ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರ್ ಗಳಿಗೆ ರಾಷ್ಟ್ರೀಯ ಮಿಷನ್ ಪ್ರಸ್ತಾಪ

ಪ್ರಸಕ್ತ 2011-12ರ ಮುಂಗಡ ಪತ್ರದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರ್ ಗಳಿಗೆ ರಾಷ್ಟ್ರೀಯ ಮಿಷನ್ ಸ್ಥಾಪಿಸುವ ಪ್ರಸ್ತಾಪವನ್ನು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಸರಕಾರದಿಂದ ಉತ್ತೇಜನ, ತೆರಿಗೆ ವಿನಾಯಿತಿ ದೊರಕುವ ನಿರೀಕ್ಷೆಯಿದೆ.

ದೇಶಿ ಹೈಬ್ರಿಡ್ ವಾಹನಗಳಿಗೆ ಉತ್ತೇಜನ: ಭಾರತದಲ್ಲಿ ಉತ್ಪಾದಿಸಿದ ಹೈಬ್ರಿಡ್ ವಾಹನಗಳಿಗೆ ವಿಶೇಷ ಉತ್ತೇಜನ ನೀಡುವುದಾಗಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಪ್ರಕಟಿಸಿದ್ದಾರೆ. ಇದರಿಂದಾಗಿ ದೇಶದ ಹೈಬ್ರಿಡ್ ವಾಹನ ತಯಾರಿಕಾ ಕಂಪನಿಗಳಿಗೆ ಒಂದಿಷ್ಟು ಬಲ ದೊರಕಿದಂತಾಗಿದೆ.

ಪರಿಸರ ಸ್ನೇಹಿ ವಾಹನ ಸೆಗ್ಮೆಂಟ್ ಗೆ ಪ್ರಸಕ್ತ ಬಜೆಟ್ ನಲ್ಲಿ ಹೆಚ್ಚಿನ ಉತ್ತೇಜನ ದೊರಕಬೇಕೆಂದು ಹಲವು ವಿಶ್ಲೇಷಕರು ತಿಳಿಸಿದ್ದರು. ಇಂತಹ ವಾಹನಗಳ ಆಮದಿಗೆ ಕಡಿಮೆ ಸುಂಕ ವಿಧಿಸುವುದು, ಖರೀದಿದಾರರಿಗೆ ಕಡಿಮೆ ಬಡ್ಡಿದರ, ವಿಶೇಷ ಸಾಲ ಸೌಲಭ್ಯ ಒದಗಿಸುವ ಮೂಲಕ ಉತ್ತೇಜನ ನೀಡುವ ಅಗತ್ಯವಿದೆ ಎಂದಿದ್ದರು.

ಜಾಗತಿಕ ತಾಪಮಾನ ಏರಿಕೆಯಾಗುವಲ್ಲಿ, ಓಝೋನ್ ಪರದೆಯಲ್ಲಿ ರಂಧ್ರವುಂಟಾಗುವಲ್ಲಿ ವಾಹನೋದ್ಯಮದ ಕೊಡುಗೆ ಅಪಾರ. ಒಟ್ಟಾರೆ ವಾಯುಮಾಲಿನ್ಯದಲ್ಲಿ ಕಾರ್, ಟ್ರಕ್ ಮತ್ತು ಇತರ ವಾಹನಗಳ ಕೊಡುಗೆ ಅರ್ಧದಷ್ಟಿದೆ. ಹೀಗಾಗಿ ಹೈಬ್ರಿಡ್ ವಾಹನಗಳ ಬಳಕೆ ಹೆಚ್ಚಾದಂತೆ ಹವಾಮಾನ ಮಾಲಿನ್ಯ ನಿಯಂತ್ರಿಸಬಹುದು. ಇಂಧನ ದರದ ನಾಗಲೋಟ ಮತ್ತು ಪರಿಸರ ಸ್ನೇಹಿ ಫೀಚರ್ ಗಳಿಂದ ಹೆಚ್ಚಿನ ಜನರಿಗೆ ಹೈಬ್ರಿಡ್ ಕಾರ್ ಇಷ್ಟವಾಗುತ್ತಿದೆ.

Most Read Articles

Kannada
English summary
Finance Minister Pranab Mukarji announces the start of 'National Mission on Hybrid and Electric Cars' in Budget 2011-12. And he announcing Special incentives for hybrid vehicles made in India.
Story first published: Monday, February 28, 2011, 13:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X