ಟೊಯೊಟಾ ಆಯ್ತು, ಈಗ ಫೋರ್ಡ್ ಸರದಿ- ರಿಕಾಲ್ ಪರ್ವ

Ford
ಪ್ರಮುಖ ಜಾಗತಿಕ ಕಂಪನಿಗಳ ವಾಹನ ಹಿಂಪಡೆತ ಸ್ಟೋರಿ ಮುಂದುವರೆದಿದೆ. ಈ ಹಿಂದೆ ಟೊಯೊಟಾ ಕಂಪನಿಯು ಲಕ್ಷ ಲಕ್ಷ ಸಂಖ್ಯೆಯ ಕಾರ್ ಗಳನ್ನು ವಾಪಸ್ಸು ಪಡೆದಿತ್ತು. ಈಗ ಫೋರ್ಡ್ ಸರದಿ. ಕಂಪನಿಯು ತನ್ನ ಟ್ರಕ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆನಡ ಮತ್ತು ಅಮೆರಿಕದಲ್ಲಿ ಸುಮಾರು 25 ಸಾವಿರ ಟ್ರಕ್ ಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಎರಡು ಟ್ರಕ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಫೋರ್ಡ್ ಈ ನಿರ್ಧಾರಕ್ಕೆ ಬಂದಿದೆ. ಆದರೆ ಮಾರುಕಟ್ಟೆಗೆ ಬಿಟ್ಟಿರುವ ನೂತನ ಮಾದರಿಗಳನ್ನು ಹಿಂಪಡೆಯಲಾಗುವುದಿಲ್ಲವೆಂದು ಕಂಪನಿ ತಿಳಿಸಿದ್ದು, ಸುಮಾರು 25 ಸಾವಿರದಷ್ಟು ಫೋರ್ಡ್ ರೇಂಜರ್ಸ್ ಟ್ರಕ್ ಗಳನ್ನು ವಾಪಸ್ಸು ಪಡೆಯಲಾಗುವುದಾಗಿ ಸ್ಪಷ್ಟಪಡಿಸಿದೆ. ಎಂಜಿನ್ ಸಾಧನವೊಂದಕ್ಕೆ ಕವರ್ ಮಾಡದೇ ಇರುವುದರಿಂದ ಅದು ಇಂಧನ ಲೀಕೆಜ್ ಆದಾಗ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಕಂಪನಿ ತಿಳಿಸಿದೆ.

ಇದಕ್ಕೂ ಮುನ್ನ ಜಪಾನಿನ ಬೃಹತ್ ವಾಹನ ತಯಾರಿಕಾ ಕಂಪನಿ ಜಾಗತಿಕವಾಗಿ ಸುಮಾರು 90 ಲಕ್ಷ ವಾಹನಗಳನ್ನು ವಾಪಸ್ಸು ಪಡೆಯಲು ನಿರ್ಧರಿಸಿತ್ತು. 2009ರಿಂದ 2010ರ ಫೆಬ್ರವರಿವರೆಗೆ ಖರೀದಿಸಿದ ಕಂಪನಿಯ ವಾಹನಗಳ ಇಂಧನ ಪೈಪ್ ನಲ್ಲಿ ತೊಂದರೆ ಸರಿಪಡಿಸಲು ಕಂಪನಿ ಈ ನಿರ್ಧಾರಕ್ಕೆ ಬಂದಿತ್ತು. ಎಂಜಿನ್ ಸಮಸ್ಯೆಯ ಹಿನ್ನಲೆಯಲ್ಲಿ ಹೋಂಡಾ ಮೋಟರ್ಸ್ ಕೂಡ ತನ್ನ ಸಿಟಿ ಸೆಡಾನ್ ಕಾರ್ ಗಳನ್ನು ಹಿಂಪಡೆಯಲು ನಿರ್ಧರಿಸಿತ್ತು.

More from DriveSpark

Article Published On: Friday, March 4, 2011, 14:22 [IST]
English summary
The continued story of recalls from major global players is again on the newsstands. This time it is Ford which went into the trap after its trucks involved in fire incidents.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+