ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

By Praveen Sannamani

ಜೀವನದಲ್ಲಿ ಪ್ರತಿಯೊಬ್ಬರಿಗೂ ನಾನು ಹಾಗೆ ಆಗ್ಬೇಕು. ಹೀಗೆ ಇರಬೇಕು ಅಂತಾ ದೊಡ್ಡ ದೊಡ್ಡ ಕನಸು ಕಂಡಿರುತ್ತಾರೆ. ಆದ್ರೆ ಬಹುತೇಕರ ಜೀವನದಲ್ಲಿ ಕಂಡ ಕನಸು ಸಾಧ್ಯವಾಗುವುದೇ ಇಲ್ಲಾ. ಹಾಗಾಂತ ಜೀವನ ಅಷ್ಟಕ್ಕೆ ಮುಗಿಯುವುದೂ ಇಲ್ಲಾ. ಜೀವನದಲ್ಲಿ ಬಂದಿದ್ದನ್ನು ಖುಷಿಯಿಂದ ಸ್ವಿಕರಿಸಿ ಮುಂದೆ ನಡೆದ್ರೆ ಅದರಲ್ಲೇ ಯಶಸ್ವಿಯಾಗುವುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಕ್ಕೆ ಈ ಮಹಿಳೆಯ ಯಶೋಗಾಥೆಯೇ ಸಾಕ್ಷಿ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಅಂದಹಾಗೆ, ಈ ಮಹಿಳೆಯ ಹೆಸರು ಯೋಗಿತಾ ರಘುವಂಶಿ. ಮೂಲತಃ ಮಹಾರಾಷ್ಟ್ರದವರು. ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಡಬಲ್‌ ಡಿಗ್ರಿ ಪದವೀಧರೆ ಅಂದ್ರೆ ನೀವು ನಂಬಲೇಬೇಕು. ಬಿ.ಕಾಂ ನಂತರ ಕಾನೂನು ಪದವಿ ಪಡೆದ ಇವರು ಟ್ರಕ್ ಡ್ರೈವರ್ ವೃತ್ತಿಯನ್ನೇ ಆಯ್ದುಕೊಂಡ ಕಾರಣ ಕೇಳಿದ್ರೆ ನಿಮಗೆ ಶಾಕ್ ಆಗದೆ ಇರಲಾರದು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

1991ರಲ್ಲಿ ಪದವಿ ಶಿಕ್ಷಣದ ನಂತರ ಕೆಲಕಾಲ ವಕೀಲ ವೃತ್ತಿ ಮಾಡಿದ್ದ ಇವರು ಮಧ್ಯಪ್ರದೇಶದ ಭೂಪಾಲ್ ಮೂಲದ ರಘುವಂಶಿ ಎನ್ನುವವರನ್ನು ವಿವಾಹವಾಗಿದ್ದರು. ಮೊದಮೊದಲು ಖುಷಿಯಾಗಿಯೇ ನಡೆಯುತ್ತಿದ್ದ ಸಂಸಾರ ನೌಕೆಯು ತದನಂತರ ಆರ್ಥಿಕ ಮುಗ್ಗಟ್ಟನಿಂದಾಗಿ ಜೀವನ ನಿರ್ವಹಣೆಯು ಒಂದು ದೊಡ್ಡ ಸವಾಲಾಗಿತ್ತು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಇದೇ ವೇಳೆ ಯೋಗಿತಾ ರಘುವಂಶಿ ಅವರ ಪತಿ ಕೂಡಾ ಅಪಘಾತ ಒಂದರಲ್ಲಿ ಮೃತರಾಗಿದಲ್ಲದೇ ಸಾಲ ಸೂಲ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದ ಆ ಕುಟುಂಬಕ್ಕೆ ಮನೆ ಯಜಮಾನನ ಸಾವು ಬರ ಸಿಡಿಲು ಬಡಿದಂತಾಯಿತು. ಆದ್ರೆ ಆ ಪರಿಸ್ಥಿತಿಯನ್ನು ನಿಭಾಯಿಸಿದ ಯೋಗಿತಾ ಧೈರ್ಯವನ್ನು ನಾವು ಮೆಚ್ಚಲೇಬೇಕು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಏನೇ ಕಷ್ಟ ಬಂದರೂ ಎದೆ ಗುಂದದೆ ಹೋರಾಡುವ ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅರಿತ ಯೋಗಿತಾ ತನ್ನ ವಕೀಲ ವೃತ್ತಿಗೆ ಗುಡ್‌ಬೈ ಹೇಳಿ ಟ್ರಕ್ ಡ್ರೈವಿಂಗ್‌ಗೆ ಸೇರಿಕೊಂಡಳು. ವಕೀಲ ವೃತ್ತಿಗಿಂತಲೂ ಹೆಚ್ಚಿನ ಗಳಿಕೆ ಮಾಡಬಹುದು ಎನ್ನುವ ಒಂದೇ ಉದ್ದೇಶದಿಂದಲೇ ವಕೀಲ ವೃತ್ತಿಯನ್ನು ಬಿಟ್ಟಿದ್ದು ಎನ್ನವುದು ಯೋಗಿತಾ ಅವರು ಮಾತು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಇದಕ್ಕೆ ಕಾರಣ, ಹಿರಿಯ ವಕೀಲರ ಬಳಿ ಪಾಕ್ಟಿಸ್ ಮಾಡಬೇಕಾದ್ರೆ ಅವರು ನೀಡುವ ಸಂಬಳ ತನ್ನ ಸಂಸಾರಕ್ಕೆ ಸಾಕಾಗದು ಎಂದು ನಿರ್ಧರಿಸಿದ ಯೋಗಿತಾ ಅವರು, ಕಷ್ಟವಾದ್ರೂ ಪರವಾಗಿಲ್ಲ ದಿನಂಪ್ರತಿ ನಾವು ದುಡಿದ ದುಡಿಮೆಗೆ ಸಂಬಳ ಏಣಿಸಬಹುದು ಎನ್ನುವ ಕಾರಣಕ್ಕೆ ಟ್ರಕ್ ಚಾಲನೆಯನ್ನು ಆಯ್ಕೆ ಮಾಡಿಕೊಂಡರು.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಈಗಿನ ಕಾಲದಲ್ಲಿ ಟ್ರಕ್ ಡ್ರೈವರ್ ಅಂದ್ರೆ ಏನೋ ಒಂದು ಥರಾ ಕಿಳಾಗಿ ಕಾಣುವ ಜನರ ಮಧ್ಯೆ ಅದೇ ವೃತ್ತಿಯಲ್ಲೇ ಏನಾದ್ರೂ ಸಾಧನೆ ಮಾಡಲೇಬೇಕು ಎಂದುಕೊಂಡ ಯೋಗಿತಾ ಅವರು ನಿಯತ್ತಿನ ದುಡಿಮೆಗೆ ಯಾವ ಕೆಲಸವಾದ್ರೂ ಏನು ಅಂತಾ ಟ್ರಕ್ ಸ್ಟ್ರೀರಿಂಗ್ ಹಿಡಿದೇ ಬಿಟ್ರು...

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಸದ್ಯ ಮಹಾರಾಷ್ಟ್ರದಲ್ಲಿ ನೆಲೆಸಿರುವ ಯೋಗಿತಾ ರಘುವಂಶಿಯವರು ಮುಂಬೈನಿಂದ ದೇಶದ ವಿವಿಧ ಭಾಗಗಳಿಗೆ ಗೂಡ್ಸ್ ಸಾಗಾಣಿಕೆಗಾಗಿ ಟ್ರಕ್ ಚಾಲನೆ ಮಾಡುತ್ತಿದ್ದು, ದೇಶದ ಏಕೈಕ ಸರ್ಟಿಫೈಡ್ ಟ್ರಕ್ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಸದ್ಯ ಅವರೇ ಸ್ವಂತಕ್ಕೊಂದು ಟ್ರಕ್ ಖರೀದಿಸಿ ಬಾಡಿಗೆಗೆ ಬಿಟ್ಟಿದ್ದು, 2013ರಿಂದ ಇದುವರೆಗೆ ಯೋಗಿತಾ ಅವರು ದೇಶದ ವಿವಿಧ ವಿವಿಧಡೆ ಬರೋಬ್ಬರಿ 5 ಲಕ್ಷ ಕಿ.ಮೀ ಟ್ರಕ್ ಚಾಲನೆ ಮಾಡಿದ್ದಲ್ಲೇ ಇದುವರೆಗೆ ಯಾವುದೇ ಒಂದೇ ಒಂದು ಸಣ್ಣ ಅಪಘಾತವಾಗದಂತೆ ಎಚ್ಚರಿಕೆಯ ವಾಹನ ಚಾಲನೆ ಮಾಡಿದ್ದಾರೆ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

47 ವರ್ಷದ ಯೋಗಿತಾ ಅವರಿಗೆ ಇಬ್ಬರು ಪುತ್ರಿಯರು ಸಹ ಇದ್ದು, ಇಬ್ಬರೂ ಸಹ ಪದವಿ ಶಿಕ್ಷಣ ಓದುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಟ್ರಕ್ ಚಾಲನೆಯನ್ನೇ ನಂಬಿಕೊಂಡಿರುವ ಯೋಗಿತಾ ಅವರ ಜೀವನ ಶೈಲಿಯನ್ನು ನೋಡಿದ್ರೆ ಪ್ರತಿಯೊಬ್ಬರು ಹೆಮ್ಮೆಪಡಯೇಬೇಕಾದ ವಿಚಾರ.

ಟ್ರಕ್ ಚಾಲಕಿಯಾಗಿರುವ ಈ ಮಹಿಳೆಯ ಯಶೋಗಾಥೆಯನ್ನು ನಾವು ಮೆಚ್ಚಲೇಬೇಕು...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

Read more on truck off beat
English summary
We Salute the Spirit of India’s Most Academically Qualified Woman Truck Driver.
Story first published: Saturday, June 30, 2018, 15:36 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more