ಷೆವರ್ಲೆ ಮತ್ತೆ ದುಬಾರಿ, ಎರಡನೇ ಬಾರಿ ದರ ಹೆಚ್ಚಳ

Car Price Hike in 2011
ವಾಹನ ಕಂಪನಿಗಳಿಗೆ ದರ ಹೆಚ್ಚಿಸುವುದತ್ತ ಹೊರತು ಬೇರಾವ ದಾರಿಗಳು ಕಾಣಿಸುತ್ತಿಲ್ಲ. ದಿನೇ ದಿನೇ ರಬ್ಬರ್, ಲೋಹ ದರಗಳು ಗಗನಕ್ಕೆ ಮುಖ ಮಾಡುತ್ತಿರುವುದರಿಂದ ವಾಹನ ದರ ಹೆಚ್ಚಿಸುವುದೋ, ಹೆಚ್ಚಿಸದಿರುವುದೋ ಎಂಬ ಧರ್ಮ ಸಂಕಟಕ್ಕೆ ಸಿಲುಕಿವೆ. ಈ ನಡುವೆ ಅಮೆರಿಕದ ಬೃಹತ್ ವಾಹನ ತಯಾರಿಕಾ ಕಂಪನಿ ಜನರಲ್ ಮೋಟರ್ಸ್ ತನ್ನ ಭಾರತದ ಬ್ರಾಂಡ್ ಗಳ ದರಗಳನ್ನು ಮುಂದಿನ ತಿಂಗಳು ಬಹುತೇಕ ಹೆಚ್ಚಿಸುವ ನಿರೀಕ್ಷೆಯಿದೆ.

ಅಂದಹಾಗೇ ಜನರಲ್ ಮೋಟರ್ಸ್ ಭಾರತದಲ್ಲಿ ದರ ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಪ್ರಸಕ್ತ ವರ್ಷದ ಜನವರಿಯಲ್ಲಿಯೇ ತನ್ನೆಲ್ಲ ಷೆವರ್ಲೆ ಬ್ರಾಂಡ್ ಗಳ ದರವನ್ನು ಶೇ. 2ರಷ್ಟು ಹೆಚ್ಚಿಸಿತ್ತು. "ಕಂಪನಿಯು ಈ ತಿಂಗಳ ಅಂತ್ಯದವರೆಗೆ ಕಾದು ನೋಡಲಿದ್ದು, ಕಚ್ಚಾ ವಸ್ತುಗಳ ದರ ಇಳಿಕೆ ಕಾಣದಿದ್ದರೆ ಮುಂದಿನ ತಿಂಗಳ ಆರಂಭದಲ್ಲಿಯೇ ವಾಹನ ದರಗಳನ್ನು ಹೆಚ್ಚಿಸಲಾಗುವುದು" ಎಂದು ಜನರಲ್ ಮೋಟರ್ಸ್ ಇಂಡಿಯಾ ಉಪಾಧ್ಯಕ್ಷ ಪಿ ಬಾಲೆಂದ್ರನ್ ಹೇಳಿದ್ದಾರೆ.

"ಲೋಹ ಮತ್ತು ರಬ್ಬರ್ ದರಗಳಿಂದು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಹೀಗಾಗಿ ಎಲ್ಲ ವಾಹನ ಕಂಪನಿಗಳು ದರ ಹೆಚ್ಚಿಸುವ ಒತ್ತಡಕ್ಕೆ ಸಿಲುಕಿವೆ" ಎಂದಿದ್ದಾರೆ. ಈಗ ಕಂಪನಿಯು ಸುಮಾರು 8 ಷೆವರ್ಲೆ ಬ್ರಾಂಡ್ ಮಾರಾಟ ಮಾಡುತ್ತಿದೆ. ಷೆವರ್ಲೆ ಸ್ಪಾರ್ಕ್, ಆವಿಯೋ ಯುವಿಎ, ಆವಿಯೋ, ಆಪ್ಟ್ರಾ, ತವೆರಾ, ಕ್ಯಾಪ್ಟಿವಾ, ಕ್ರೂಝ್ ಮತ್ತು ಇತ್ತೀಚಿನ ಕಾಂಪ್ಯಾಕ್ಟ್ ಕಾರ್ ಬೀಟ್ ನ್ನು ಕಂಪನಿ ಮಾರಾಟ ಮಾಡುತ್ತಿದೆ. ಕಂಪನಿಯು ಶೀಘ್ರದಲ್ಲಿ ಐಕಾನಿಕ್ ಕ್ಯಾಡಿಲಾಕ್ ಕಾರನ್ನು ದೇಶಕ್ಕೆ ಪರಿಚಯಿಸಲಿದೆ.

More from DriveSpark

Article Published On: Tuesday, March 8, 2011, 10:10 [IST]
English summary
General Motors is likely to increase prices for the second time this year to offset surging raw material costs. GM India had raised car prices across all models by 2% in January this year. General Motors plans to launch its iconic Cadillac in the country soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+