ಆಡಿ ಕಣ್ಣು ಲೇಡಿ ಮ್ಯಾಗೆ, ಲೇಡಿ ಕಣ್ಣು ಆಡಿ ಮ್ಯಾಗೆ

Audi Logo
ನಮ್ಮ ದೇಶದಲ್ಲಿರುವ ಶ್ರೀಮಂತ ಮಹಿಳೆಯರ ಮೇಲೆ ಲಕ್ಷುರಿ ಕಾರ್ ತಯಾರಿಕಾ ಕಂಪನಿ ಆಡಿ ಕಣ್ಣು ನೆಟ್ಟಿದೆ. ಈಗ ಐಷಾರಾಮಿ ಕಾರ್ ಸವಾರಿ ಎಂಬುದು ಕ್ರೇಜ್ ಮತ್ತು ಫ್ಯಾಷನ್ ಆಗಿದ್ದು ದೇಶದ ಲಕ್ಷುರಿ ಕಾರ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ನಂತಹ ಕಂಪನಿಗಳು ಸಾಕಷ್ಟು ಪ್ರಗತಿ ಕಾಣುತ್ತಿವೆ. ಇಂತಹ ಕಂಪನಿಗಳೊಂದಿಗೆ ಆಡಿ ಕೂಡ ಸಾಕಷ್ಟು ಕಾರ್ಯತಂತ್ರ ರೂಪಿಸುತ್ತಿದೆ.

ಹೆಚ್ಚು ಮಹಿಳಾ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಆಡಿ ಕೂಡ ಈ ಎಲೈಟ್ ಕ್ಲಬ್ ಸೇರಿದೆ. ದೇಶದ ಮಹಿಳೆಯರು ಆಡಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ, ಅದರಲ್ಲೂ ಅವರಿಗೆ ಆಡಿ ಟಿಟಿ ಕಾರ್ ಇಷ್ಟವೆಂದು ಬಿಸಿನೆಸ್ ಲೈನ್ ವರದಿಯೊಂದು ತಿಳಿಸಿದೆ. ಕತ್ರಿನಾ ಕೈಫ್, ರಣಬೀರ್ ಕಪೂರ್ ಮುಂತಾದ ಬಾಲಿವುಡ್ ನಟ ನಟಿಯರಿಗೂ ಆಡಿ ಆರ್ 8 ಆವೃತ್ತಿ ಹೆಚ್ಚು ಇಷ್ಟವಾಗಿದೆ ಎಂದು ವರದಿ ಹೇಳಿದೆ.

ದೇಶದ ಮಹಿಳೆಯರು ಐಷಾರಾಮಿ ಡ್ರೈವ್ ಗಾಗಿ ಸ್ಪೋರ್ಟ್ಸ್ ವೆಹಿಕಲ್ ಹೆಚ್ಚು ಖರೀದಿಸುತ್ತಿದ್ದು, ಇದು ನನಗೆ ಅತ್ಯಂತ ಸಂತೋಷ ಮತ್ತು ಬೆರಗು ಉಂಟು ಮಾಡಿದ ವಿಷಯವೆಂದು ಆಡಿ ಇಂಡಿಯಾದ ಮುಖ್ಯಸ್ಥರು ಕಣ್ಣರಳಿಸಿದ್ದಾರೆ. 2010ರಲ್ಲಿ ಕಂಪನಿ ದೇಶದಲ್ಲಿ ಸುಮಾರು 3 ಸಾವಿರ ಲಕ್ಷುರಿ ಕಾರ್ ಮಾರಾಟ ಮಾಡಿದ್ದು ಮಾರಾಟದಲ್ಲಿ ಶೇ. 50ರಷ್ಟು ಪ್ರಗತಿ ದಾಖಲಿಸಿದೆ. ದೇಶದಲ್ಲಿನ ಬಡ್ಡಿದರ ಮತ್ತು ಬದಲಾಗುತ್ತಿರುವ ಆರ್ಥಿಕತೆಯಿಂದ ಕಂಪನಿಯ ವಹಿವಾಟಿಗೆ ಯಾವುದೇ ತೊಂದರೆಯಾದಂತೆ ಅನಿಸುತ್ತಿಲ್ಲವೆಂದೂ ಅವರು ಹೇಳಿದ್ದಾರೆ.

ಈ ವರ್ಷ ಕೂಡ ಕಂಪನಿ ಕಳೆದ ವರ್ಷದ ಮಾರಾಟದ ಪ್ರಗತಿಯನ್ನು ಮುಂದುವರೆಸುವ ಭರವಸೆ ಇರುವುದಾಗಿ ಆಡಿ ಇಂಡಿಯಾದ ಮುಖ್ಯಸ್ಥರು ತಿಳಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಆರ್ 8, ವಿ10, ಎ7 ಮತ್ತು ಎ6 ಮುಂತಾದ ಕಾರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆ ಅವರದ್ದು. ಕಂಪನಿಯು ಈ ವರ್ಷ ಸುಮಾರು 1.3 ಕೋಟಿ ರೂ. ದರದ 150 ಆರ್8 ಕಾರ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

More from DriveSpark

Article Published On: Tuesday, February 22, 2011, 12:33 [IST]
English summary
There has been a craze and passion to own a luxury car and the Indian luxury car market has the potential to feed the global players like BMW and Mercedes. Now Audi joins this elite club as more women go in for this car with the upper middle class family opting for a luxury car at its will.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+