ದೀಪಾವಳಿಗೆ ಮುನ್ನ ಟಾಟಾ ನ್ಯಾನೊ ಸಿಎನ್ಜಿ ಆವೃತ್ತಿ

Posted By: Super

ದೇಶದ ವಾಹನ ಇತಿಹಾಸದಲ್ಲಿಯೇ ಅಗ್ಗದ ನ್ಯಾನೊ ಕಾರನ್ನು ಟಾಟಾ ಮೋಟರ್ಸ್ ಪರಿಚಯಿಸಿತ್ತು. ಆದರೆ ಕಂಪನಿಯ ನಿರೀಕ್ಷೆಯಂತೆ ನ್ಯಾನೊ ಮಾರಾಟವಾಗುತ್ತಿಲ್ಲ. ಇದೀಗ ಕಂಪನಿಯು ವಿವಿಧ ನ್ಯಾನೊ ಆವೃತ್ತಿಗಳನ್ನು ಪರಿಚಯಿಸಲು ಯೋಜಿಸಿದೆ. ಅಂದರೆ ಸಿಎನ್ಜಿ, ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲು ಯೋಜಿಸಿದೆ.

ಇದರಲ್ಲಿ ಟಾಟಾ ನ್ಯಾನೊ ಸಿಎನ್ಜಿ ಕಾರನ್ನು ಈ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ಡೀಸೆಲ್ ನ್ಯಾನೊ ಕಾರಿನ ನಿರೀಕ್ಷೆಯಲ್ಲಿ ಹೆಚ್ಚಿನ ಜನರಿದ್ದಾರೆ. ಆದರೆ ಇದೀಗ ಕಂಪನಿಯು ಸಿಎನ್ಜಿ ಆವೃತ್ತಿಯ ನ್ಯಾನೊ ಕಾರನ್ನು ಶೀಘ್ರದಲ್ಲಿ ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ.

ಟಾಟಾ ನ್ಯಾನೊ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್ಜಿ) ಚಾಲಿತ ಆವೃತ್ತಿಯನ್ನು ಕಂಪನಿಯು ದೇಶದಲ್ಲಿ ಅಲ್ಲಲ್ಲಿ ಟೆಸ್ಟ್ ಮಾಡುತ್ತಿದೆ. ವಿಶೇಷವೆಂದರೆ ಕೇವಲ ಘಟಕದೊಳಗೆ ಮಾತ್ರವಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿಯೂ ನ್ಯಾನೊ ಸಿಎನ್ಜಿ ಕಾರನ್ನು ಟೆಸ್ಟ್ ಮಾಡಲಾಗುತ್ತಿದೆ.

ನೂತನ ನ್ಯಾನೊ ಸಿಎನ್ಜಿ ಕೇವಲ ಒಂದು ಇಂಧನದಲ್ಲಿ ಚಲಿಸುವ ಕಾರಲ್ಲ. ಅದರಲ್ಲಿ ಪೆಟ್ರೋಲ್ ಮತ್ತು ಸಿಎನ್ಜಿ ಡ್ಯೂಯಲ್ ಫ್ಯೂಯಲ್ ಸಿಸ್ಟಮ್ ಇರಲಿದೆ. ಇಂಡಿಯ ಅಟೋ ಬ್ಲಾಗ್ ಈಗಾಗಲೇ ಸಿಎನ್ಜಿ ಟ್ಯಾಂಕ್ ಮತ್ತು ಪೆಟ್ರೋಲ್ ಟ್ಯಾಂಕ್ ಇರುವ ನ್ಯಾನೊ ಚಿತ್ರವನ್ನು ಪೋಸ್ಟ್ ಮಾಡಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಕಂಪನಿಯು ನೂತನ ಸಿಎನ್ಜಿ ನ್ಯಾನೊ ಕಾರನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ದೆಹಲಿ, ಮುಂಬೈ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರ್ಯಾಣ ಸೇರಿದಂತೆ ಸಿಎನ್ಜಿ ಇಂಧನ ಲಭ್ಯತೆ ಇರುವಲ್ಲಿ ಮಾತ್ರ ನೂತನ ನ್ಯಾನೊ ಕಾರನ್ನು ಪರಿಚಯಿಸುವ ನಿರೀಕ್ಷೆಯಿದೆ.

ವಾಹನ ಪ್ರದರ್ಶನದಲ್ಲಿತ್ತು ಹೊಸ ನ್ಯಾನೊ

ವಾಹನ ಪ್ರದರ್ಶನದಲ್ಲಿತ್ತು ಹೊಸ ನ್ಯಾನೊ

ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ನೂತನ ನ್ಯಾನೊ ಸಿಎನ್ ಜಿ ಆವೃತ್ತಿಯನ್ನು ಪ್ರದರ್ಶಿಸಲಾಗಿತ್ತು.

ಟೆಸ್ಟ್ ನಡೆಯುತ್ತಿದೆ..

ಟೆಸ್ಟ್ ನಡೆಯುತ್ತಿದೆ..

ಟಾಟಾ ಮೋಟರ್ಸ್ ಕಂಪನಿಯು ರಸ್ತೆಯಲ್ಲಿ ನೂತನ ನ್ಯಾನೊ ಸಿಎನ್ಜಿ ಕಾರಿನ ಟೆಸ್ಟ್ ನಡೆಸುತ್ತಿದೆ.

ಪೆಟ್ರೋಲ್ ಮತ್ತು ಸಿಎನ್ ಜಿ

ಪೆಟ್ರೋಲ್ ಮತ್ತು ಸಿಎನ್ ಜಿ

ನೂತನ ನ್ಯಾನೊ ಕಾರು ಪೆಟ್ರೋಲ್ ಮತ್ತು ಸಿಎನ್ಜಿ ಎಂಬ ಡ್ಯೂಯಲ್ ಇಂಧನ ಚಾಲಿತ ಕಾರಾಗಿರಲಿದೆ.

ಯಾವಾಗ ರಸ್ತೆಗೆ?

ಯಾವಾಗ ರಸ್ತೆಗೆ?

ಕಂಪನಿಯ ಕಡೆಯಿಂದ ನೂತನ ಕಾರಿನ ಲಾಂಚ್ ಡೇಟ್ ಇನ್ನೂ ಪ್ರಕಟವಾಗಿಲ್ಲ. ಆದರೆ ಕಂಪನಿಯು ಟೆಸ್ಟ್ ಮಾಡುವ ಸ್ಪೀಡ್ ನೋಡುತ್ತಿರುವಾಗ ದೀಪಾವಳಿಗೆ ಮುನ್ನ ಬರೋದು ಗ್ಯಾರಂಟಿ.

ಡೀಸೆಲ್ ನ್ಯಾನೊ ಬರುತ್ತೆ!

ಡೀಸೆಲ್ ನ್ಯಾನೊ ಬರುತ್ತೆ!

ಸಿಎನ್ ಜಿ ನ್ಯಾನೊ ಪರಿಚಯಿಸಿದ ನಂತರ ಕಂಪನಿಯು ಡೀಸೆಲ್ ಎಂಜಿನಿನ ನ್ಯಾನೊ ಕಾರು ಪರಿಚಯಿಸಲಿದೆ.

English summary
Tata Nano CNG Caught Testing Before Diwali Launch. Recent reports about the Tata Nano CNG indicate the small car is being tested extensively. The Nano CNG is not only being tested inside the confines of Tata Motors plant in Sanand but also on public roads.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark