ವಾಹನ ಖರೀದಿದಾರರಿಗರ ಮತ್ತೆ ದರ ಏರಿಕೆಯ ಬರೆ

Maruti hero honda price hike
ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಮಾಡಿಟಿ ದರ ಏರಿಕೆಯಿಂದ ಕಂಗಲಾಗಿರುವ ದೇಶದ ವಾಹನೋದ್ಯಮ ಮತ್ತೆ ಗ್ರಾಹಕರಿಗೆ ದರ ಏರಿಕೆಯ ಬರೆ ಹಾಕಲು ಹೊರಟಿವೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಉಂಟಾಗುತ್ತಿರುವ ನಷ್ಟವನ್ನು ಪರಿಹರಿಸಲು ವಾಹನಗಳಿಗೆ ದರ ಹೆಚ್ಚಳ ಮಾಡುವುದು ಅನಿವಾರ್ಯವೆಂದು ಮಾರುತಿ, ಹೀರೋ ಹೋಂಡಾದಂತಹ ಬೃಹತ್ ವಾಹನ ಕಂಪನಿಗಳು ತಿಳಿಸಿವೆ.

ಕಳೆದ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಕಂಪನಿಗಳ ಲಾಭ ಸುಮಾರು ಶೇ. 20ರಷ್ಟು ಕುಸಿದಿದೆ ಎಂದು ಆ ಕಂಪನಿಗಳು ಹೇಳಿವೆ. ರಬ್ಬರ್, ಸ್ಟೀಲ್ ಮತ್ತು ಪ್ಲಾಸ್ಟಿಕ್ ಸೇರಿದಂತೆ ಅಗತ್ಯ ಕಚ್ಚಾ ವಸ್ತುಗಳ ದರ ಏರಿಕೆಯ ಹಿನ್ನಲೆಯಲ್ಲಿ ವಾಹನ ದರ ಹೆಚ್ಚಿಸುವ ಒತ್ತಡದಲ್ಲಿ ವಾಹನ ಕಂಪನಿಗಳು ಇವೆ. ವೆಚ್ಚ ತಗ್ಗಿಸಲು ಕಂಪನಿಯ ಉದ್ಯೋಗಿಗಳು ಸಾಕಷ್ಟು ಶ್ರಮಿಸುತ್ತಿರುವುದಾಗಿ ಮಾರುತಿ ಪೂರೈಕೆ ವಿಭಾಗದ ಕಾರ್ಯನಿರ್ವಾಹಣಾಧಿಕಾರಿ ಹೇಳುತ್ತಾರೆ.

ತ್ಯಾಜದ ಪ್ರಮಾಣವನ್ನು ತಗ್ಗಿಸಲು, ಕಚ್ಚಾ ವಸ್ತುಗಳನ್ನು ದಕ್ಷತೆಯಿಂದ ಉಪಯೋಗಿಸಲು ಕಂಪನಿಯು ಕ್ರಮಗೊಳ್ಳುತ್ತಿದೆ ಎಂದರು. ಜಪಾನಿನ ತ್ಯಾಜ ನಿರ್ವಾಹಣಾ ಸಂಸ್ಥೆ ವೂಡಾ ಸಹಕಾರವನ್ನು ಮಾರುತಿ ಪಡೆಯುತ್ತಿದೆ. ತಮ್ಮ ತಮ್ಮ ಘಟಕಗಳಲ್ಲಿ ತ್ಯಾಜ ಕಡಿಮೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಲು "ಗೆಂಬಾ" ಎಂಬ ಯೋಜನೆಯನ್ನೂ ಕಂಪನಿ ರೂಪಿಸಿದೆ. ಒಂದು ಗ್ರಾಂನಲ್ಲಿ ಒಂದು ಸಾಧನ ತಯಾರಿಸುವ ನೀತಿಯಲ್ಲಿ ಕಚ್ಚಾ ವಸ್ತುಗಳ ಬಳಕೆಯನ್ನು ದಕ್ಷತೆಯಿಂದ ಉಪಯೋಗಿಸಿಕೊಳ್ಳಲಾಗುತ್ತದೆ.

ಮಾರುತಿ ಈಗಾಗಲೇ ಆಲ್ಟೊ ಕಾರ್ ಗಳಿಗೆ ಶೇ. 1.6ರಷ್ಟು ದರ ಹೆಚ್ಚಳ ಮಾಡಿದೆ. "ಶೀಘ್ರದಲ್ಲಿ ಎರಡನೇ ಬಾರಿ ದರ ಹೆಚ್ಚಳ ಮಾಡಲಾಗುವುದು. ಹಣದುಬ್ಬರ ದರ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ದರ ಹೆಚ್ಚಳಕ್ಕೆ ಒಂದಿಷ್ಟು ವಿಳಂಬ ಮಾಡಲಾಗುತ್ತಿದೆ" ಎಂದು ಕಂಪನಿ ಸಿಇಒ ಹೇಳಿದ್ದಾರೆ.

ಹೀರೋ ಹೋಂಡಾ ಕೂಡ ಮಾರುತಿಯ ಹಾದಿಯಲ್ಲಿಯೇ ಇದೆ. ಉತ್ಪಾದನಾ ವೆಚ್ಚ ಏರಿಕೆ ಕಾಣುತ್ತಿರುವುದರಿಂದ ಇನ್ನೊಮ್ಮೆ ದರ ಏರಿಕೆ ಮಾಡಲಾಗುವುದೆಂದು ಕಂಪನಿಯ ಸಿಇಒ ಹೇಳಿದ್ದಾರೆ. ಸ್ಟೀಲ್ ದರಗಳು ಶೇ. 20-25ರಷ್ಟು ಏರಿಕೆ ಕಂಡಿದ್ದು ದರ ಏರಿಕೆ ಅನಿವಾರ್ಯ ಎಂದಿದ್ದಾರೆ. ಹೀರೋ ಹೋಂಡಾ ಕಳೆದ ಡಿಸೆಂಬರ್ ನಲ್ಲಿ ವಾಹನ ದರ ಹೆಚ್ಚಳ ಮಾಡಿತ್ತು.

More from DriveSpark

Article Published On: Friday, February 18, 2011, 15:17 [IST]
English summary
The auto industry of India is facing lot of hardships in maintaining the price of its ranges, as a result of high input costs and commodity prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+