ಟಾಟಾದ ಮೂರು ಡೋರಿನ ಹೊಸ ನ್ಯಾನೊ ಆವೃತ್ತಿ- ಪಿಕ್ಸೆಲ್

Nano PIXEL
ಅಗ್ಗದ ದರದ ಪುಟ್ಟ ಕಾರ್ ನ್ಯಾನೊ ಮೇಲಿನ ಮೋಹ ಟಾಟಾ ಮೋಟರ್ಸ್ ಗಿನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ನ್ಯಾನೊ ಕಾರಿನ ನೂತನ ಆವೃತ್ತಿ "ಪಿಕ್ಸೆಲ್' ನ್ನು ಜಿನಿವಾ ಕಾರ್ ಪ್ರದರ್ಶನದಲ್ಲಿ ಕಂಪನಿಯು ಅನಾವರಣ ಮಾಡಿದೆ. ವಿಶೇಷವೆಂದರೆ ಈ ಕಾರಿಗೆ ಕೇವಲ ಮೂರೇ ಡೋರ್. ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನ್ಸೆಪ್ಟ್ ಕಾರನ್ನು ಕಂಪನಿಯು ವಿನ್ಯಾಸ ಮಾಡಿದೆ.

ನ್ಯಾನೊ ಕಾರ್ ನ ಮೂರು ಮೀಟರ್ ಉದ್ದದ ವಿನ್ಯಾಸದಲ್ಲಿ ಈ ಕಾನ್ಸೆಪ್ಟ್ ಒಂದಿಷ್ಟು ಆಕರ್ಷಕವಾಗಿದೆ. ಇದರಲ್ಲಿ ಇಂಟಿರಿಯರ್ ಸ್ಥಳಾವಕಾಶ ಹೆಚ್ಚಿದ್ದು ಐರೋಪ್ಯ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ರೂಪಿಸಲಾಗಿದೆ ಎಂದು ಟಾಟಾ ಮೋಟರ್ಸ್ ಹೇಳಿದೆ. ನೋಡಲು ನ್ಯಾನೊ ಯುರೋಪ ಎಂಬ 5 ಡೋರ್ ಕಾನ್ಸೆಪ್ಟ್ ಕಾರಿನಂತಿದೆ. ನೂತನ ಪಿಕ್ಸೆಲ್ ಗೆ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಕಾಣುವ ನಿರೀಕ್ಷೆಯನ್ನು ಕಂಪನಿಯ ಹಿರಿಯ ಸಂಘಟಕರೊಬ್ಬರು ವ್ಯಕ್ತಪಡಿಸಿದ್ದಾರೆ.

ಹೊಸ ನ್ಯಾನೊ ಕಾರ್ "ಪಿಕ್ಸೆಲ್"ನ ಪವರ್ ಟ್ರೈನ್ ಸೇರಿದಂತೆ ಟೆಕ್ ಮಾಹಿತಿಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಇದರ ದರ, ಮೈಲೇಜ್ ವಿಷಯವನ್ನೂ ಹೇಳಲಾಗಿಲ್ಲ. ಈ ಕಾನ್ಸೆಪ್ಟ್ ಕಾರ್ 2013ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಯನ್ನು ಕಂಪನಿಯ ಮೂಲಗಳು ವ್ಯಕ್ತಪಡಿಸಿವೆ. ಕಂಪನಿಯ ಅಗ್ಗದ ಕಾರ್ ನ್ಯಾನೊಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಕಂಪನಿ ತೊಡಗಿದೆ.

More from DriveSpark

Article Published On: Tuesday, March 1, 2011, 11:30 [IST]
English summary
Tata Motors is very soon coming out with a new version of its compact platform under Nano, called PIXEL to be sole product for the European markets.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+