ಹ್ಯುಂಡೈನಿಂದ ಸಿಎನ್ಜಿ ಐ10, ಸ್ಯಾಂಟ್ರೊ, ಅಸೆಂಟ್

ಹ್ಯುಂಡೈ ಮೋಟರ್ಸ್ ಕಂಪನಿಯು ಮೂರು ಪೆಟ್ರೋಲ್ ಕಾರುಗಳಾದ ಐ10, ಸ್ಯಾಂಟ್ರೊ ಕ್ಷಿಂಗ್ ಮತ್ತು ಅಸೆಂಟ್ ಗಳ ಸಿಎನ್ಜಿ ಚಾಲಿತ ಆವೃತ್ತಿಗಳನ್ನು ಪರಿಚಯಿಸಲು ನಿರ್ಧರಿಸಿದೆ. ಡೀಸೆಲ್ ಕಾರುಗಳಿಗೆ ಹೆಚ್ಚು ದುಡ್ಡು ವಿನಿಯೋಗಿಸಲು ಇಚ್ಚಿಸದವರು ಈ ಸಂಕುಚಿತ ನೈಸರ್ಗಿನ ಅನಿಲ(ಸಿಎನ್ಜಿ) ಚಾಲಿತ ಕಾರುಗಳಿಗೆ ಕಾಯಬಹುದಾಗಿದೆ.

ಡೀಸೆಲ್ ಕಾರುಗಳಂತೆ ಸಿಎನ್ಜಿ ಕಾರುಗಳು ದುಬಾರಿಯಲ್ಲ. ಸಿಎನ್ಜಿ ಕಾರುಗಳ ರನ್ನಿಂಗ್ ವೆಚ್ಚ ಪೆಟ್ರೋಲ್ ಕಾರುಗಳ ಅರ್ಧದಷ್ಟಿದೆ. ಇತ್ತೀಚೆಗೆ ಡೀಸೆಲ್ ದರ ಸಹ ಏರಿಕೆ ಕಾಣಲು ಆರಂಭಿಸಿರುವುದರಿಂದ ಸಿಎನ್ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಈಗಾಗಲೇ ಹ್ಯುಂಡೈ ಕಾರುಗಳಿಗೆ ಸಿಎನ್ಜಿ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದನ್ನು ಫಿಟ್ ಮಾಡುವುದರಿಂದ ಕಾರು ವಾರೆಂಟಿ ಆಫರ್ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಕಂಪನಿಯೇ ಇನ್ಮುಂದೆ ಈ ಮೂರು ಕಾರುಗಳಿಗೆ ಸಿಎನ್ಜಿ ಅಳವಡಿಸುವುದರಿಂದ ಕಾರುಗಳ ವಾರೆಂಟಿಗೆ ಯಾವುದೇ ಸಮಸ್ಯೆಯಾಗದು.

ಹ್ಯುಂಡೈ ಸಿಎನ್ಜಿ ಕಿಟ್ ದರ ಸುಮಾರು 56 ಸಾವಿರ ರು. ಇದೆ. ಇದನ್ನು ಅಳವಡಿಸಿದ ನಂತರ ನಿಮ್ಮ ಕಾರಿನ ಬೂಟ್ ಸ್ಥಳಾವಕಾಶ ಕೊಂಚ ಕಡಿಮೆಯಾಗಲಿದೆ. ಬೂಟ್ ಸ್ಥಳಾವಕಾಶ ಕಡಿಮೆಯಾದ್ರೂ ಓಕೆ, ಕಾರಿನ ರನ್ನಿಂಗ್ ವೆಚ್ಚ ಕಡಿಮೆಯಾದ್ರೆ ಸಾಕು ಎಂದೆನಿಸಿದರೆ ನೀವು ಐ10, ಸ್ಯಾಂಟ್ರೊ ಮತ್ತು ಅಸೆಂಟ್ ಕಾರುಗಳಿಗೆ ಸಿಎನ್ಜಿ ಕಿಟ್ ಹಾಕಿಕೊಳ್ಳಬಹುದು.

Most Read Articles

Kannada
English summary
Hyundai Motors has decided to launch CNG variants of its three petrol cars - the i10, Santro Xing and Accent in the coming weeks. The decision has been taken in an effort to attract people who are interested to buy a diesel car but do not wish to spend as much money on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X