ಫೋರ್ಡ್ ಫಿಗೊ ಸವಾರಿ ಎತ್ತ ಹೊರಟಿದೆ?

image-10-figo.jpg kannada.drivespark.com}ಫೋರ್ಡ್ ಇಂಡಿಯಾ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಕಂಪನಿಯು ಫಿಗೊ ಕಾರನ್ನು ಮಧ್ಯಪ್ರಾಚ್ಯ, ಮೆಕ್ಸಿಕೊ, ಕೆರಿಬಿಯನ್ ಮತ್ತು ಉತ್ತರ ಆಫ್ರಿಕಾದತ್ತ ರಫ್ತು ಮಾಡಲು ನಿರ್ಧರಿಸಿದೆ. ಇದರಿಂದಾಗಿ ಜಾಗತಿಕವಾಗಿ ಕಂಪನಿಯ ಸಣ್ಣ ಕಾರಿಗೆ ಭಾರತ ರಫ್ತು ಹಬ್ ಆಗಲಿದೆ. ಇದರೊಂದಿಗೆ ಫೋರ್ಡ್ ಇಂಡಿಯಾ 2015ರ ಮುನ್ನ ಭಾರತದಲ್ಲಿ ಸುಮಾರು 8 ಹೊಸ ಕಾರ್ ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಸಣ್ಣ ಕಾರ್ ಫಿಗೊ ಗೆಲುವಿನ ಹುಮ್ಮಸ್ಸಿನಲ್ಲಿರುವ ಫೋರ್ಡ್ ಇಂಡಿಯಾ ದೇಶದಲ್ಲಿ ವಿನೂತನ ಕಾರ್ಯ ತಂತ್ರಗಳನ್ನು ರೂಪಿಸತೊಡಗಿದೆ.

"ಫಿಗೊ ಕಾರನ್ನು ಇಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಬೇರಾವ ದೇಶಗಳಲ್ಲೂ ಉತ್ಪಾದಿಸಲಾಗುವುದಿಲ್ಲ. ಫಿಗೊ ಕಾರಿಗೆ ಭಾರತ ಸಣ್ಣ ಹಬ್ ಆಗಿದೆ " ಎಂದು ಫೋರ್ಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರು ಹೇಳಿದ್ದಾರೆ. "ಯಾವುದೇ ರಾಷ್ಟ ಫಿಗೊ ಕಾರ್ ಬಯಸಿದ್ದರೆ ರಫ್ತಿಗೆ ಕಂಪನಿ ಸಿದ್ದವಾಗಿದೆ. ಮುಂದಿನ ಎರಡು ವಾರಗಳಲ್ಲಿ ಕಂಪನಿಯು ಸುಮಾರು 1,500 ಫಿಗೊ ಕಾರನ್ನು ಮೆಕ್ಸಿಕೊ ದೇಶಕ್ಕೆ ರಫ್ತು ಮಾಡಲಿದೆ. ಇತರ ಮಾರುಕಟ್ಟೆಗಳಿಗೂ ಬೇಡಿಕೆಗೆ ಅನುಗುಣವಾಗಿ ಸಣ್ಣ ಕಾರ್ ರಫ್ತು ಮಾಡಲಾಗುವುದು" ಎಂದಿದ್ದಾರೆ.

ದಕ್ಷಿಣ ಭಾರತ ಮತ್ತು ನೇಪಾಲ ಸೇರಿದಂತೆ, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಕೆರಿಬಿಯನ್ ದೇಶಗಳಿಗೂ ಫಿಗೊ ರಫ್ತು ಮಾಡಲಾಗುವುದು ಎಂದರು. ಕಂಪನಿಯು ಜನವರಿಯಲ್ಲಿ ಸುಮಾರು 10 ಸಾವಿರ ಯೂನಿಟ್ ಮಾರಾಟದ ಮೂಲಕ ಭಾರತದ ವಾಹನ ಮಾರುಕಟ್ಟೆಯಲ್ಲಿ ನಾಲ್ಕನೇ ಬೃಹತ್ ಸ್ಥಾನವನ್ನು ಪಡೆದಿದೆ. ಮಾರುತಿ, ಹ್ಯುಂಡೈ ಮತ್ತು ಟಾಟಾ ಮೋಟರ್ಸ್ ಇದಕ್ಕಿಂತ ಮೊದಲ ಸ್ಥಾನಗಳನ್ನು ಪಡೆದಿವೆ.

More from DriveSpark

Article Published On: Thursday, March 10, 2011, 11:42 [IST]
English summary
Ford India is all set for expanding its operations out of the country and has devised its plan to export its Figo to Middle East, Mexico, Caribbean and North Africa.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+