ಭಾರತ ಮತ್ತು ಜಾಗತಿಕವಾಗಿ ಬಿಎಂಡಬ್ಲ್ಯು ಎರಡು ಕನಸು

BMW India
ಜರ್ಮನಿಯ ಐಷಾರಾಮಿ ಕಾರ್ ತಯಾರಿಕಾ ಕಂಪನಿ ಬಿಎಂಡಬ್ಲ್ಯು ಈ ವರ್ಷ ಜಾಗತಿಕವಾಗಿ ಸುಮಾರು 16 ಲಕ್ಷ ವಾಹನ ಮಾರಾಟದ ಗುರಿ ಹೊಂದಿದೆ. ಇದರೊಂದಿಗೆ ಕಂಪನಿಯು ಭಾರತದಲ್ಲಿನ ಕಾರ್ ಮಾರಾಟದಲ್ಲೂ ಎರಡಂಕಿ ಪ್ರಗತಿ ಕಾಣುವ ಕನಸು ಹೊಂದಿದೆ. ಇಲ್ಲಿ ಕಂಪನಿಯು ಕಳೆದ ವರ್ಷ ಸುಮಾರು 6,246 ಕಾರ್ ಮಾರಾಟ ಮಾಡಿತ್ತು.

ಬಿಎಂಡಬ್ಲ್ಯು ಕಳೆದ ವರ್ಷ ಸುಮಾರು 6,047 ಕೋಟಿ ಯುರೋ ಆದಾಯ ಗಳಿಸಿತ್ತು. ಇದೇ ಸಮಯದಲ್ಲಿ ಕಂಪನಿಯ ನಿವ್ವಳ ಲಾಭ 32.34 ಕೋಟಿ ಯುರೋ ಆಗಿತ್ತು. ಭಾರತದಲ್ಲಿ ಮಾರಾಟವಿನ್ನೂ ಕಡಿಮೆ ಮಟ್ಟದಲ್ಲಿರುವುದರಿಂದ ಇಲ್ಲಿ ಪೂರ್ಣಪ್ರಮಾಣದ ಘಟಕ ನಿರ್ಮಿಸಲು ಇನ್ನೊಂದಿಷ್ಟು ಸಮಯ ಬೇಕಾಗಬಹುದೆಂದು ಕಂಪನಿ ತಿಳಿಸಿದೆ.

"ಕಂಪನಿಯು 2010ರಲ್ಲಿ ಜಾಗತಿಕವಾಗಿ 14.6 ಲಕ್ಷ ವಾಹನ ಮಾರಾಟ ಮಾಡಿದೆ. ಈ ವರ್ಷ ಸುಮಾರು 15 ಲಕ್ಷ ವಾಹನ ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಬಿಎಂಡಬ್ಲ್ಯು, ಮಿನಿ ಮತ್ತು ರೋಲ್ಸ್ ರಾಯ್ಸ್ ಎಂಬ ಮೂರು ಬ್ರಾಂಡ್ ಮೂಲಕ ಕಂಪನಿಯು ಹೊಸ ದಾಖಲೆ ಮಾಡಲಿದೆ" ಎಂದು ಬಿಎಂಡಬ್ಲ್ಯು ಚೇರ್ಮನ್ ನೊಬಾರ್ಟ್ ರಿತೋಫರ್ ಹೇಳಿದ್ದಾರೆ. ಕಂಪನಿಯು ಕಳೆದ ವರ್ಷ ಸುಮಾರು 12.2 ಲಕ್ಷ ಬಿಎಂಡಬ್ಲ್ಯು, 2.3 ಲಕ್ಷ ಮಿನಿ ಕಾರ್ ಮತ್ತು 2,711 ರೋಲ್ಸ್ ರಾಯ್ಸ್ ಮಾದರಿಗಳನ್ನು ಮಾರಾಟ ಮಾಡಿತ್ತು.

More from DriveSpark

Article Published On: Wednesday, March 16, 2011, 10:23 [IST]
English summary
BMW hopes to clock over 2.7% growth in 2011 sales to over 15 lakh vehicles globally. And company planed a 'good double-digit growth sales" in India, where it sold 6,246 units in 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+