ಮೂವರು ಭಾರತೀಯರೊಂದಿಗೆ ಬಿಎಂಡಬ್ಲ್ಯು ಮೈತ್ರಿ

ಮೈಸಿಟಿವೇ ಎಂಬುದು ಆಹಾರದಿಂದ ಹಿಡಿದು ಮನರಂಜನೆವರೆಗೆ ಪ್ರಯಾಣದಲ್ಲಿ ಮಾರ್ಗದರ್ಶನ, ಸೂಕ್ತ ಪ್ರದೇಶಗಳ ಮಾಹಿತಿ ನೀಡುವ ಅಪ್ಲಿಕೇಷನ್. ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು ಬಿಎಂಡಬ್ಲ್ಯುನ ಮಾರುಕಟ್ಟೆ ವಿಭಾಗದ ಲ್ಯಾನ್ ರಾಬರ್ಟ್ ಸನ್. ಪ್ರಯಾಣದಲ್ಲಿ ಕಂಪನಿಯ ಗ್ರಾಹಕರಿಗೆ ಸರಿಯಾದ ಮಾಹಿತಿಯನ್ನು ನೀಡುವ ಕಾನ್ಸೆಪ್ಟ್ ಹೊಂದಿರುವ ಅಪ್ಲಿಕೇಷನ್ ಇದಾಗಿದೆಯೆಂದು ಅವರು ಹೇಳಿದ್ದಾರೆ. ಅತ್ಯಂತ ಪ್ರಮುಖವಾಗಿ ಪಾರ್ಕಿಂಗ್ ಸೌಲಭ್ಯ, ಮನರಂಜನೆ ಸೇರಿದಂತೆ ಅಮೆರಿಕದ ಸುಮಾರು 40 ನಗರಗಳಲ್ಲಿ ಇದು ಕಾರ್ಯ ನಿರ್ವಹಿಸಲಿದೆ ಎಂದರು. ಮ್ಯೂನಿಚ್ ಸೇರಿದಂತೆ ಜಾಗತಿಕವಾಗಿ ಮತ್ತೆ 40 ಪ್ರದೇಶಗಳನ್ನು ವ್ಯಾಪಿಸುವ ಗುರಿಯನ್ನೂ ಕಂಪನಿ ಹೊಂದಿದೆ ಎಂದಿದ್ದಾರೆ.
ನೂತನ ಅಪ್ಲಿಕೇಷನ್ ನ್ನು ಐಪ್ಯಾಡ್, ಐಫೋನ್, ಆಂಡ್ರಾಯ್ಡ್ ಮತ್ತು ಬ್ಲ್ಯಾಕ್ ಬೆರಿಗೆ ಅಳವಡಿಸಿಕೊಳ್ಳಬಹುದಾಗಿದೆ. ಭಾರತದ ನಾಲ್ಕು ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ ಮತ್ತು ದೆಹಲಿಗೂ ಇದನ್ನು ಅಳವಡಿಸಲಾಗುವುದು ಎಂದು ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದವರು ತಿಳಿಸಿದ್ದಾರೆ. ಇವರು ಮೂವರು ಕಳೆದ ವರ್ಷ ನ್ಯೂಯಾರ್ಕ್ ನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಎನ್ ವೈಸಿ ವೇ ಎಂಬ ಟ್ರಾವೆಲ್ ಅಪ್ಲಿಕೇಷನ್ ಪರಿಚಯಿಸಿದ್ದರು. ನೂತನ ಅಪ್ಲಿಕೇಷನ್ ಟ್ರಾಫಿಕ್ ಮಾಹಿತಿ, ರೆಸ್ಟೂರೆಂಟ್ ಮಾಹಿತಿ, ಸ್ಥಳೀಯ ಅಪರಾಧ ದಾಖಲೆಗಳು ಮತ್ತು ವೈ-ಫೈ ಲೊಕೆಷನ್ ಮಾಹಿತಿಗಳನ್ನು ನೀಡುತ್ತದೆ.


Click it and Unblock the Notifications







