ಜಪಾನಿನಲ್ಲಿ ಉತ್ಪಾದನೆ ಪುನಾರಂಭ; ಭಾರತದ ಕಂಪನಿಗಳು ನಿರಾಳ

Japan Production Resume
ಜಪಾನಿನಲ್ಲಿ ಸಂಭವಿಸಿದ ಸುನಾಮಿ ಮತ್ತು ಭೂಕಂಪದಿಂದಾಗಿ ಬಾಗಿಲು ಮುಚ್ಚಿದ ವಾಹನ ಕಂಪನಿಗಳು ಮತ್ತೆ ಉತ್ಪಾದನೆ ಆರಂಭಿಸತೊಡಗಿವೆ. ಇದರಿಂದಾಗಿ ವಾಹನ ಬಿಡಿಭಾಗಗಳು ಮತ್ತು ಉಕ್ಕಿನ ಕೊರತೆಯ ಭೀತಿಯಲ್ಲಿದ್ದ ಭಾರತದ ಕಂಪನಿಗಳು ನಿರಾಳವಾಗಿವೆ. ಕೆಲವು ಕಂಪನಿಗಳು ತಮ್ಮ ಒಂದೊಂದೇ ಘಟಕದಲ್ಲಿ ಉತ್ಪಾದನೆ ಆರಂಭಿಸ ತೊಡಗಿವೆ. ಪರಿಸ್ಥಿತಿ ಒಂದಿಷ್ಟು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಟೊಯೊಟಾ, ನಿಸ್ಸಾನ್ ಮತ್ತು ಮಿತ್ಸುಬಿಸಿ ಮುಂತಾದ ಕಂಪನಿಗಳು ಮತ್ತೆ ಕೆಲಸ ಮಾಡತೊಡಗಿವೆ. ಆದರೆ ಪೂರ್ಣಪ್ರಮಾಣದ ಉತ್ಪಾದನೆ ಆರಂಭವಾಗಲು ಇನ್ನಷ್ಟು ಕಾಲ ಹಿಡಿಯಬಹುದು.

ಈ ಕಂಪನಿಗಳು ಉತ್ಪಾದನೆ ನಿಲ್ಲಿಸಿದ್ದರಿಂದ ಭಾರತದ ವಾಹನ ಕಂಪನಿಗಳು ನೇರವಾಗಿ ತೊಂದರೆಗೊಳಗಾಗಿದ್ದವು. ಯಾಕೆಂದರೆ ಇಲ್ಲಿನ ಕಂಪನಿಗಳು ಬಿಡಿಭಾಗ ಇತ್ಯಾದಿಗಳಿಗೆ ತಮ್ಮ ಜಪಾನಿನ ಜಂಟಿ ಉದ್ಯಮಗಳನ್ನು ಅವಲಂಬಿಸಿದ್ದವು. ಮಾರ್ಚ್ 11ರಿಂದ ಬಾಗಿಲು ಹಾಕಿದ್ದ ತನ್ನ 7 ಘಟಕವನ್ನು ಈಗಷ್ಟೇ ತೆರೆದಿದೆ. ಉಳಿದ 21 ಘಟನವನ್ನು ಮಾರ್ಚ್ 22ರಂದು ತೆರೆಯಲು ನಿರ್ಧರಿಸಿದೆ.

ನಿಸ್ಸಾನ್ ಕೂಡ ತನ್ನ ಒಂದು ಘಟಕದ ಬಾಗಿಲನ್ನು ಇಂದು ತೆರೆದಿದೆ. ಇನ್ನೆರಡು ಘಟಕಗಳನ್ನು ಭಾನುವಾರ ತೆರೆಯಲು ನಿರ್ಧರಿಸಿದೆ. ಮತ್ತೊಂದು ಘಟಕದಲ್ಲಿ ಯಾವಾಗ ಮತ್ತೆ ಉತ್ಪಾದನೆ ಆರಂಭಿಸುವುದೆಂದು ನಿಸ್ಸಾನ್ ಇನ್ನೂ ತೀರ್ಮಾನಿಸಿಲ್ಲ. ಮಿತ್ಸುಬಿಸಿ ಕೂಡ ಜಪಾನ್ ಕೇಂದ್ರ ಭಾಗದ ಘಟಕ ಸೇರಿದಂತೆ ಮೂರು ಘಟಕದಲ್ಲಿ ಇಂದಿನಿಂದ ಉತ್ಪಾದನೆ ಪುನಾರಂಭಿಸಿದೆ. ಆದರೆ ಹೋಂಡಾ, ಸುಜುಕಿ ಮುಂತಾದ ಕಂಪನಿಗಳು ಇನ್ನೂ ಘಟಕದ ಬಾಗಿಲು ತೆರೆದಿಲ್ಲ. ಮಾರ್ಚ್ 20ರ ನಂತರ ಘಟಕದಲ್ಲಿ ಉತ್ಪಾದನೆ ಆರಂಭಿಸುವುದಾಗಿ ಹೋಂಡಾ ಮತ್ತು ಮಾಜ್ದಾ ಕಂಪನಿಗಳು ಹೇಳಿವೆ. ಸುಜುಕಿ ಈ ಕುರಿತು ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದೆಯಂತೆ!

More from DriveSpark

Article Published On: Friday, March 18, 2011, 15:17 [IST]
English summary
The tragic turmoil out of the recent earthquake and tsunami has had a devastating impact on the lives of Japan. Now a sigh of relief has come to the business houses in automotive sector as Toyota, Nissan and Mitsubishi have resumed their least work in t heir plants. Yet, the full-fledged work will come off later it is known.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+