ಬಿಎಂಡಬ್ಲ್ಯುಗೆ ದೇಶದಲ್ಲಿ ನಂಬರ್ ಒನ್ ಪಟ್ಟ ಉಳಿಸಿಕೊಳ್ಳೋ ಹಠ

"ಬಿಎಂಡಬ್ಲ್ಯು ತನ್ನ ಚೆನ್ನೈ ಘಟಕದ ವಾಹನ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 10 ಸಾವಿರದಷ್ಟು ಹೆಚ್ಚಿಸಿಕೊಂಡಿದೆ" ಎಂದು ಬಿಎಂಡಬ್ಲ್ಯು ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಕಂಪನಿಯು ಭಾರತದ ಐಷಾರಾಮಿ ಕಾರ್ ಮಾರುಕಟ್ಟೆಯಲ್ಲಿ ಸುಮಾರು 6,246 ವಾಹನ ಮಾರಾಟ ಮಾಡುವ ಮೂಲಕ ನಂಬರ್ ಒನ್ ಸ್ಥಾನ ಗಳಿಸಿತ್ತು. ಇದು ಕಂಪನಿಯ 2009ರ ಮಾರಾಟಕ್ಕೆ ಹೋಲಿಸಿದರೆ ಶೇ. 73ರಷ್ಟು ಏರಿಕೆಯಾಗಿದೆ.
2010ರಲ್ಲಿ ಕಂಪನಿಯು ತನ್ನ ಪ್ರತಿಸ್ಪರ್ಧಿ ಮರ್ಸಿಡಿಸ್ ಬೆಂಝ್ ನ್ನು ಹಿಂದಿಕ್ಕಿತ್ತು. ಕಳೆದ ವರ್ಷ ಸುಮಾರು 5,819 ಬೆಂಝ್ ಕಾರ್ ಮಾರಾಟಗೊಂಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ. 80ರಷ್ಟು ಏರಿಕೆ ಕಂಡಿದೆ. ಈ ವರ್ಷದ ಮಧ್ಯಾವದಿಯಲ್ಲಿ ಹೊಸ ಮಾದರಿಯ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್ ಯುವಿ) ಎಕ್ಸ್3 ಹೊರತರುವುದಾಗಿ ಬಿಎಂಡಬ್ಲ್ಯು ಹೇಳಿದೆ. ಇದು ಪೂರ್ಣಪ್ರಮಾಣದ ಸಿಕೆಡಿ ಯುನಿಟಾಗಿದೆ.
ಬಿಎಂಡಬ್ಲ್ಯು ಕಳೆದ ವರ್ಷ ಡಿಸೆಂಬರ್ ನಲ್ಲಿ ಜಾಗತಿಕವಾಗಿ ಎಸ್ ಯುವಿ ಆವೃತ್ತಿ ಎಕ್ಸ್1 ಹೊರತಂದಿತ್ತು. ಎಕ್ಸ್1 ಪೆಟ್ರೋಲ್ ಆವೃತ್ತಿ ದರ ಭಾರತದ ಯಾವುದೇ ಶೋರೂಂನಲ್ಲಿ ಸುಮಾರು 22 ಲಕ್ಷ ರೂ. ಆಗಿದೆ. ಡೀಸಲ್ ಆವೃತ್ತಿ ಎರಡು ಆಯ್ಕೆಯಲ್ಲಿ ದೊರಕುತ್ತಿದ್ದು, ದರ ಕ್ರಮವಾಗಿ 23.9 ಲಕ್ಷ ರೂ. ಮತ್ತು 29.9 ಲಕ್ಷ ರೂ. ಆಗಿದೆ.


Click it and Unblock the Notifications








