ಹ್ಯುಂಡೈ 1.90 ಲಕ್ಷ ಕಾರ್ ಹಿಂಪಡೆತ..!

ಪ್ಯಾಸೆಂಜರ್ ಬದಿಗಿರುವ ಏರ್ ಬ್ಯಾಗ್ ಜೋಡನೆ ಸರಿಯಾಗದೇ ಇದ್ದುದ್ದರಿಂದ ಪ್ರಯಾಣಿಕರು ಆರಾಮವಾಗಿ ಮತ್ತು ಸುರಕ್ಷಿತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅಲ್ಲಿನ ಟ್ರಾಫಿಕ್ ಸೇಫ್ಟಿ ವಿಭಾಗ ತಿಳಿಸಿದ್ದು, ಸರಿಪಡಿಸುವಂತೆ ಆದೇಶಿಸಿದೆ. ಕಂಪನಿಯ ವಕ್ತಾರರು ಪ್ರತಿಕ್ರಿಯೆಗೆ ಸಿಕ್ಕಿಲ್ಲ. 2006ರ ಜುಲೈನಿಂದ 2008 ನವೆಂಬರ್ ವರೆಗಿನ ಕಂಪನಿಯ ಎಲಾಂಟ್ರ ಕಾರ್ ಗಳನ್ನು ಹ್ಯುಂಡೈ ಹಿಂಪಡೆಯಲಿದೆ.
ಕಂಪನಿಯು ಸುಮಾರು 96 ಸಾವಿರದಷ್ಟು ಕಾರ್ ಗಳನ್ನು ಅಮೆರಿಕದಿಂದ ಹಿಂಪಡೆಯಲಿದೆ. ಡ್ರೈವರ್ ಕಡೆಯ ಏರ್ ಬ್ಯಾಗ್ ಕೂಡ ಸರಿಯಾಗಿ ಜೋಡಿಸದಿರುವುದರಿಂದ ಸೀಟ್ ಹೋಂದಾಣಿಕೆ ಸರಿಯಾಗಿಲ್ಲ. ಹೀಗಾಗಿ ಇದನ್ನೂ ಸರಿಪಡಿಸಲು ಕಂಪನಿ ನಿರ್ಧರಿಸಿದೆ. 2010ರಲ್ಲಿ ಅಮೆರಿಕದಲ್ಲಿ ಸುಮಾರು 1.32 ಲಕ್ಷ ಎಲಾಂಟ್ರ ಕಾರ್ ಮಾರಾಟಗೊಂಡಿದೆ.


Click it and Unblock the Notifications







