"ಹಿಟ್ ಆಂಡ್ ರನ್" ವಿಮಾ ಪರಿಹಾರ -ಭಾಗ 3

Hit and run Accident
ಮೊನ್ನೆ ಫೆಬ್ರವರಿ ಆರರಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಎಸ್. ಗಣೇಶ್ ಮತ್ತು ಆರ್ ಸಂತೋಷ್ ಎಂಬವರು ಬೈಕೊಂದರಲ್ಲಿ ಪ್ರಯಾಣಿಸುತ್ತಿದ್ದರು. ಅದು ರಾತ್ರಿ ಹೊತ್ತು. ಯಾವುದೋ ಅಪರಿಚಿತ ಗಾಡಿಯೊಂದು ಬಂದು ಹಿಂದಿನಿಂದ ಅವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಇದಕ್ಕೂ ಕೆಲವು ದಿನದ ಹಿಂದೆ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ರಸ್ತೆಯಲ್ಲಿ ಅಪರಿಚಿತ ವಾಹನವೊಂದಕ್ಕೆ ಸಿಲುಕಿ 59 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಕಳೆದ ತಿಂಗಳು ಮೈಸೂರಿನ ವ್ಯಕ್ತಿಯೊಬ್ಬರಿಗೆ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅದರಿಂದ ಅವರ ಕಾಲು ತುಂಡಾಗಿತ್ತು.

"ಹಿಟ್ ಆಂಡ್ ರನ್" ದಿನಾ ವರದಿಯಾಗುತ್ತಲೇ ಇರುತ್ತದೆ. ಮಕ್ಕಳು, ಮುದುಕರು, ಯುವಕರು ಎಲ್ಲರೂ ಇದಕ್ಕೆ ಬಲಿಯಾಗುತ್ತಾರೆ. ಅನಿರೀಕ್ಷಿತವಾಗಿ ಅಪಘಾತ ಮಾಡಿದ ವ್ಯಕ್ತಿ ಭಯದಿಂದಲೋ ಡಿಕ್ಕಿ ಹೊಡೆದ ನಂತರ ಪರಾರಿಯಾಗುವಂತಹ ಘಟನೆ ನಡೆಯುತ್ತಲೇ ಇರುತ್ತದೆ. ಅಪಘಾತಕ್ಕೀಡ ವ್ಯಕ್ತಿ ಸಾವನ್ನಪುತ್ತಾನೆ ಅಥವಾ ಗಾಯಗೊಂಡಿರುತ್ತಾನೆ. ಡಿಕ್ಕಿ ಹೊಡೆದ ಅಪರಾಧಿ ಪರಾರಿಯಾಗುತ್ತಾನೆ. ಇಂತಹ ಸಂದರ್ಭದಲ್ಲಿ ವಿಮಾ ಕಂಪನಿಗಳು ಅಪಘಾತಕ್ಕೆ ಒಳಗಾದವರಿಗೆ ಪರಿಹಾರ ನೀಡುತ್ತದೆಯೇ ಇಲ್ಲವೇ ಎಂಬುದು ಹೆಚ್ಚಿನವರ ಪ್ರಶ್ನೆ.

ವಿಮಾ ಪರಿಹಾರ ದೊರಕುತ್ತದೆಯೇ?: ಹಿಟ್ ಆಂಡ್ ರನ್ ಪ್ರಕರಣಗಳಲ್ಲಿಯೂ ಗಾಯಗೊಂಡಾತ ಅಥವಾ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 1988ರ ಮೋಟಾರ್ ವೆಹಿಕಲ್ ಕಾಯಿದೆ ಅನ್ವಯ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ಸ್(ಎಂಎಸಿಟಿ) ಪರಿಹಾರ ನೀಡುತ್ತದೆ. ಹಿಟ್ ಆಂಡ್ ರನ್ ಅಪಘಾತದಲ್ಲಿ ಅಪಘಾತ ಮಾಡಿದ ವ್ಯಕ್ತಿಯನ್ನು ಗುರುತಿಸಲಾಗದಿರುವುದಿಲ್ಲ. ಅಂದರೆ ಪಾದಚಾರಿಯೊಬ್ಬನಿಗೆ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಾರಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅಪಘಾತಕ್ಕೀಡದ ವ್ಯಕ್ತಿ ಪರಿಹಾರ ಧನ ಪಡೆಯಬಹುದು.

ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡಲು ಕೇಂದ್ರ ಸರಕಾರದ ಸ್ಕೀಮೊಂದರ ಮೂಲಕ ಪರಿಹಾರ ಪಡೆಯಲು ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ ಅವಕಾಶ ನೀಡಿದೆ. ಹಿಟ್ ಆಂಡ್ ರನ್ ನಿಂದ ಅಪಘಾತಕ್ಕೀಡಾದ ವ್ಯಕ್ತಿ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು. ಈ ಅಪ್ಲಿಕೇಷನ್ ಗೆ ಎಂಎಸಿಟಿ ಅನುಮೋದನೆ ನೀಡಿದ ನಂತರ ಜನರಲ್ ಇನ್ಶುರೆನ್ಸ್ ಕಾರ್ಪೋರೇಷನ್ ಪರಿಹಾರ ಧನ ಪಾವತಿಸುತ್ತದೆ. ಇಂತಹ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದರೆ 25 ಸಾವಿರ ರೂ. ಮತ್ತು ಗಂಭೀರ ಗಾಯಗೊಂಡರೆ 12,500 ರೂ. ಪರಿಹಾರ ನೀಡಲಾಗುತ್ತದೆ.

More from DriveSpark

Article Published On: Wednesday, February 23, 2011, 15:32 [IST]
English summary
A ‘hit and run’ motor accident means an accident involving a motor vehicle whose identity cannot be ascertained . In such cases, it is unfair to deny compensation to pedestrian on the ground that the respondent cannot be identified. Therefore, the Act empowers the central government to make a scheme to pay compensation in such cases.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+