ಹೋಂಡಾ ಅಕಾರ್ಡ್: ಮುದ್ದಾದ ಕಾರಿಗೆ ಮತ್ತೆ ಮೇಕಪ್ಪು

Honda Accord
ಹೋಂಡಾ ಅಕಾರ್ಡ್ ಇನ್ನಷ್ಟು ಸುಂದರವಾಗಿದೆ. ಕಾರಿನ ಎದುರು ಮತ್ತು ಹಿಂದುಗಡೆಯ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದ್ದು ಈಗ ಮಾರುಕಟ್ಟೆಯಲ್ಲಿ ಅಕಾರ್ಡ್ ನ ಅಪ್ ಗ್ರೇಡ್ ವರ್ಸನ್ ದೊರಕುತ್ತದೆ. ಎದುರಿನ ಬಂಪರ್, ಕಾರಿನ ಎದುರಿಗೆ ಹೊಸ ಗ್ರಿಲ್ ಅಳವಡಿಸಲಾಗಿದ್ದು ಕಾರಿನ ಲುಕ್ ಹೆಚ್ಚಿಸಿದೆ. ಕಾರಿನ ಹಿಂದಿನ ಭಾಗದಲ್ಲಿ ಟೇಲ್ ಲ್ಯಾಂಪ್, ಇಂಡಿಕೇಟರ್, ಒಆರ್ ವಿಎಂ, ಅಲಾಯ್ ವೀಲ್ ಗಳನ್ನು ಹೊಸದಾಗಿ ವಿನ್ಯಾಸ ಮಾಡಲಾಗಿದೆ. 2.4 ಲೀಟರ್ ಮತ್ತು ವಿ6 ಆವೃತ್ತಿಗಳೆರಡನ್ನೂ ಪರಿಷ್ಕರಿಸಲಾಗಿದೆ.

ಹೋಂಡಾ ಅಕಾರ್ಡ್ ಎಂಬುದು ಕಳೆದ 2008ರ ಮೇ ತಿಂಗಳಲ್ಲಿ ರಸ್ತೆಗಿಳಿದಾಗಲೇ ತನ್ನ ಆಕರ್ಷಕ ಲುಕ್ ನಿಂದ ಎಲ್ಲರ ಗಮನ ಸೆಳೆದಿತ್ತು. ಉದ್ದವಾದ ಬಾಡಿ ವಿನ್ಯಾಸ, ಬಾಗಿರುವ ಗ್ರಿಲ್ ಗಳು ಎಲ್ಲವೂ ಗ್ರಾಹಕರ ಮನಸೆಳೆದಿತ್ತು. ಈಗ ಮತ್ತೆ ಆ ಕಾರ್ ಗೆ ಸುಣ್ಣ ಬಣ್ಣ ಬಳಿಯಲಾಗಿದ್ದು ಮತ್ತಷ್ಟು ಆಕರ್ಷಕವಾಗಿದೆ. 2.4 ಲೀಟರ್ ನ ಅಕಾರ್ಡ್ 5 ಸ್ಪೋಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕುತ್ತದೆ. 3.5 ಲೀಟರ್ ನ ವಿ6 ಎಂಜಿನ್ ಹೊಂದಿರುವ ಅಕಾರ್ಡ್ ಅಡ್ವಾನ್ಸ್ ಡ್ ವೇರಿಯೆಬಲ್ ಸಿಲಿಂಡರ್ ಮ್ಯಾನೆಜ್ ಮೆಂಟ್ (ವಿಸಿಎಂ) ಸಿಸ್ಟಮ್ ಹೊಂದಿದೆ.

"ಹೋಂಡಾ ಅಕಾರ್ಡ್ ಹೆಚ್ಚು ಗೆಲುವು ಪಡೆದ ಕಂಪನಿಯ ಪ್ರೀಮಿಯಂ ಸೆಡಾನ್ ಕಾರಾಗಿದೆ. ದೇಶದ ರಸ್ತೆಗಿಳಿದಂದಿನಿಂದ ಇದು ಸುಮಾರು 25 ಸಾವಿರ ಯೂನಿಟ್ ಮಾರಾಟವಾಗಿದೆ. ತನ್ನ ಎಕ್ಸ್ ಕ್ಲೂಸಿವಿಟಿ, ಆರಾಮದಾಯಕತೆ ಮತ್ತು ಸುರಕ್ಷತೆಯ ಫೀಚರ್ ಗಳಿಂದ ಅಕಾರ್ಡ್ ಕಾರನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಐಷಾರಾಮಿ ಫೀಚರ್ ಗಳೊಂದಿಗೆ ಆಕರ್ಷಕವಾಗಿರುವ ಕಾರಿನ ಕುರಿತು ಗ್ರಾಹಕರು ಉತ್ತಮವಾದ ಫೀಡ್ ಬ್ಯಾಕ್ ವ್ಯಕ್ತಪಡಿಸುತ್ತಾರೆ" ಎಂದು ಕಂಪನಿಯ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಟಾಕಶಿ ನಾಗಯಿ ಹೇಳಿದ್ದಾರೆ.

ಹೋಂಡಾ ಅಕಾರ್ಡ್ ದೆಹಲಿ ಶೋರೂಂ ದರ
ಅಕಾರ್ಡ್ 2.4 (ಮ್ಯಾನುಯಲ್): 19.60 ಲಕ್ಷ ರೂಪಾಯಿ.
ಅಕಾರ್ಡ್ 2.4 (ಆಟೊಮ್ಯಾಟಿಕ್): 20.36 ಲಕ್ಷ ರೂ.
ಅಕಾರ್ಡ್ 3.5 ವಿ6: 25.41 ಲಕ್ಷ ರೂ.

Article Published On: Tuesday, February 22, 2011, 10:31 [IST]
English summary
Accord has been a great stylish Car since its introduction in May 2008. Now Honda has tweaked the car with a minor facelift. Honda Accord 2.4 MT price Rs.19.60 lakh, Accord 2.4 AT price Rs.20.36 lakh and Accord 3.5 V6 price Rs.25.41 lakh.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+