2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

Written By:

ಹೋಂಡಾ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್. ಲಿಮಿಟೆಡ್ ಕಂಪನಿಯು ತನ್ನ ನಾಲ್ಕು ಘಟಕಗಳಲ್ಲಿ ಇರುವಂತಹ ಶ್ರೇಷ್ಠ ಟ್ರಕ್ ಚಾಲಕಗಳನ್ನು ಸನ್ಮಾನಿಸುವ ಮೂಲಕ ರಸ್ತೆಯ ಸುರಕ್ಷತೆಯ ಕಾರಣವನ್ನು ಒತ್ತಿಹೇಳುವ ಕೆಲಸಕ್ಕೆ ಕೈ ಹಾಕಿದೆ.

2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

ಹೋಂಡಾ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಟ್ರಕ್ ಚಾಲಕರ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಕಾರಣಕ್ಕೆ ಕೆಲಸದಲ್ಲಿ ಬದ್ಧತೆಯನ್ನು ತೋರಿದ ಮತ್ತು ತಮ್ಮ ವೃತ್ತಿಬದುಕಿನಲ್ಲಿ ಸವಾಲಿನ ದಿನಗಳನ್ನು ಹೆಚ್ಚು ಶ್ರಮವಹಿಸಿ ಶ್ರೇಷ್ಠವಾಗಿ ಕಾರ್ಯನಿರ್ವಹಿಸಿದ ಚಾಲಕರನ್ನು ಸಂಸ್ಥೆಯು ಗುರುತಿಸಿ ಸನ್ಮಾನಿಸಿದೆ.

2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

ಕಂಪನಿಯ ಮನೇಸರ್(ಗುರಂಗಾವ್), ತಪುಕಾರಾ(ರಾಜಸ್ಥಾನ), ನರಸಪುರ(ಕರ್ನಾಟಕ) ಮತ್ತು ವಿಠ್ಠಲಪುರ(ಗುಜರಾತ್) ಘಟಕಗಳಲ್ಲಿ ಇರುವಂತಹ ಚಾಲಕರನ್ನು ಗಣನೆಗೆ ತೆಗೆದುಕೊಂಡು ಈ ಸನ್ಮಾನ ಕಾರ್ಯಕ್ರಮವನ್ನು ಕಂಪನಿ ಹಮ್ಮಿಕೊಂಡಿದೆ.

2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

ಈ ಕಾರ್ಯಕ್ರಮದಲ್ಲಿ ರಸ್ತೆಯ ಸುರಕ್ಷತೆಯ ಬಗ್ಗೆ ತರಬೇತಿಯ ಅಧಿವೇಶನ ಸಹ ಒಳಗೊಂಡಿದ್ದು, ರಸ್ತೆ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಸುರಕ್ಷಿತ ಚಾಲನಾ ಮಾರ್ಗಸೂಚಿಗಳನ್ನು ನೀಡುವ ಉದ್ದೇಶವನ್ನು ಹೊಂದಿವೆ.

2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

ಸುರಕ್ಷತೆ ಮಾರ್ಗಸೂಚಿಗಳ ಬಗ್ಗೆ ಟ್ರಕ್ ಡ್ರೈವರ್‌ಗಳ ಜ್ಞಾನ ಎಷ್ಟಿದೆ ಎಂಬ ವಿಚಾರ ತಿಳಿದುಕೊಳ್ಳಲು ಹೊಂಡಾ ರಸಪ್ರಶ್ನೆ ಸ್ಪರ್ಧೆ, ಸಂವಹನ ಆಟಗಳು ಮತ್ತು ತಂಡದ ನಿರ್ಮಾಣ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಸಹ ಸ್ಪರ್ಧೆಗಳನ್ನು ಒಳಗೊಂಡಿತ್ತು.

2017 ಅಂತರಾಷ್ಟ್ರೀಯ ಟ್ರಕ್ ಚಾಲಕರ ದಿನಾಚರಣೆ ಮಾಡಿದ ಹೋಂಡಾ

ವಿವಿಧ ಸ್ಥಳಗಳಲ್ಲಿ ಟ್ರಕ್ ಚಾಲಕ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಮಾಹಿತಿ ನೀಡಲು ಮತ್ತು ಪ್ರೇರಣೆ ತುಂಬಲು ವಿಶೇಷವಾಗಿ ವಿನ್ಯಾಸಗೊಳಿಸಿದ ಕಾರ್ಯಾಗಾರವನ್ನೂ ನಡೆಸಲಾಯಿತು. ಸುರಕ್ಷತೆಗಾಗಿ ಹೋಂಡಾ ನಿಯಮಿತವಾದ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಮತ್ತು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ ಎಂಬುದನ್ನು ನಾವು ಗಮನಿಸಬಹುದಾಗಿದೆ.

English summary
Honda Motorcycle and Scooter India Pvt. Ltd emphasises the cause of road safety by felicitating the truck drivers in its four plants in Manesar (Gurgaon), Tapukara (Rajasthan), Narsapura (Karnataka) and Vithalapur (Gujarat).
Story first published: Friday, September 22, 2017, 12:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark