ಯಾರು ಹಿತವರು ಈ ಮೂರರೊಳಗೆ?

Polo
ಆ ಕಾಲವೆಂದೋ ಕಳೆದು ಹೋಗಿದೆ. ಅಂದ್ರೆ ಅಂದಿನ ಹ್ಯಾಚ್ ಬ್ಯಾಕ್ ಕಾರ್ ಖರೀದಿ ಕಾಲ. ಆಗ ಹ್ಯಾಚ್ ಬ್ಯಾಕ್ ಕಾರ್ ಬೇಕೆಂದರೆ ಮಾರುತಿ ಅಥವಾ ಹ್ಯುಂಡೈ ಕಂಪನಿಗಳನ್ನು ಮಾತ್ರ ಅವಲಂಬಿಸಬೇಕಿತ್ತು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಕಂಪನಿಗಳಿವೆ. ಹೊಸ ಹೊಸ ವಾಹನ ಕಂಪನಿಗಳು ಭಾರತದ "ರಸ್ತೆ"ಯಲ್ಲಿ ಅಂಗಡಿ ತೆರೆಯುತ್ತಿವೆ!

ಹ್ಯಾಚ್ ಬ್ಯಾಕ್ ಲೋಕದಲ್ಲಿ ಭಾರತದ ರಸ್ತೆಯಲ್ಲಿ ಮೂರು ಪ್ರಮುಖ ಜಾಗತಿಕ ಕಂಪನಿಗಳು ಹೆಚ್ಚು ಪ್ರಾಬಲ್ಯ ಪಡೆದಿವೆ. ಅವುಗಳೆಂದರೆ ನಿಸ್ಸಾನ್ ಮೈಕ್ರಾ, ಫೋರ್ಡ್ ಫಿಗೊ ಮತ್ತು ಫೋಕ್ಸ್ ವ್ಯಾಗನ್ ಪೊಲೊ. ಈ ಕಾರ್ ಗಳಲ್ಲಿರುವ ಹಲವು ಆಕರ್ಷಕ ಫೀಚರ್ ಗಳು ಹೆಚ್ಚಿನವರಿಗೆ ಇಷ್ಟವಾಗಿದೆ. ಇದೇ ಕಾರಣಕ್ಕೆ ದೇಶದ ರಸ್ತೆಯಲ್ಲಿ ದಟ್ಟಣೆಯನ್ನು ಹೆಚ್ಚಿಸಿಕೊಳ್ಳುತ್ತಿವೆ.

ಹ್ಯಾಚ್ ಬ್ಯಾಕ್ ವಿನ್ಯಾಸದ ಕುರಿತು ನೋಡಿದರೆ ನಿಸ್ಸಾನ್ ತನ್ನ ರೆಟ್ರೊ ಸರ್ಕ್ಯುಲರ್ ಆಕಾರದಿಂದ ಗಮನಸೆಳೆಯುತ್ತದೆ. ಆದರೆ ಫಿಗೊ ಒಂದಿಷ್ಟು ಸೌಮ್ಯವಾಗಿ ಕಾಣುತ್ತದೆ. ಪೋಲೊ ಲಕ್ಷುರಿ ಸೆಡಾನ್ ಕಾರಿನಂತೆಯೂ ಕಾಣುತ್ತದೆ.

ಇಂಟಿರಿಯರ್: ಈ ಕಾರ್ ಗಳ ಇಂಟಿರಿಯರ್ ಕುರಿತು ಒಂದೆರಡು ವಿವರಣೆ ನೀಡಬೇಕು. ಮೈಕ್ರಾ ಮತ್ತು ಪೊಲೊ ಕಾರ್ ಗಳಿಗಿಂತ ಫಿಗೊ ಲೆಗ್ ರೂಂ ಸ್ಥಳಾವಕಾಶ ಜಾಸ್ತಿ ಇದೆ. ಹಿಂಭಾಗದಲ್ಲಿನ ಸ್ಥಳಾವಕಾಶದ ವಿಷ್ಯದಲ್ಲಿ ಮೈಕ್ರಾ ಮತ್ತು ಪೊಲೊ ಒಂದಿಷ್ಟು ನಿರುತ್ಸಾಹ ಮಾಡುತ್ತದೆ. ಫಿಗೊ ಸ್ಥಳಾವಕಾಶದ ಕುರಿತು ಎರಡು ಮಾತಿಲ್ಲ. ಆದರೆ ಪೊಲೊ ಕಾರ್ ನ ಸ್ಥಳಾವಕಾಶದ ಗುಣಮಟ್ಟ ಹೆಚ್ಚು ಇಷ್ಟವಾಗುತ್ತದೆ. ಫಿಗೊ ಮತ್ತು ಮೈಕ್ರಾಗಳ ದರಕ್ಕೆ ಹೋಲಿಸಿದರೆ ಪೊಲೊ ದರನೂ ಒಂಚೂರು ಕಡಿಮೆಯೇ. ಆದರೆ ಉಳಿದೆರಡು ಕಾರ್ ಗಳಿಗಿಂತ ಫಿಗೊಗೆ ಒಂಚೂರು ಜಾಸ್ತಿ ಅಂಕ ನೀಡಲೇಬೇಕು.

ಎಂಜಿನ್ ದಕ್ಷತೆ: ಮೈಕ್ರಾ 1.4 ಲೀಟರ್ ಡೀಸಲ್ ಎಂಜಿನ್ ಹೊಂದಿದ್ದು ಉಳಿದ ಎರಡು ಕಾರ್ ಗಳಿಗಿಂತ ಹೆಚ್ಚು ಪವರ್ ಫುಲ್ ಆಗಿದೆ. ಇದು ಸಿಟಿ ಸವಾರಿಗೆ ಅತ್ಯಂತ ಸೂಕ್ತವಾದ ಕಾರಾಗಿದೆ. ಆದರೂ ಇದರ ವಿನ್ಯಾಸ, ಲುಕ್ ಗೆ ತಕ್ಕಂತೆ ಡ್ರೈವಿಂಗ್ ಅನುಭವ ನೀಡುತ್ತಿಲ್ಲ ಎಂಬುದು ಕೂಡ ಒಪ್ಪತಕ್ಕಂತಹ ಮಾತೇ. ಈ ಕಾರ್ ಸೊನ್ನೆಯಿಂದ ನೂರು ಕಿ.ಮೀ.ಯನ್ನು ಕೇವಲ 15 ಸೆಕೆಂಡ್ ನಲ್ಲಿ ತಲುಪುತ್ತದೆ. ಒಟ್ಟಾರೆ ಡೀಲರ್ ಷಿಪ್ ಕೇಂದ್ರಗಳ ವಿಷ್ಯದಲ್ಲಿ ನಿಸ್ಸಾನ್ ಹಿಂದಿದೆ.

ಪೊಲೊದಲ್ಲಿರುವ 1.2 ಲೀಟರ್ ಎಂಜಿನ್ ಕ್ಷಮತೆ ನಿರುತ್ಸಾವನ್ನುಂಟುಮಾಡುವುದಿಲ್ಲ. ನಿಸ್ಸಾನ್, ಫಿಗೊ ಗಳಿಗೆ ಹೋಲಿಸಿದರೆ ಪೊಲೊದಲ್ಲಿರುವುದು ಅತ್ಯಂತ ಪುಟ್ಟ ಎಂಜಿನ್. ಪೊಲೊದಲ್ಲಿ ಗಂಟೆಗೆ ಗರಿಷ್ಟ 164 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಫಿಗೊದಲ್ಲಿರುವುದು 1.4 ಲೀಟರ್ ಎಂಜಿನ್. ಉಳಿದೆರಡು ಕಾರ್ ಗಳಿಗೆ ಹೋಲಿಸಿದರೆ ಹೆಚ್ಚಿಲ್ಲ. ಹಾಗಂತ ನಮ್ಮ ಉತ್ಸಾಹ ಕುಗ್ಗುವಂತೆಯೂ ಇಲ್ಲ. ಹೆದ್ದಾರಿ ಸವಾರಿಯಲ್ಲಿ ಇದರಲ್ಲಿ ಆರಾಮವಾಗಿ, ಜಾಲಿಯಾಗಿ ಡ್ರೈವ್ ಮಾಡಬಹುದಾಗಿದೆ. ಫೋರ್ಡ್ ಫಿಗೊದಲ್ಲಿ ಪ್ರತಿಗಂಟೆಗೆ 165 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಮೈಲೇಜ್: ನಿಸ್ಸಾನ್ ಮೈಕ್ರಾ ಮೈಲೇಜ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 17 ಕಿ.ಮೀ.ಯಾಗಿದೆ. ಪೊಲೊ ಕೂಡ ಇಷ್ಟೇ ಮೈಲೇಜ್ ನೀಡುತ್ತದೆ. ಆದರೆ ಫಿಗೊ ಡೀಸಲ್ ಕಾರ್ ನಂಬಲು ಅಸಾಧ್ಯವೆಂಬಂತೆ ಪ್ರತಿಲೀಟರ್ ಗೆ ಸುಮಾರು 22 ಕಿ.ಮೀ. ಮೈಲೇಜ್ ನೀಡುತ್ತದೆ.

ಹ್ಯಾಚ್ ಬ್ಯಾಕ್ ಕಾರೆಂದರೆ ಮಾರುತಿ ಅಥವಾ ಹ್ಯುಂಡೈ ಕಾರೇ ಆಗಬೇಕೆಂದೆನಿಲ್ಲ. ಸಿಎನ್ ಜಿ ಕಿಟ್ ನೊಂದಿಗೆ ಬಂದಿರುವ ಪೊಲೊ, ಮೈಕ್ರಾ, ಫಿಗೊ ಕೂಡ ಅಗ್ಗದ ಪೆಟ್ರೊಲ್ ಕಾರ್ ಗಳಿಗಿಂತ ಹೆಚ್ಚು ಪ್ರಯೋಜನಕಾರಿ. ತಮ್ಮ ಬಜೆಟ್ ಗೆ ತಕ್ಕಂತೆ ಕಾರ್ ಖರೀದಿಸಬಯಸುವರು ಸೂಕ್ತ ದರ, ಸ್ಥಳಾವಕಾಶ, ವಿನ್ಯಾಸ, ಅದರ ಅಂದಚಂದ ಮತ್ತು ಅತ್ಯುತ್ತಮ ಮೈಲೇಜ್ ಗೂ ಗಮನ ನೀಡುತ್ತಾರೆ.

ಈ ಮೂರು ಕಾರ್ ಗಳಲ್ಲಿ ಸ್ಥಳಾವಕಾಶ, ಆಕರ್ಷಕ ದರ, ಡೀಲರ್ ನೆಟ್ ವರ್ಕ್ ಇತ್ಯಾದಿಗಳಲ್ಲಿ ಫೋರ್ಡ್ ಫಿಗೊ ಬೆಸ್ಟ್ ಕಾರಾಗಿದೆ. ಮೈಕ್ರಾ ಮತ್ತು ಪೊಲೊಗಳ ದರಗಳು ಇಷ್ಟವಾಗುವಂತಿಲ್ಲ. ಫಿಗೊ ತನ್ನ ಅತ್ಯುತ್ತಮ ಫೀಚರ್ ಗಳಿಂದ ಸಾಕಷ್ಟು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ಹಾಗಂತ ಫಿಗೊನೇ ಬೆಸ್ಟ್ ಅಂತ ತೀರ್ಮಾನಕ್ಕೆ ಬರಬೇಡಿ. ಯಾಕೆಂದರೆ ಟೊಯೊಟಾ ಎಟಿಯೋಸ್ ಲಿವಾ, ಹೋಂಡಾ ಬ್ರಿಯೊ, ಷೆವರ್ಲೆ ಬೀಟ್ ಡೀಸಲ್ ಇತ್ಯಾದಿ ಕಾರ್ ಗಳು ಸರದಿಯಲ್ಲಿವೆ. ಒಂದಿಷ್ಟು ತಾಳ್ಮೆ ಇದ್ದರೆ ಈ ಕಾರ್ ಗಳು ರಸ್ತೆಗಿಳಿಯೋ ತನಕ ಕಾಯಬಹುದು.

More from DriveSpark

Article Published On: Monday, March 28, 2011, 17:22 [IST]
English summary
Now a days the customers are getting much more to choose from making the shift of loyalty to new comers. Of the ones witnessed in the Indian Auto market is from three global players and their products – Nissan’s Micra, Ford Figo and Volkswagen Polo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+