ಆಟೋ ಹಿನ್ನೋಟ: ಸಾವಿನ ಸೂತಕ ಮತ್ತು ಮದುವೆಯ ಸಂಭ್ರಮ

By * ಪಿ.ಸಿ.ಬಿ

India Auto Market
ಏಪ್ರಿಲ್ ಕೊನೆಯ ವಾರದಲ್ಲಿ ವಾಹನ ಕಂಪನಿಗಳೆಲ್ಲ ಮಾರಾಟವಾಗಿರುವ ವಾಹನಗಳನ್ನೆಲ್ಲ ಲೆಕ್ಕ ಮಾಡುವುದರಲ್ಲಿ ಬ್ಯುಸಿಯಾಗಿದ್ದವು ಎಂದೆನಿಸುತ್ತದೆ. ಯಾಕೆಂದರೆ ಈ ಸಮಯದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬೈಕು ಮತ್ತು ಕಾರುಗಳು ದೇಶದ ರಸ್ತೆಗಿಳಿದಿಲ್ಲ.

ಈ ಸಮಯದಲ್ಲಿ ಹೆಚ್ಚು ಸದ್ದಿಲ್ಲದೇ ಸಣ್ಣ ಸೆಡಾನ್ ಕಾರೊಂದು ರಸ್ತೆಗಿಳಿದಿತ್ತು. 5 ಲಕ್ಷ ರೂಪಾಯಿಗಿಂತ ಕಡಿಮೆ ದರದ ಕಾರು ಖರೀದಿಸಲು ಬಯಸುವರಿಗೆ "ವೆರಿಟೊ" ಎಂಬ ಸೆಡಾನ್ ಕಾರಿದು. ರೆನಾಲ್ಟ್ ಎಂಜಿನ್ ಹೊಂದಿರುವ ಈ ಕಾರು ಪ್ರತಿಲೀಟರ್ ಇಂಧನಕ್ಕೆ ಸುಮಾರು 21.03 ಕಿ.ಮೀ. ಮೈಲೇಜ್ ನೀಡುತ್ತದೆ.

ಹೊಸ ಬೈಕ್ ನಿರೀಕ್ಷೆಯಲ್ಲಿದ್ದವರಿಗೆ ಕಳೆದ ವಾರ ಒಂದಿಷ್ಟು ನಿರಾಶೆಯಾಗಿತ್ತು. ಆದರೆ ಬೆಂಗಳೂರು ಶೋರೂಂಗೆ ನೂತನ ಡಿಸ್ಕವರ್ ಆವೃತ್ತಿಯೊಂದು ಬಂದದ್ದು ಬಜಾಜ್ ಬೈಕ್ ಪ್ರೇಮಿಗಳಿಗೆ ಒಂದಿಷ್ಟು ಹರ್ಷವುಂಟುಮಾಡಿತು. ತಾನೇನು ಕಮ್ಮಿ ಇಲ್ಲ ಅಂತ ಹೀರೋ ಹೋಂಡಾ ಕಂಪನಿ ಕೂಡ 125 ಸಿಸಿಯ ಗ್ಲಾಮರ್ ಬೈಕಿನ ಸುಧಾರಿತ ಆವೃತ್ತಿಯನ್ನು ಪರಿಚಯಿಸಿತು.

ಸುನಾಮಿ ಕಾರಣದಿಂದ ಬಿಡಿಭಾಗಗಳ ಪೂರೈಕೆ ಕೊರತೆ ಕಾರಣದಿಂದ ಹೋಂಡಾ ಕಂಪನಿಯು ಶೇಕಡಾ 50ರಷ್ಟು ಉತ್ಪಾದನೆಯನ್ನು ದೇಶದಲ್ಲಿ ಕಡಿತಗೊಳಿಸುವುದಾಗಿ ತಿಳಿಸಿತು. ಇದರಿಂದಾಗಿ ಹೋಂಡಾ ಕಂಪನಿಯ ಬೈಕ್ ಗಳಿಗೆ ವೈಟಿಂಗ್ ಪಿರೇಡ್ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ಸಮಯದಲ್ಲಿ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೆಸ್ ಬೆಂಝ್ ಮೇ ಒಂದರಿಂದ ಕಾರು ದರಗಳನ್ನು ಹೆಚ್ಚಿಸುವುದಾಗಿ ತಿಳಿಸಿತು.

ಗೌತಮ್ ಸೇನ್ ಬರೆದ "ಮಹಾರಾಜಸ್ ಆಂಡ್ ದೆಯರ್ ಮ್ಯಾಗ್ನಿಫಿಸೆಂಟ್ ಮೋಟರ್ ಕಾರ್ಸ್" ಎಂಬ ಪುಸ್ತಕವು ಇದೇ ವಾರದಲ್ಲಿ ಬಿಡುಗಡೆಯಾಗಿತ್ತು. ನಮ್ಮ ದೇಶದ ರಾಜಮಹಾರಾಜರುಗಳು ಬಳಸಿದ ಕಾರುಗಳ ಕುರಿತು ಇದರಲ್ಲಿ ಮಾಹಿತಿಗಳಿವೆಯಂತೆ. ಇದೇ ಸಮಯದಲ್ಲಿ ಟಿಪ್ಪರ್ ಡ್ರೈವರ್ ಗಳಗೆ ನಡೆದ ಜಾಗತಿಕ ಮಟ್ಟದ ಸ್ಪರ್ಧೆಯೊಂದರಲ್ಲಿ ಭಾರತದ ಡ್ರೈವರ್ ಗೆಲುವು ತಮ್ಮದಾಗಿಸಿಕೊಂಡರು.

ಏಪ್ರಿಲ್ ಕೊನೆಯ ವಾರ ಇಂಟ್ರೆಸ್ಟಿಂಗ್ ಆದ ಅಧ್ಯಯನವೊಂದು ಹೊರಬಿದ್ದಿತ್ತು. ಅದೇನೆಂದರೆ ಕಾರು ಸೀಟುಗಳಿಗಿಂತ ಸಾರ್ವಜನಿಕ ಟಾಯ್ಲೆಟ್ ಸೀಟು ಬೆಟರ್ ಅಂತ. ಸಾರ್ವಜನಿಕ ಶೌಚಾಲಯದಲ್ಲಿ ಪ್ರತಿ ಸೆಂಟಿಮೀಟರ್ ಗೆ ಸುಮಾರು 80ರಷ್ಟು ಬ್ಯಾಕ್ಟೀರಿಯಾಗಳಿದ್ದರೆ ಕಾರಿನ ಇಂಟಿರಿಯರ್ ನಲ್ಲಿ ಪ್ರತಿ ಸೆಂಟಿಮೀಟರ್ ನಲ್ಲಿ ಸುಮಾರು 700ರಷ್ಟು ಬ್ಯಾಕ್ಟೀರಿಯಾಗಳಿರುವುದಾಗಿ ಈ ಸಂಶೋಧನೆಯಿಂದ ತಿಳಿದು ಬಂದಿತ್ತು.

ಇದೇ ವಾರದಲ್ಲಿ ಪುಟಪರ್ತಿಯಲ್ಲಿ ಶೋಕ ತುಂಬಿತ್ತು. ಈ ಸಮಯದಲ್ಲಿ ಧಾರ್ಮಿಕ ಗುರು, ದೇವಮಾನವ, ಪವಾಡಪುರುಷ ಶ್ರೀ ಸತ್ಯ ಸಾಯಿಬಾಬಾ ಕೊನೆಯುಸಿರೆದಿದ್ದರು. "ನಾನು ಈ ಎತ್ತರಕ್ಕೆ ಏರಲು ಕಾರಣ ಸಾಯಿಬಾಬಾ ಬಳಸಿದ ಈ ಅದೃಷ್ಟದ ಕಾರು" ಎಂದ ವ್ಯಕ್ತಿಯೊಬ್ಬರನ್ನು ಕಂಡು ವಾಹನೋದ್ಯಮ ಬೆರಗಾಯಿತು.

ಮೊನ್ನೆ ಬ್ರಿಟನ್ ನಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ವಾಹನ ಲೋಕ ಪುಳಕಗೊಂಡಿತ್ತು. ಯಾಕೆಂದರೆ ಅದೊಂದು ಬ್ರಿಟನ್ ಕ್ಲಾಸಿಕ್ ಕಾರುಗಳ ಪ್ರದರ್ಶನದಂತೆ ಕಾಣುತ್ತಿತ್ತು. ಆ ರಾಜಮನೆತನದ ಐಷಾರಾಮಿ ಕಾರುಗಳೆಲ್ಲವು ದಿಬ್ಬಣ ಹೊರಟಿದ್ದವು. ಏಪ್ರಿಲ್ ಕೊನೆಯ ವಾರದ ಸಾಯಿಬಾಬಾ ಸೂತಕ ಮತ್ತು ವಿಲಿಯಂ ಮದುವೆಯ ಸಂಭ್ರಮದ ನಡುವೆ ವಾಹನ ಮಾರುಕಟ್ಟೆಯಿತ್ತು.

More from DriveSpark

Article Published On: Monday, May 2, 2011, 13:08 [IST]
English summary
Weekly automobile Review 2011 april 24 to april 30: Hero Honda has unveiled a new looking Glamour 125 cc motorcycle. Bajaj Auto, has launched its brand new DTS-i 'Discover 125cc',bike in Bangalore. Mahindra announced the launch of its sedan car "Verito".
Read more on ಕಾರು car bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+