ಅಮೆರಿಕದಲ್ಲಿ "ಟಾಟಾ ನ್ಯಾನೊ" ಅಗ್ಗದ ಕಾರಲ್ಲ

ಅಮೆರಿಕದಲ್ಲಿ ಟಾಟಾ ಹೊರತರಲಿರುವ ಎಲ್ಲ ಹೊಸ ಕಾರ್ ಗಳು ಫೀಚರ್, ಸ್ಪೆಸಿಫಿಕೇಷನ್ ಗಳನ್ನು ಹೆಚ್ಚಿಸಿಕೊಳ್ಳಲಿದೆ. ಸಹಜವಾಗಿ ದರ ಕೂಡ ಹೆಚ್ಚಿರಲಿದೆ. ಇದರಿಂದ ವಿಶ್ವದ 'ಅಗ್ಗದ ಕಾರ್" ಎಂಬ ಟ್ಯಾಗ್ ಜನಪ್ರಿಯತೆ ಒಂದಿಷ್ಟು ಮಂಕಾಗುವ ನಿರೀಕ್ಷೆಯಿದೆ. ನ್ಯಾನೊದ ಸದ್ಯದ ದರಕ್ಕೆ ಹೋಲಿಸಿದರೆ ನೂತನ ಕಾರ್ ಸುಮಾರು ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆಯನ್ನು ಉದ್ಯಮ ಮೂಲಗಳು ವ್ಯಕ್ತಪಡಿಸಿವೆ.
ಕಂಪನಿಯು ನೂತನ ಕಾರನ್ನು ಇನ್ನೂ ಅನಾವರಣ ಮಾಡಿಲ್ಲ. ಆದರೆ ಇದರ ದರ ಸುಮಾರು 7-8 ಸಾವಿರ ಡಾಲರ್ ಇರುವ ನಿರೀಕ್ಷೆಯಿದೆ. ಹೊಸ ಆವೃತ್ತಿಗೆ ಕಂಪನಿಯು ಅಗತ್ಯವಿರುವ ಎಲ್ಲಾ ಸುರಕ್ಷತೆಯ ಫೀಚರ್ ಗಳನ್ನು ಅಳವಡಿಸಲಿದೆ. ದರ ಹೆಚ್ಚಿದರೂ ಅಮೆರಿಕ ವಾಹನ ಮಾರುಕಟ್ಟೆಯಲ್ಲಿ ಕಂಪನಿಯು ಅಗ್ಗದ ಕಾರ್ ಟ್ಯಾಗ್ ನೊಂದಿಗೆ ಮಾರಾಟ ಮಾಡಲಿದೆ. "ಅಮೆರಿಕ ಮಾರುಕಟ್ಟೆಗಾಗಿ ರೂಪಿಸಿರುವ ನ್ಯಾನೊ, ಆರಂಭದ ವಿನ್ಯಾಸ, ಎಂಜಿನಿಯರಿಂಗ್ ಫಿಲಾಸಪಿಯನ್ನೇ ಹೊಂದಿರಲಿದೆ. ಆದರೆ ನೋಡಲು ಒಂದಿಷ್ಟು ವಿಭಿನ್ನವಾಗಿ ಕಾಣಲಿದೆ. ಒಂದಿಷ್ಟು ಹೊಸ ಫೀಚರ್ ಗಳೂ ಇರಲಿದೆ" ಎಂದು ಟಾಟಾ ಮೋಟರ್ಸ್ ಚೇರ್ಮನ್ ರತನ್ ಟಾಟಾ ಹೇಳಿದ್ದರು.


Click it and Unblock the Notifications








