ನಿಸ್ಸಾನ್- ಅಶೋಕ್ ಲೇಲ್ಯಾಂಡ್ ನಿಂದ ಹಗುರ ಟ್ರಕ್

Nissan Ashok Leyland JV
ನಿಸ್ಸಾನ್ ಮತ್ತು ಅಶೋಕ್ ಲೇಲ್ಯಾಂಡ್ ಜಂಟಿ ಉದ್ಯಮ ಈ ವರ್ಷದ ದ್ವಿತೀಯಾರ್ಧದಲ್ಲಿ ಹಗುರ ವಾಣಿಜ್ಯ ಟ್ರಕ್ ಗಳನ್ನು ಹೊರತರಲಿದೆ.ಇದರೊಂದಿಗೆ ಹಗುರ ವ್ಯಾನ್, ಹಗುರ ಟ್ರಕ್ ಮತ್ತು ಭಾರಿ ಟ್ರಕ್ ಎಂಬ ಮೂರು ಆವೃತ್ತಿಗಳನ್ನು ಶೀಘ್ರದಲ್ಲಿ ಹೊರತರುವುದಾಗಿ ಕಂಪನಿಯ ಉಪಾಧ್ಯಕ್ಷರು ಹೇಳಿದ್ದಾರೆ. ಅಶೋಕ್ ಲೇಲ್ಯಾಂಡ್ ಭಾರಿ ವಾಣಿಜ್ಯ ವಾಹನ ತಯಾರಿಸುವ ದೇಶದ ಎರಡನೇ ಬೃಹತ್ ಕಂಪನಿಯಾಗಿದೆ.

ಈ ಯೋಜನೆಗಾಗಿ ಜಂಟಿ ಉದ್ಯಮಕ್ಕೆ ಆರಂಭಿಕವಾಗಿ ಮುಂದಿನ 3-4 ವರ್ಷಗಳಿಗೆ ಸುಮಾರು 1,100ರಿಂದ 1,200 ಕೋಟಿ ರೂ.ವಿನಷ್ಟು ಹೂಡಿಕೆ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಕಂಪನಿಯ ಹೊಸೂರು ಘಟಕವನ್ನು ಅಪ್ ಗ್ರೇಡ್ ಮಾಡುವ ಮೂಲಕ ಒಂದು ಲಕ್ಷ ಹೆಚ್ಚು ವಾಹನ ಉತ್ಪಾದಿಸುವ ಯೋಜನೆ ಕಂಪನಿಗಿದೆ. ಇದರಿಂದ ಕಂಪನಿಯ ಒಟ್ಟು ಉತ್ಪಾದನೆ 1,90,000ಕ್ಕೆ ತಲುಪಲಿದೆ. ಈ ಘಟಕ ವಿಸ್ತರಿಸಲು ಅನುಮತಿ ಕೋರಿ ಕಂಪನಿಯು ತಮಿಳುನಾಡು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಅನುಮತಿಯ ನಿರೀಕ್ಷೆಯಲ್ಲಿರುವುದಾಗಿ ಕಂಪನಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.

Article Published On: Wednesday, March 16, 2011, 17:17 [IST]
English summary
The country’s second largest in heavy commercial vehicles manufacturing Ashok Leyland with its ally Nissan is aiming to launch light weight commercial trucks during the second half of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+