ಬಿಗ್ ಬಜಾರಿನಲ್ಲಿ "ನ್ಯಾನೊ ಕಾರ್ " ಶಾಪಿಂಗ್ ಮಾಡಿ!!

"ಟಾಟಾ ಮೋಟರ್ಸ್ ಮತ್ತು ಫ್ಯೂಚರ್ ಗ್ರೂಪ್ ಕಂಪನಿಗಳೆರಡು ಬಿಗ್ ಬಜಾರಿನಲ್ಲಿ ನ್ಯಾನೊ ಕಾರ್ ಮಾರಾಟ ಮಾಡುವ ಕುರಿತು ಒಪ್ಪಂದವೊಂದನ್ನು ಮಾಡಿಕೊಂಡಿದೆ" ಎಂದು ಫ್ಯೂಚರ್ ಗ್ರೂಪ್ ನ ಗ್ರಾಹಕ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಸಂದೀಪ್ ಹೇಳಿದ್ದಾರೆ. ಇಂತಹ ಒಂದು ಒಪ್ಪಂದ ನಡೆದಿರುವುದು ನಮ್ಮ ದೇಶದಲ್ಲಿ ಇದೇ ಮೊದಲು. ಬಿಗ್ ಬಜಾರಿನಲ್ಲಿ ಕಳೆದ ತಿಂಗಳಿನಿಂದಲೇ ನ್ಯಾನೊ ಮಾರಾಟ ಆರಂಭವಾಗಿತ್ತು. ಈಗಾಗಲೇ ಇಲ್ಲಿ ಸುಮಾರು 450 ನ್ಯಾನೊ ಕಾರ್ ಮಾರಾಟವೂ ಆಗಿದೆ. ಕಂಪನಿಯ ಫೆಬ್ರವರಿ ಮಾರಾಟಕ್ಕಿಂತ ಶೇ. 5ರಷ್ಟು ಹೆಚ್ಚು ಮಾರಾಟ ಬಿಗ್ ಬಜಾರಿನಲ್ಲಾಗಿದೆ.
ನ್ಯಾನೊ ಮಾರಾಟ ಹೆಚ್ಚಿಸಿಕೊಳ್ಳಲು ಇದೊಂದು ಬುದ್ದಿವಂತ ನಡೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಜಗತ್ತಿನ ಅಗ್ಗದ ಕಾರ್ ಖ್ಯಾತಿಯ ಟಾಟಾ ನ್ಯಾನೊದತ್ತ ಗ್ರಾಹಕರನ್ನು ಆಕರ್ಷಿಸಲು ಕಂಪನಿ ಇತ್ತೀಚೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕಳೆದ ವರ್ಷ ನ್ಯಾನೊ ಮಾರಾಟ ಗಣನೀಯವಾಗಿ ಇಳಿಕೆ ಕಂಡಿತ್ತು. ಕಳೆದ ನವೆಂಬರ್ ನಲ್ಲಿ ಕೇವಲ 509 ನ್ಯಾನೊ ಕಾರ್ ಮಾರಾಟಗೊಂಡಿತ್ತು.


Click it and Unblock the Notifications








