟೆಗೆ ಕಾಲಾವಕಾಶ ಬೇಕಾಗಿದ್ದು, ಫಾಸ್ಟ್ ಚಾರ್ಜಿಂಗ್‍‍ನ ಸಹಾಯದಿಂದ 1.75 ಗಂಟೆಯಲ್ಲಿ ಶೇಕಡಾ 80ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಆಗ 100 ಕಿ.ಮೀ ಮೈಲೇಜ್ ದೊರೆಯಲಿದೆ.

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಇನ್ನು ಮಹೀಂದ್ರಾ ಸಂಸ್ಥೆಯ ಇ-ವೆರಿಟೊ ಕಾರುಗಳು ಈಗಾಗಲೇ ನವದೆಹಲಿ, ಮುಂಬೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ಚಂಡೀಘರ್, ಹೈದ್ರಾಬಾದ್, ಜೈಪುರ್ ಮತ್ತು ನಾಗ್‍‍ಪುರ್ ನಗರಗಳಲ್ಲಿನ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಕಾರುಗಳನ್ನು ಪ್ರದರ್ಶನ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಿರಲಿವೆ.

Most Read Articles

Kannada
English summary
Mahindra eVerito D2 electric sedan.
Story first published: Friday, June 15, 2018, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X