ಮತ್ತೆ ಐಕಾನಿಕ್ ಅಂಬಾಸಡರ್ ಪರ್ವ? ಹೊಸ ಕಾರ್ ಇಲ್ಲಿದೆ

ಭಾರತದ ಹಳೆಯ ವಾಹನ ತಯಾರಿಕಾ ಕಂಪನಿ ಹಿಂದೂಸ್ತಾನ್ ಮೋಟರ್ಸ್ ಇತ್ತೀಚೆಗೆ ಅಂಬಾಸಡರ್ ಗ್ರಾಂಡ್ ನ ಪೆಟ್ರೊಲ್ ಆವೃತ್ತಿ ಬಿಎಸ್-4 ಎಂಬ ಕಾರನ್ನು ಹೊರತಂದಿದೆ. ನೂತನ ಕಾರಿನ ಬೆಂಗಳೂರು ಆನ್ ರೋಡ್ ದರ 7.02 ಲಕ್ಷ ರೂ. ಮತ್ತು ದೆಹಲಿ ಆನ್ ರೋಡ್ ದರ 6.5 ಲಕ್ಷ ರೂ. ಆಗಿದೆ. ಕಂಪನಿಯು 1948ರಲ್ಲಿ, ಅಂದರೆ ಸುಮಾರು 60 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಉತ್ತರ್ ಪುರದಲ್ಲಿ ಮೊದಲ ಅಂಬಾಸಡರ್ ಕಾರ್ ಉತ್ಪಾದನೆ ಆರಂಭಿಸಿತ್ತು.

ಹಳೆಯ ಕ್ಲಾಸಿಕ್ ಅಂಬಾಸಡರ್ ಕಾರಿಗೆ ಹೋಲಿಸಿದರೆ ನೂತನ ಕಾರಿನಲ್ಲಿ ಮಹತ್ವದ ಬದಲಾವಣೆಗಳು ಕಾಣುವುದಿಲ್ಲ. ಆದರೆ, ಸೈಡ್ ಇಂಡಿಕೇಟರ್, ಕ್ಲೀನಾಗಿರುವ ಕನ್ನಡಿಯ ಹೆಡ್ ಲ್ಯಾಂಪ್, ಬಾಡಿ ಬಣ್ಣದ ಬಂಪರ್, ಸಾಫ್ಟ್ ಟವ್ ಡೋರ್ ಹ್ಯಾಂಡಲ್ ಡೈಮಂಡ್ ಆಕಾರದ ಟೇಲ್ ಲ್ಯಾಂಪ್ ಮುಂತಾದ ಫೀಚರ್ ಗಳಿಂದ ಹೊಸದಾಗಿ ಕಾಣುತ್ತದೆ.

ನೂತನ ಅಂಬಾಸಡರ್ ಕಾರ್ ನಲ್ಲಿ ಪವರ್ ವಿಂಡೋಸ್, ಪವರ್ ಸ್ಟೇರಿಂಗ್(ಪವರ್ ಸ್ಟೇರಿಂಗ್ ಇಲ್ಲದ್ದು ದೊರಕುತ್ತದೆ), ಮ್ಯೂಸಿಕ್ ಸಿಸ್ಟಮ್, ಮೊಬೈಲ್ ಚಾರ್ಜರ್, ಡಿಜಿಟಲ್ ಟ್ರಿಪ್ ಮೋಟರ್ ಇತ್ಯಾದಿ ಫೀಚರ್ ಗಳೂ ಇವೆ. 2011ರ ಅಂಬಾಸಡರ್ ಗ್ರಾಂಡ್ ಕಾರ್ 50 ಸಾವಿರ ಕಿ.ಮಿ. ವಾರೆಂಟಿ ಹೊಂದಿದೆ. ಆದರೆ ಈ ವಾರೆಂಟಿಯ ವ್ಯಾಲಿಡಿಟಿ ಕೇವಲ ಒಂದು ವರ್ಷ.

ಹೊಸ ಅಂಬಾಸಡರ್ ಕಾರ್ 1,817 ಪೆಟ್ರೊಲ್ ಎಂಜಿನ್ ಹೊಂದಿದ್ದು 71 ಹಾರ್ಸ್ ಪವರ್ ನೀಡುತ್ತದೆ. ಇದು ಜೆಟ್ ಬ್ಲ್ಯಾಕ್ ಸೇರಿದಂತೆ 6 ವಿವಿಧ ಬಣ್ಣಗಳಲ್ಲಿ ದೊರಕುತ್ತಿದೆ. ಪ್ರಸಕ್ತ ವರ್ಷ ಕಂಪನಿಯು ಅಂಬಾಸಡರ್ ಗ್ರಾಂಡ್ ಬಿಎಸ್5 ಪ್ಲಸ್ ಎಂಬ ಡೀಸಲ್ ಆವೃತ್ತಿಯನ್ನೂ ಹೊರತರುವ ಯೋಜನೆ ಹೊಂದಿದೆ.

More from DriveSpark

Article Published On: Thursday, March 17, 2011, 16:29 [IST]
English summary
Hindustan Motors launched Iconic Ambassador's new version car. New car "BS-IV" complaint, petrol variant of the Ambassador Grand. New BS-IV on-road Price tag in Bangalore only Rs 7.02 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+