ಸರತಿಯಲ್ಲಿ ಎ1, ಎ3, ಕ್ಯೂ3; ಆಡಿ ದಶಕದ ಕನಸು

Audi India
ಜರ್ಮನಿಯ ಕಾರ್ ತಯಾರಿಕಾ ಕಂಪನಿ ಆಡಿ ಭಾರತದಲ್ಲಿ ದಶಕದ ಕನಸೊಂದನ್ನು ಬಿಚ್ಚಿಟ್ಟಿದೆ. 2020ರ ವೇಳೆಗೆ ಇಲ್ಲಿ ಸುಮಾರು 30 ಸಾವಿರ ಕಾರ್ ಮಾರಾಟದ ಕನಸು. ಭಾರತದಲ್ಲಿ ಗರಿಷ್ಟ ಲಕ್ಷುರಿ ಕಾರ್ ಮಾರಾಟದ ಮೂಲಕ ಕಂಪನಿಯ ಟಾಪ್ ಟೆನ್ ದೇಶಗಳೊಂದಿಗೆ ಸೇರಿಸುವ ಬಯಕೆ ಆಡಿಯದ್ದು. ಈ ಗುರಿಯನ್ನು ತಲುಪಲು ಕಂಪನಿಯ ಹಲವು ಕಾರ್ ಗಳು ಸರತಿ ಸಾಲಿನಲ್ಲಿವೆ.

ಕಂಪನಿಯು ಹ್ಯಾಚ್ ಬ್ಯಾಕ್ ಕಾರ್ ಎ1, ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕ್ಯೂ3 ಮತ್ತು ಎ3 ಎಂಬ ಸೆಡಾನ್ ಕಾರನ್ನು ಹೊರತರಲಿದೆ. ಇದರಲ್ಲಿ ಎರಡು ಆವೃತ್ತಿಗಳು ಈ ವರ್ಷವೇ ರಸ್ತೆಗಿಳಿಯುವ ನಿರೀಕ್ಷೆಗಳಿವೆ.2020ರ ವೇಳೆಗೆ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸುಮಾರು 25 ಸಾವಿರದಿಂದ 30 ಸಾವಿರ ಕಾರ್ ಮಾರಾಟ ಮಾಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿಯ ಎಜಿ ಮಂಡಳಿ ಸದಸ್ಯರೊಬ್ಬರು ಹೇಳಿದ್ದಾರೆ. ಇದರಿಂದ ಭಾರತದ ಮಾರುಕಟ್ಟೆ ಕಂಪನಿಯ ಟಾಪ್ 10 ಲಿಸ್ಟ್ ಗೆ ಸೇರಲಿದೆ.

2010ರ ವರ್ಷದಲ್ಲಿ ಆಡಿ ಇಂಡಿಯಾ ದೇಶದಲ್ಲಿ 3,003 ಕಾರ್ ಮಾರಾಟ ಮಾಡಿತ್ತು. ಇದು ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 81ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷ ಕಂಪನಿಯು ಸುಮಾರು 4,500 ವಾಹನ ಮಾರಾಟಕ್ಕೆ ಯೋಜಿಸಿದೆ. 2015ಕ್ಕೆ ಸುಮಾರು 15 ಸಾವಿರ ಕಾರ್ ಮಾರಾಟ ಮಾಡುವ ಗುರಿ ಕಂಪನಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಮುಂದಿನ 12ರಿಂದ 15 ತಿಂಗಳಲ್ಲಿ ನೂತನ ಕಾರ್ ಗಳಾದ ಎ1, ಎ3 ಮತ್ತು ಕ್ಯೂ3 ಮಾಡೆಲ್ ಗಳನ್ನು ಭಾರತದಲ್ಲಿ ಹೊರತರಲಾಗುವುದು ಎಂದರು.

ಇದರೊಂದಿಗೆ ಕಂಪನಿಯು ಈ ವರ್ಷ ಸೆಡಾನ್ ಕಾರ್ ಎ7, ಎ6 ಹೊರತರಲಿದೆ. ಜೊತೆಗೆ ಸ್ಪೋರ್ಟ್ಸ್ ಆವೃತ್ತಿ ಆರ್ 8 ಕೂಡ ರಸ್ತೆಗಿಳಿಯಲಿದೆ. ಈ ಕಾರ್ ಗಳನ್ನೆಲ್ಲ ಕಂಪನಿ ಭಾರತಕ್ಕೆ ಆಮದು ಮಾಡಿಕೊಳ್ಳುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಜಾಗತಿಕ ಮಾರುಕಟ್ಟೆಗೆ ಕಂಪನಿಯು ಹೈಬ್ರಿಡ್ ಆವೃತ್ತಿ ಎಸ್ ಯುವಿ ಕ್ಯೂ 5 ಕಾರನ್ನು ಪರಿಚಯಿಸಲಿದೆ. ಭಾರತದಲ್ಲಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆಂಡ್ ಡಿ) ವಿಭಾಗ ವನ್ನು ತೆರೆಯುವ ಯೋಜನೆಯಿಲ್ಲ ವೆಂದು ಎಜಿ ಬೋರ್ಡ್ ಸದಸ್ಯರು ಹೇಳಿದ್ದಾರೆ.

More from DriveSpark

Article Published On: Thursday, March 10, 2011, 16:23 [IST]
English summary
With the sale figure expected to rise by 10% the German car maker Audi is coming out with its plans to sell 30000 units by this decade end making Asian market into the top ten markets in the world. To meet these sort of targets, the company is initiating with the launch of a new hatchback A1, the ensuing SUV Q3 and A3 concept sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+