ಈ ಗ್ಯಾಜೆಟ್ ಗಳು ನಿಮ್ಮ ಕಾರಿನಲ್ಲಿವೆಯಾ? ಚೆಕ್ ಮಾಡಿ

ಆಟೋ ಎಲ್ಇಡಿ
ಕಾರಿನೊಳಗೊಂದು ಎಲ್ಇಡಿ ಫ್ಲಾಷ್ ಲೈಟ್ ಇರಲಿ. ಇದರಿಂದ ನ್ಯಾವಿಗೇಷನ್ ಮ್ಯಾಪ್ ಮುಂತಾದವುಗಳನ್ನು ಯಾವುದೇ ತೊಂದರೆಯಾಗುವುದಿಲ್ಲ. ಇಂತಹ ಎಲ್ಎಡಿ ಫ್ಲಾಷ್ ಲೈಟ್ ಗಳನ್ನು ಸುಲಭವಾಗಿ ಚಾರ್ಜ್ ಕೂಡ ಮಾಡಬಹುದಾಗಿದೆ.
ಆಂಟಿ-ಸ್ಲೀಪ್ ಡ್ರೈವಿಂಗ್ ಅಲಾರಂ
ರಾತ್ರಿ ಪ್ರಯಾಣಿಸುವರಿಗೆ ಇದು ಸೂಕ್ತ ಗ್ಯಾಜೆಟ್. ಡ್ರೈವಿಂಗ್ ಮಾಡುತ್ತ ತೂಕಡಿಕೆ ಬಂದರೆ ಈ ಅಲಾರಂ ಎಚ್ಚರಿಸುತ್ತದೆ. ಅಂದರೆ ನಿಮ್ಮ ತಲೆ ಮಂಪರು ಹಿಡಿದು 30 ಡಿಗ್ರಿಗಿಂತ ಹೆಚ್ಚು ವಾಲಿದರೆ ಕಿವಿಯಲ್ಲಿ ಸಿಕ್ಕಿಸಿಟ್ಟ ಪುಟ್ಟ ಸಾಧನದ ಅಲಾರಂ ಹೊಡೆದುಕೊಳ್ಳುತ್ತದೆ. ಈ ಸಣ್ಣ, ಹಗುರ ಸಾಧನ ರಾತ್ರಿ ಡ್ರೈವಿಂಗ್ ಮಾಡುವರಿಗೆ ಅತ್ಯಂತ ಅಗತ್ಯವೂ ಹೌದು.
ಡಿವಿಡಿ ಎಂಟರ್ ಟೇನ್ ಮೆಂಟ್ ಸಿಸ್ಟಮ್
ಡಿವಿಡಿ ಎಂಟರ್ ಟೇನ್ ಸಿಸ್ಟಮ್ ಮೂಲಕ ಡ್ರೈವಿಂಗ್ ಮಾಡುತ್ತ ಇಷ್ಟದ ಟಿವಿ ಶೋಗಳನ್ನು ನೋಡಬಹುದು, ಇಷ್ಟದ ಮ್ಯೂಸಿಕ್ ಆಲಿಸಬಹುದು. ಇಮೇಲ್ ಇತ್ಯಾದಿಗಳನ್ನು ಪ್ರಯಾಣದಲ್ಲಿಯೇ ಚೆಕ್ ಮಾಡಬಹುದು. ಆದರೆ ಡ್ರೈವಿಂಗ್ ಮಾಡುತ್ತ ಟಿವಿ ಶೋ ನೋಡುವಾಗ ರಸ್ತೆಯ ಮೇಲೆ ಗಮನವಿರಲಿ.
ಜಿಪಿಎಸ್
ಜಿಪಿಎಸ್ ಎಂಬುದು ಅಪರಿಚಿತ ಊರಿನಲ್ಲಿ ಮಾರ್ಗದರ್ಶಕ. ಸ್ಯಾಟಲೈಟ್ ನೆರವಿನಿಂದ ಇದು ಕಾರ್ಯ ನಿರ್ವಹಿಸುತ್ತದೆ. ನಿಮಗೆ ಹೋಗಬೇಕಾದ ಸ್ಥಳ, ಅಲ್ಲಿರುವ ಪ್ರಮುಖ ತಾಣಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ದಾರಿತೋರಿಸುವುದರೊಂದಿಗೆ ಇಂತಹ ಜಿಪಿಎಸ್ ಸಾಧನಗಳಲ್ಲಿ ಬೇಕಾದಷ್ಟು ಮನರಂಜನೆ ಸಾಧನಗಳು ಇರುತ್ತವೆ. ಅಂದರೆ ಗೇಮ್ಸ್ ಆಡಬಹುದು, ವಿಡಿಯೋ ವೀಕ್ಷಿಸಬಹುದು, ಸಂಗೀತ ಆಲಿಸಬಹುದು, ಟೆಕ್ಸ್ಟ್ ದಾಖಲೆಗಳನ್ನು ಓದಬಹುದು, ಬ್ಲೂಟೂಥ್ ಮೂಲಕ ಕರೆ ಸ್ವೀಕರಿಸಬಹುದಾಗಿದೆ. ಇದಕ್ಕೆ ಮೊಬೈಲ್ ಫೋನ್ ಸಂಪರ್ಕ ಕಲ್ಪಿಸಬಹುದಾಗಿದ್ದು, ಈ ಸಾಧನದಲ್ಲಿಯೇ ಕರೆ ಮಾಡಬಹುದು, ಕರೆ ಸ್ವೀಕರಿಸಬಹುದು, ಅಡ್ರೆಸ್ ಬುಕ್ ವೀಕ್ಷಿಸಬಹುದಾಗಿದೆ.


Click it and Unblock the Notifications







