ವಾಹನ ಲೋಕದ ಅಚ್ಚರಿ, ದುಬಾರಿ ಕಾರ್ ಲೋಕ

Luxury Car
ಕೆಲವರಿಗೆ ಕಾರ್ ಎಂದರೆ ಕೇವಲ ಪ್ರಯಾಣದ ಸಾಧನವಲ್ಲ. ಅದೊಂದು ಪ್ರತಿಷ್ಠೆ, ಸ್ಥಾನಮಾನದ ಸಂಕೇತ ಕೂಡ. ದೇಶದ ರಸ್ತೆಯಲ್ಲಿಂದು ಲಕ್ಷ ರೂ. ದರದ ನ್ಯಾನೊ ಕಾರ್ ನಿಂದ ಹಿಡಿದು 5 ಕೋಟಿಗಿಂತಲೂ ಹೆಚ್ಚು ದುಬಾರಿ ಬೆಲೆಯ ಮೆಬಾಕ್ ಕಾರ್ ಗಳಿವೆ. ಭಾರತದಲ್ಲಿಂದು ಹೈಎಂಡ್ ಲಕ್ಷುರಿ ಕಾರ್ ಗಳಿಗೂ ಬೇಡಿಕೆಯಿದೆ. ಇದಕ್ಕೆ ಪೂರಕವಾಗಿ ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ, ಬೆಂಟ್ಲಿ ಮತ್ತು ರೋಲ್ಸ್ ರಾಯ್ಸ್ ನಂತಹ ಕಂಪನಿಗಳು ಹೊಸ ಹೊಸ ಕೋಟಿ ದರದ ಕಾರ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಸದ್ಯ ನಮ್ಮ ರಸ್ತೆಯಲ್ಲಿರುವ ಟಾಪ್ ಟೆನ್ ದುಬಾರಿ ಕಾರ್ ಗಳನ್ನು ನೋಡೋಣ.

1. ಮರ್ಸಿಡಿಸ್ ಬೆಂಝ್- ಮೆಬಾಕ್
ಕೆಲವು ದಿನಗಳ ಹಿಂದೆ ಮತ್ತೆ ಭಾರತದಲ್ಲಿ ಅನಾವರಣಗೊಂಡ ಮೆಬಾಕ್ ದೇಶಕ್ಕೆ 2009ರಲ್ಲಿಯೇ ಬಂದಿತ್ತು. ಆದರೆ ಮಾರಾಟ ಮಾತ್ರ ಹತ್ತು ದಾಟಿರಲಿಲ್ಲ. ಇದು ಸದ್ಯ ರಸ್ತೆಯಲ್ಲಿರುವ ಅತ್ಯಂತ ದುಬಾರಿ ಕಾರ್. ಮೆಬಾಕ್ 57 ಮತ್ತು 62 ಎಂಬ ಎರಡು ಆವೃತ್ತಿಗಳಿವೆ. ಅತ್ಯುತ್ತಮ ಗುಣಮಟ್ಟದ ಲೆದರ್, ಮರ ಬಳಸಲಾಗಿದ್ದು, ವಿನ್ಯಾಸವಂತೂ ಸೂಪರ್!
ದರ: ಸುಮಾರು 5.1 ಕೋಟಿ ರೂಪಾಯಿ.

2. ಬೆಂಟ್ಲಿ ಅಝಾರ್
ಇದು ಭಾರತಕ್ಕೆ 2003ರಲ್ಲಿ ಬಂದಿತ್ತು. ಮೆಬಾಕ್ ನಂತರದ ದುಬಾರಿ ಕಾರಿದು. 2 ಸೀಟ್ ನ ಅಝಾರೆ 5.9 ಲೀಟರ್ ಎಂಜಿನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು ಸುಮಾರು 552 ಹಾರ್ಸ್ ಪವರ್ ನೀಡುತ್ತದೆ. ಇದರ ವೇಗ ಪ್ರತಿಗಂಟೆಗೆ ಸುಮಾರು 317 ಕಿ.ಮೀ.
ದರ: ಸುಮಾರು 3.5 ಕೋಟಿ ರೂ.

3. ರೋಲ್ಸ್ ರಾಯ್ಸಿ ಫಾಂಟಾಮ್
ಫಾಂಟಾಮ್ ಸೂಪರ್ ಲಕ್ಷುರಿ ಸೆಡಾನ್ ಕಾರ್ ಕೇವಲ ದುಬಾರಿ ಮಾತ್ರವಲ್ಲ. ತುಂಬಾ ದೊಡ್ಡ ಕಾರ್ ಕೂಡ ಹೌದು. ಇದು ಸುಮಾರು 19 ಫೀಟ್ ಉದ್ದವಿದೆ. ಇದು ಬಿಎಂಡಬ್ಲ್ಯು 760ಎಲ್ಐಗಿಂತ ಸುಮಾರು 2 ಫೀಟ್ ದೊಡ್ಡದಿದೆ. ರೋಲ್ಸ್ ರಾಯ್ಸಿ ಫಾಂಟಾಮ್ 6.75 ಲೀಟರ್ ನ ವಿ-12 ಎಂಜಿನ್ ಹೊಂದಿದ್ದು, ಸುಮಾರು 453 ಹಾರ್ಸ್ ಪವರ್ ನೀಡುತ್ತದೆ.
ದರ: 3.5 ಕೋಟಿ ರೂ.

4. ಲಂಬೊರ್ಗಿನಿ ಮುರ್ಸಿಲಾಗೊ
ಇದು ಗೂಳಿಯಂತಹ ಕಾರ್. ಮುರ್ಸಿಲಾಗೊ 6.5 ಲೀಟರ್, 12 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 8 ಸಾವಿರ ಆರ್ ಪಿಎಂಗೆ 631 ಹಾರ್ಸ್ ಪವರ್ ನೀಡುತ್ತದೆ. ಲಂಬೊರ್ಗಿನಿ ಗೂಳಿ ಕಾರ್ ಪ್ರತಿಗಂಟೆಗೆ 340 ಗರಿಷ್ಠ ವೇಗ ಹೊಂದಿದೆ.
ದರ: 3 ಕೋಟಿ ರೂ.

5. ಬೆಂಟ್ಲಿ ಆರ್ನೆಂಜ್
ಇದು ಕೂಡ ದೇಶದಲ್ಲಿರುವ ವೇಗದ ಕಾರ್. ಪ್ರತಿಗಂಟೆಗೆ ಸುಮಾರು 250 ಕಿ.ಮೀ. ವೇಗ ಹೊಂದಿದೆ. ಆರ್ನೆಂಜ್ 6.7 ಲೀಟರ್ ನ ವಿ-8 ಎಂಜಿನ್ ಹೊಂದಿದ್ದು 400 ಹಾರ್ಸ್ ಪವರ್ ನೀಡುತ್ತದೆ.
ದರ: 2.75 ಕೋಟಿ ರೂ.ನಿಂದ 2.25 ಕೋಟಿ ರೂ.

6. ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪಾರ್

ಇದು ಲಕ್ಷುರಿ ಮತ್ತು ಸೂಪರ್ ಲಕ್ಷುರಿ ಆವೃತ್ತಿಗಳಲ್ಲಿ ದೊರಕುತ್ತದೆ. ಇದು ನೋಡಲು ಬೃಹತ್ ಕಾರಾಗಿದ್ದು ದರ ಕೂಡ ದೊಡ್ಡದಾಗಿದೆ. ಇದು 4-ವೀಲ್ ಡ್ರೈವ್ ಮಾದರಿಯಲ್ಲಿ ಲಭ್ಯವಿದೆ. ಸ್ಪಾರ್ 5.9 ಲೀಟರ್ ನ ಟರ್ಬೊ ಚಾರ್ಜ್ ಡ್ ಎಂಜಿನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಕಾಂಟಿನೆಂಟಲ್ ಸ್ಪಾರ್ ಸುಮಾರು 553 ಹಾರ್ಸ್ ಪವರ್ ನೀಡುತ್ತದೆ.
ದರ: 2 ಕೋಟಿ ರೂ.

7. ಫೋರ್ಸೆ ಕರೇರಾ ಜಿಟಿ
ಇದು ನಿಜಕ್ಕೂ ಸ್ಪೋರ್ಟ್ಸ್ ಕಾರ್. ಇದು ನಮ್ಮ ಟ್ರಾಫಿಕ್ ಗಂತೂ ಸೂಟ್ ಆಗೋಲ್ಲ ಯಾಕೆಂದರೆ ಜಿಟಿ ಎಂಬುದು ತುಂಬಾ ವೇಗದ ಕಾರ್. ಇದು ವಿ-10 ಎಂಜಿನ್ ಹೊಂದಿದ್ದು 603 ಹಾರ್ಸ್ ಪವರ್ ನೀಡುತ್ತದೆ.
ದರ: 1.75 ಕೋಟಿ ರೂ.

8. ಮರ್ಸಿಡಿಸ್ ಎಸ್-ಕ್ಲಾಸ್
ಇದು ಉದ್ದಿಮೆದಾರರಿಗೆ, ಅಗರ್ಭ ಶ್ರೀಮಂತರಿಗೆ ಸೂಕ್ತವಾಗಿರುವ ಕಾರ್. ಇದು ಅತ್ಯುತ್ತಮ ತಂತ್ರಜ್ಞಾನ ಹೊಂದಿದ್ದು ಸುರಕ್ಷತೆ ಮತ್ತು ಆರಾಮದಾಯಕತೆಯ ಫೀಚರ್ ಗಳ ರಾಶಿಯನ್ನೇ ಹೊಂದಿದೆ.
ದರ: ಸುಮಾರು 77 ಲಕ್ಷ ರೂ.

9. ಬಿಎಂಡಬ್ಲ್ಯು 7 ಸೀರಿಸ್
ದೇಶದ ರಸ್ತೆಯಲ್ಲಿರುವ ಬಿಎಂಡಬ್ಲ್ಯು 7 ಸೀರಿಸ್ ಕಾರ್ ಗಳು ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ.
ದರ: 75 ಲಕ್ಷ ರೂ.ವರೆಗಿದೆ.

10. ಆಡಿ ಎ8
ಇದು 3 ಆವೃತ್ತಿಗಳಲ್ಲಿ ದೊರಕುತ್ತದೆ. ಎ8 3.0 ಲೀಟರ್, 4.2 ಲೀ ಮತ್ತು 6.0 ಲೀಟರ್ ಎಂಜಿನ್ ಆಯ್ಕೆಗಳಲಲ್ಲಿ ದೊರಕುತ್ತದೆ. 4 ವೀಲ್ ಡ್ರೈವ್ ಮತ್ತು 6 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದೆ.
ದರ: 70 ಲಕ್ಷ ರೂ.

ಇಂತಹ ಲಕ್ಷುರಿ ಕಾರ್ ದರಕ್ಕೆ ಪುಟ್ಟ ಅರಮನೆಯಂತಹ ಒಂದೆರಡು ಮನೆ ಕಟ್ಟಬಹುದು. ನೂರಾರು ನ್ಯಾನೊ ಕಾರ್ ಖರೀದಿಸಬಹುದು. 50ಕ್ಕಿಂತ ಹೆಚ್ಚು ಸ್ವಿಫ್ಟ್, ಎ10 ಖರೀದಿಸಬಹುದು ಅಲ್ಲವೇ?

More from DriveSpark

Article Published On: Friday, February 4, 2011, 15:51 [IST]
English summary
English Summary: Some days before mercedes relanched meybach car India. India really seems to be booming. With the industry's high end luxury brands names like Mercedes, BMW, Audi, Bentley and Rolls Royce setting shop in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+