ಮತ್ತೆ 40 ಸಾವಿರ ಹೊಸ ಆಟೋ ಬೇಕಿತ್ತಾ ಬೆಂಗಳೂರಿಗೆ?

ಬೆಂಗಳೂರಿನಲ್ಲಿ ಮತ್ತೆ ಆಟೋರಿಕ್ಷಾ ದಟ್ಟಣೆ ಹೆಚ್ಚಾಗಲಿದೆ. ಅದು ಕೆಲವು ಸಾವಿರದ ಲೆಕ್ಕದಲ್ಲಿಯಲ್ಲ. ಬರೋಬ್ಬರಿ 40 ಸಾವಿರದಷ್ಟು ಹೊಸ ಆಟೋ ರಿಕ್ಷಾಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಲು ಆರಂಭಿಸಿದೆ. ಉದ್ಯಾನನಗರಿಯಲ್ಲಿ ಈಗಾಗಲೇ ಸುಮಾರು 80 ಸಾವಿರದಷ್ಟು ರಿಕ್ಷಗಳಿಗೆ ಪರ್ಮಿಟ್ ನೀಡಲಾಗಿದೆ. ಮತ್ತೆ ಹೊಸದಾಗಿ 40 ಸಾವಿರ ರಿಕ್ಷಾಗಳು ಬೇಕಿತ್ತಾ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಈ ಕುರಿತು ಟ್ರಾಫಿಕ್ ಕಮಿಷನರ್ ಬಾಸ್ಕರ್ ರಾವ್ ಬೆಂಗಳೂರು ಮಿರರ್ ಗೆ ನೀಡಿರುವ ಪ್ರತಿಕ್ರಿಯೆ ಗಮನಿಸಿ. ಅವರ ಪ್ರಕಾರ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿ ರಿಕ್ಷಾಗಳಿಗೆ ಬೇಡಿಕೆ ಹೆಚ್ಚಿದೆ. 2006ರ ಸಮಯದಲ್ಲಿ ಸುಮಾರು 100 ವಾರ್ಡ್ ಗಳಿದ್ದವು. ಹಾಗಾಗಿ 80 ಸಾವಿರ ಆಟೋ ರಿಕ್ಷಾಗಳಿಗೆ ಪರ್ಮಿಟ್ ನೀಡಲಾಗಿತ್ತು. ಆದರೆ ಈಗ ಇಲ್ಲಿ ವಾರ್ಡ್ ಗಳ ಸಂಖ್ಯೆ 189ಕ್ಕೆ ಮುಟ್ಟಿದೆ. ಹೀಗಾಗಿ ಹೊಸದಾಗಿ ಪರ್ಮಿಟ್ ನೀಡಿರುವುದರಲ್ಲಿ ತಪ್ಪಿಲ್ಲ" ಎನ್ನುತ್ತಾರೆ.

ಇಲ್ಲಿ ಈಗಾಗಲೇ ಸುಮಾರು 80 ಸಾವಿರದಷ್ಟು ಆಟೋ ರಿಕ್ಷಾಗಳು ಸಂಚರಿಸುತ್ತಿವೆ. ಶೀಘ್ರದಲ್ಲಿ ನಮ್ಮ ಮೆಟ್ರೊ ಆರಂಭವಾಗುತ್ತದೆ. ಅದರಲ್ಲಿ ಪ್ರತಿದಿನ ಕಡಿಮೆಯೆಂದರೂ 30 ಸಾವಿರ ಜನರು ಪ್ರಯಾಣಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇಲ್ಲಿ ಹೆಚ್ಚಿನವರ ನೆಚ್ಚಿನ ಸಾರಿಗೆ ಬಿಎಂಟಿಸಿ ಬಸ್ ಕುರಿತು ಹೆಚ್ಚಿನ ದೂರುಗಳಿಲ್ಲ. ಇಲ್ಲಿ ತುಂಬಿತುಳುಕುತ್ತಿರುವ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ರಿಕ್ಷಾಗಳು ಅವಶ್ಯಕತೆ ಹೆಚ್ಚಿಲ್ಲ ಎಂಬುದು ಸ್ಪಷ್ಟ. ಹೊಸದಾಗಿ ಪರ್ಮಿಟ್ ನೀಡಿರುವುದರ ಹಿಂದೆ ಆಟೋ ಲಾಬಿ ಕೆಲಸ ಮಾಡಿರಬಹುದೇ ಎಂಬ ಅನುಮಾನ ಕೆಲವರಿಗಿದೆ.

ಸದ್ದು ಮಾಡುವ 4 ಸ್ಟ್ರೋಕ್ ಬದಲಾಗಿ ಹಳೆಯ ರಿಕ್ಷಾ ಚಾಲಕರು 4 ಸ್ಟ್ರೋಕ್ ಗೆ ಬದಲಾಯಿಸಲು ಸೂಚಿಸಲಾಗಿದೆಯಂತೆ. ಹೊಸ ರಿಕ್ಷಾಗಳಿಗಂತೂ ಎಲ್ ಪಿಜಿ ಕಿಟ್ ಇರುವ 4 ಸ್ಟ್ರೋಕ್ ಎಂಜಿನ್ ಕಡ್ಡಾಯ ಮಾಡಲಾಗಿದೆ. ಡಿಜಿಟಲ್ ಮೀಟರ್ ಕೂಡ ಕಡ್ಡಾಯವಾಗಿದೆ. ಹೀಗಾಗಿ ನೂತನ ರಿಕ್ಷಾಗಳು ಪರಿಸರಕ್ಕೆ ಹೆಚ್ಚಿನ ಹಾನಿ ಮಾಡಲಾರವು. 4 ಸ್ಟ್ರೋಕ್ ಇರುವುದರಿಂದ ಹೆಚ್ಚಿನ ಶಬ್ದ ಮಾಲಿನ್ಯ ಕೂಡ ಇರದು.

ಆಟೋ ಚಾಲಕರೆಂದರೆ ಕೆಟ್ಟವರಾ? ಬೆಂಗಳೂರಿನ ಆಟೋ ಚಾಲಕರು ಕಡಿಮೆಯೆಂದರೂ ಹನ್ನೆರಡು ಮಹಾಪಾಪಗಳನ್ನು ಮಾಡುತ್ತಾರೆ. ಇಲ್ಲಿನ ರಿಕ್ಷಾ ಚಾಲಕರ ಬಗ್ಗೆ ಹೆಚ್ಚಿನವರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಮೀಟರ್, ಡಬ್ಬಲ್ ಮೀಟರ್, ತ್ರಿಬಲ್ ಮೀಟರ್ ಅಂತ ಗ್ರಾಹಕರನ್ನು ಗೋಳುಹೊಯ್ದುಕೊಳ್ಳುವುದು ಇಲ್ಲಿ ಸಾಮಾನ್ಯ. ಎರಡನೆಯದಾಗಿ ಈಗಾಗಲೇ ಸುಮಾರು 80 ಸಾವಿರ ರಿಕ್ಷಾವಿರುವುದರಿಂದ ಹೆಚ್ಚಿನ ರಿಕ್ಷಾಗಳ ಅಗತ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ನಿಮಗೆ ಗೊತ್ತಾ ಆರ್ ಟಿಒ ಮೂಲವೊಂದರ ಪ್ರಕಾರ ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರ ಕುರಿತು ದಿನವೊಂದಕ್ಕೆ ಕಡಿಮೆಯೆಂದರೆ 100 ಕ್ಕೂ ಹೆಚ್ಚು ದೂರುಗಳು ಬರುತ್ತವಂತೆ. ಕಿರಿಕ್ ಮಾಡುವ ಆಟೋ ಚಾಲಕರಿಂದ ಪಾರಾಗಲು ದಾರಿಯೂ ಇಲ್ಲಿದೆ.

"ಯಾರೋ ಕೆಲವರು ಮಾಡೋ ವಂಚನೆಯಿಂದ ಇಡೀ ರಿಕ್ಷಾ ಚಾಲಕರಿಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ಸಾಕಷ್ಟು ಒಳ್ಳೆಯವರೂ ಇದ್ದಾರೆ. ನಮಗೆ ಮೀಟರ್ ಗಿಂತ ಜಾಸ್ತಿ ದುಡ್ಡು ಬೇಡ. ತುರ್ತುಸಮಯದಲ್ಲಿ ನಾವು ಎಷ್ಟೋ ಜನರನ್ನು ಉಚಿತವಾಗಿ ಆಸ್ಪತ್ರೆಗೆ ಸಾಗಿಸ್ತಿವಿ" ಹೀಗಂತ ಹೇಳುವ ಸಾಕಷ್ಟು ಒಳ್ಳೆಯ ಚಾಲಕರೂ ಬೆಂಗಳೂರಲ್ಲಿ ಕಣ್ಣಿಗೆ ಬೀಳುತ್ತಾರೆ. ಇಂತವರ ಸಂಖ್ಯೆ, ಸಂತತಿ 80 ಸಾವಿರ(ಪ್ಲಸ್ 40 ಸಾವಿರ)ವಾಗಲಿ...

More from DriveSpark

Article Published On: Tuesday, March 29, 2011, 16:20 [IST]
English summary
Bangalore auto rickshaw traffic will going to new high. Because transport department begins issuing new permits to 40,000 new auto rickshaw.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+