10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದೆ. ಇದೇ ಕಾರಣಕ್ಕೆ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು 7 ಸೀಟರ್ ಎಂಪಿವಿ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇನ್ನು ಕೆಲವು ಸಂಸ್ಥೆಗಳು ಸದ್ಯ ಲಭ್ಯವಿರುವ ಎಂಪಿವಿ ಕಾರುಗಳನ್ನೇ ಮತ್ತಷ್ಟು ಹೊಸತನದೊಂದಿಗೆ ಮರು ಬಿಡುಗಡೆಗಾಗಿ ಸಕಲ ಸಿದ್ಧತೆನಡೆಸಿವೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಎಂಪಿವಿ ಕಾರುಗಳು ಮುಖ್ಯವಾಗಿ ವ್ಯಯಕ್ತಿಕ ಬಳಕೆಗಿಂತ ಟೂರಿಸ್ಟ್ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಟೊಯೊಟಾ ಇನೋವಾ ಕಾರುಗಳು ಈ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರುವುದು ಬಹುತೇಕ ವಾಹನ ಪ್ರಿಯರಿಗೆ ಗೊತ್ತಿರುವ ವಿಚಾರ. ಇದೇ ಕಾರಣಕ್ಕೆ ಮಾರುತಿ ಸುಜುಕಿ, ಮಹೀಂದ್ರಾ ಮತ್ತು ರೆನಾಲ್ಟ್ ಸಂಸ್ಥೆಗಳು ಸಹ ಹೊಸ ಎಂಪಿವಿ ಕಾರುಗಳನ್ನು ಬಿಡುಗಡೆಗೊಳಿಸಿ ಇನೋವಾಗೆ ಪ್ರತಿಸ್ಪರ್ಧಿಯಾಗುವ ತವಕದಲ್ಲಿವೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್

ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಲಿದ್ದು, ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಸದ್ಯ ಇಂಡೋನೇಷ್ಯಾ ಅಂತಾರಾಷ್ಟ್ರೀಯ ಮೋಟಾರ್ ಮೇಳದಲ್ಲಿ ಪ್ರದರ್ಶನಗೊಂಡಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿಗಳು ಎಂಪಿವಿ ಕಾರು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದ್ದು, ಈ ಹಿಂದಿನ ಕಾರು ಮಾದರಿಗಿಂತ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಈ ಹಿಂದಿನ ಮಾದರಿಗಿಂತ ಉದ್ದಳತೆಯಲ್ಲಿ ಹೆಚ್ಚಿನ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎರ್ಟಿಗಾ ಫೇಸ್‌ಲಿಫ್ಟ್ ಕಾರುಗಳ ಕ್ಯಾಬಿನ್ ಸ್ಪೆಸ್ ಕೂಡಾ ಮೂಲ ಮಾದರಿಗಿಂತ ಹೆಚ್ಚಿರಲಿವೆ ಎನ್ನಲಾಗಿದೆ. ಜೊತೆಗೆ ಕಾರಿನ ವಿಂಡ್‌ಸ್ಕ್ರೀನ್ ಅಳತೆಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳು ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರಿನ ಲುಕ್ ಹೆಚ್ಚಿಸಿವೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಗಳು ಹೊಸದಾಗಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿವೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಸುರಕ್ಷಾ ಸೌಲಭ್ಯಗಳು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಬಿಡುಗಡೆಯ ಅವಧಿ : 2018ರ ಆಗಸ್ಟ್

ಕಾರಿನ ಬೆಲೆ (ಅಂದಾಜು): ರೂ.7 ಲಕ್ಷದಿಂದ ರೂ.10 ಲಕ್ಷ

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮಹೀಂದ್ರಾ ಯು321

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಕೆಲ ದಿನಗಳ ಹಿಂದಷ್ಟೆ ತಮ್ಮ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಸಂಸ್ಥೆಯು ಎಂಪಿವಿ ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮಹೀಂದ್ರಾ ನಿರ್ಮಾಣದ ಹೊಸ ಎಂಪಿವಿ ಕಾರನ್ನು ಯು321 ಕೋಡ್‌ನೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಇದೀಗ ಮತ್ತೆ ಬಿಳಿ ಬಣ್ಣದ ಆಯ್ಕೆಯನ್ನು ಹೊಂದಿರುವ ಮಾದರಿಯು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಚೆನ್ನೈ ಬಳಿ ಕಾಣಿಸಿಕೊಂಡಿದೆ. ಇದರೊಂದಿಗೆ ಮೊದಲ ಬಾರಿಗೆ ಹೊಸ ಕಾರಿನ ಬಣ್ಣದ ಆಯ್ಕೆಗಳು ಬಹಿರಂಗವಾಗಿದ್ದು, ಇನೋವಾ ಕಾರುಗಳನ್ನು ಗುರಿಯಾಗಿಸಿ ಯು321 ಕಾರನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮಹಿಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಇನ್ನು ಮಹೀಂದ್ರಾ ಯು321 ಎಂಪಿವಿ ಬೇಸ್ ಮಾಡಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳಲ್ಲಿ ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯ ಅವಧಿ : 2018ರ ಸೆಪ್ಟೆಂಬರ್

ಕಾರಿನ ಬೆಲೆಗಳು: ರೂ.10 ಲಕ್ಷದಿಂದ ರೂ.13 ಲಕ್ಷ

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ರೆನಾಲ್ಟ್ ಮಿನಿ ಎಂಪಿವಿ

ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು ಲೊಡ್ಜಿ ಎಂಪಿವಿ ಕಾರುಗಳ ಮಾರಾಟದಲ್ಲಿ ಮಾತ್ರ ಹಿನ್ನಡೆ ಅನುಭವಿಸಿತ್ತು. ಈ ಹಿನ್ನೆಲೆ ಹೊಸ ಕಾರು ಉತ್ಪನ್ನದೊಂದಿಗೆ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರೆನಾಲ್ಟ್ ಸಂಸ್ಥೆಯು ಈ ಬಾರಿ 7 ಸೀಟರ್ ಮಾದರಿಯ ಮಿನಿ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಈ ಹಿನ್ನೆಲೆ ತಮಿಳುನಾಡಿನ ಪ್ರಮುಖ ಕಡೆಗಳಲ್ಲಿ ರೆನಾಲ್ಟ್ ಸಂಸ್ಥೆಯು ತನ್ನ ಹೊಸ ಎಂಪಿವಿ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಕಂಡುಬಂದಿದ್ದು, ರೆನಾಲ್ಟ್ ಸಂಸ್ಥೆಯ ಸಿಎಂಎಫ್ ಎ ಪ್ಲಸ್ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆಯೆಂತೆ. ಜೊತೆಗೆ ಈ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಕ್ವಿಡ್ ಹ್ಯಾಚ್‌ಬ್ಯಾಕ್ ವಿನ್ಯಾಸಗಳನ್ನೇ ಪಡೆದಿದ್ದು, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಎಂಪಿವಿ ಮಾದರಿಗಳಲ್ಲೇ ಸಣ್ಣ ಗಾತ್ರದ ಕಾರು ಆವೃತ್ತಿಯಾಗಿರುವ ರೆನಾಲ್ಟ್ ಹೊಸ ಕಾರು ಬೆಲೆ ಮತ್ತು ಎಂಜಿನ್ ಗಾತ್ರದಲ್ಲೂ ತುಸು ಬದಲಾವಣೆಯೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಲೊಡ್ಜಿ ಕಾರುಗಳ ಮಾರಾಟ ಆದ ಹಿನ್ನಡೆಯನ್ನು ಈ ಕಾರಿನ ಮೂಲಕ ಗ್ರಾಹಕರ ಬೇಡಿಕೆಯನ್ನು ಕಾಯ್ದುಕೊಳ್ಳವು ನೆರವಾಗುವ ನೀರಿಕ್ಷೆಯಿದೆ.

10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...

ಮೂಲಗಳ ಪ್ರಕಾರ, 7 ಸೀಟರ್ ಸೌಲಭ್ಯವನ್ನು ಹೊಂದಿರುವ ರೆನಾಲ್ಟ್ ಹೊಸ ಎಂಪಿವಿ ಕಾರು ಗುಣಮಟ್ಟ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಡಿಆರ್‌ಎಸ್ ಸೌಲಭ್ಯಗಳು ಇದರಲ್ಲಿವೆ.

ಬಿಡುಗಡೆಯ ದಿನಾಂಕ: 2019ರ ಆರಂಭದಲ್ಲಿ

ಕಾರಿನ ಬೆಲೆಗಳು (ಅಂದಾಜು): ರೂ.6.50 ಲಕ್ಷದಿಂದ ರೂ.8.50 ಲಕ್ಷ

Most Read Articles

Kannada
Read more on upcoming cars mpv
English summary
upcoming family MPV under 10 lakhs.
Story first published: Monday, June 18, 2018, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X