ದೇಶದ ಹೆಚ್ಚಿನ ಜನರ ನೆಚ್ಚಿನ ಆಯ್ಕೆ- ಬಿಎಂಡಬ್ಲ್ಯು ಎಕ್ಸ್1

BMW X1
ದೇಶದಲ್ಲಿ ಐಷಾರಾಮಿ ಕಾರುಗಳ ಮಾರಾಟ ಭರ್ಜರಿಯಾಗಿಯೇ ಇದೆ. ಆದರೆ ಎಲ್ಲವೂ ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಆದರೆ ಜರ್ಮನಿಯ ಪ್ರಮುಖ ವಾಹನ ತಯಾರಿಕಾ ಕಂಪನಿ ಬಿಎಂಡಬ್ಲ್ಯುನ ಹೆಚ್ಚಿನ ಐಷಾರಾಮಿ ಬ್ರಾಂಡ್ ಗಳು ಭಾರತದಲ್ಲಿ ಅತ್ಯುತ್ತಮವಾಗಿ ಮಾರಾಟ ಕಾಣುತ್ತಿವೆ. ಅದರಲ್ಲೂ ಬಿಎಂಡಬ್ಲ್ಯು ಎಕ್ಸ್1 ಹೆಚ್ಚಿನ ಜನರ ಅಚ್ಚುಮೆಚ್ಚಿನ ಆಯ್ಕೆ ಎಂಬ ಮಾತನ್ನು ದೇಶದ ಡೀಲರ್ ಗಳು ಒಪ್ಪುತ್ತಾರೆ. ಇದಕ್ಕೂ ಕಾರಣವಿದೆ.

ದೇಶದ ಗ್ರಾಹಕರಿಗೆ ಒಂದಿಷ್ಟು ಅಗ್ಗದ ದರದಲ್ಲಿ ದೊರಕುವ ಐಷಾರಾಮಿ ಕಾರಿದು. ಬಿಎಂಡಬ್ಲ್ಯು ಎಕ್ಸ್1ನ ಪೆಟ್ರೊಲ್ ಆವೃತ್ತಿ ಅಗ್ಗವಾಗಿರುವುದರಿಂದ ಹೆಚ್ಚಿನ ಜನರ ಗಮನ ಸೆಳೆಯುತ್ತದೆ. ಆದರೆ ಡೀಸಲ್ ಆವೃತ್ತಿಯ ಅತ್ಯಧಿಕ ಇಂಧನ ದಕ್ಷತೆ ಇತ್ಯಾದಿ ಫೀಚರ್ ಗಳಿಂದ ಎಕ್ಸ್1 ಡೀಸಲ್ ಆವೃತ್ತಿಯನ್ನೂ ಖರೀದಿಸುತ್ತದೆ. ಒಟ್ಟಾರೆ ಎಕ್ಸ್1 ಬುಕ್ಕಿಂಗ್ ನಲ್ಲಿ ಡೀಸಲ್ ಆವೃತ್ತಿಯ ಪಾಲು ಶೇಕಡಾ 70ರಷ್ಟಿದೆ ಎಂದು ಗಮನಾರ್ಹ. ಬೆಂಗಳೂರು ಎಕ್ಸ್ ಶೋರೂಂನಲ್ಲಿ ಬಿಎಂಡಬ್ಲ್ಯು ಎಕ್ಸ್1 ಕಾರುಗಳು ಸುಮಾರು 25 ಲಕ್ಷ ರೂ.ನಿಂದ 30 ಲಕ್ಷ ರೂ. ಆಸುಪಾಸಿನಲ್ಲಿ ದೊರಕುತ್ತದೆ.

ಭಾರತದ ವಾಹನ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್ 1 ಆವೃತ್ತಿಯು ಇತರ ಕಂಪನಿಗಳ ಪ್ರಮುಖ ಆವೃತ್ತಿಗಳಾದ ಟೊಯೊಟಾ ಫಾರ್ಚ್ಯುನರ್, ಷೆವರ್ಲೆ ಕ್ಯಾಪ್ಟಿವಾ, ಹೋಂಡಾ ಸಿಆರ್-ವಿ ಮತ್ತು ಮಿಟ್ಸುಬಿಸಿ ಔಟ್ ಲ್ಯಾಂಡರ್ ನೊಂದಿಗೆ ಪೈಪೋಟಿ ಮಾಡುತ್ತಿದೆ. ಆದರೆ ಹೆಚ್ಚಿನ ಜನರು ಎಕ್ಸ್ 1 ಕಾರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಅಗ್ಗದ ದರದೊಂದಿಗೆ ಅದರ ಫೀಚರ್ಸ್, ವಿನ್ಯಾಸವೂ ನೆರವಾಗಿದೆ.

ನೀವು ಎಕ್ಸ್1ನ ಡೀಸಲ್ ಎಂಜಿನ್ ಆವೃತ್ತಿ ಬಯಸುವುದಾದರೆ 6 ತಿಂಗಳು (ವೇಟಿಂಗ್ ಪಿರೇಡ್) ಕಾಯಬೇಕು. ಆದರೆ ಪೆಟ್ರೊಲ್ ಆವೃತ್ತಿ ಸುಮಾರು 5 ತಿಂಗಳಲ್ಲಿ ನಿಮ್ಮ ಕೈಸೇರುತ್ತದೆ. ಆದರೆ ಹೆಚ್ಚಿನವರು ಡೀಸಲ್ ಆವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣ ಅದರಲ್ಲಿರುವ ಫೀಚರ್ ಗಳು. ಇದರಲ್ಲಿರುವ ಆಕರ್ಷಕ ಫೀಚರ್ ಗಳು ಇದನ್ನು ಡೀಸಲ್ ಆವೃತ್ತಿಗಳಲ್ಲಿ ಅಗ್ರಸ್ಥಾನದಲ್ಲಿರಿಸಿದೆ. ಇವೆಲ್ಲದರ ಹೊರತಾಗಿ ಎಕ್ಸ್1 ಸುಮಾರು 8 ಬಣ್ಣಗಳಲ್ಲಿ ದೊರಕುತ್ತಿದೆ. ಆದರೆ ಹೆಚ್ಚು ಮಾರಾಟವಾಗುತ್ತಿರುವುದು ಕೇವಲ ಬಿಳಿ ಮತ್ತು ಕಂದು ಬಣ್ಣದ ಕಾರುಗಳು.

ಎಕ್ಸ್1ನ ಭರ್ಜರಿ ಗೆಲುವಿನಿಂದ ಪ್ರೇರಿತವಾದ ಬಿಎಂಡಬ್ಲ್ಯು ಶೀಘ್ರದಲ್ಲಿ ದೇಶದ ರಸ್ತೆಗೆ ಎಕ್ಸ್3 ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಪರಿಚಯಿಸಲಿದೆ. ಬಹುಶಃ ಮುಂದಿನ ನವೆಂಬರ್ ನಲ್ಲಿಯೇ ರಸ್ತೆಗಿಳಿಯಲಿದೆ. ಇದು ಕೂಡ ಎಕ್ಸ್1ನಂತೆ ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ.

More from DriveSpark

Article Published On: Monday, April 11, 2011, 10:27 [IST]
English summary
BMW X1 is the cheapest Luxury car in India and most preferred Model by the Indian customers. BMW X1 is quite favored and owns 70% share in the bookings of the X1 overall. After such a huge great response, BMW is now keen to launch the BMW X3 SAV in India pretty soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+