ಆರನೇ ಸ್ಥಾನಕ್ಕೆ ಹತ್ತಿರದಲ್ಲಿದ್ದೇವೆ; ಪ್ರಯಾಣಿಕ ಕಾರಿಗೆ ಬಹುಪರಾಕ್

passenger car market
ದೇಶದ ವಾಹನ ಮಾರುಕಟ್ಟೆ ಕಳೆದೆರಡು ವರ್ಷದಿಂದ ಉತ್ತುಂಗದಲ್ಲಿದೆ. ಅದರಲ್ಲೂ ಪ್ರಯಾಣಿಕ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ. ಇದೇ ಟ್ರೆಂಡ್ ನೆರವಿನಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಭಾರತಕ್ಕೆ ಆರನೇ ಸ್ಥಾನ ದೊರಕುವ ನಿರೀಕ್ಷೆಯಿದೆ. ಪ್ರಮುಖ ಜಾಗತಿಕ ಕಂಪನಿಗಳು ಭಾರತಕ್ಕೆ ಧಾಂಗುಡಿಯಿಟ್ಟಿರುವುದು ಮತ್ತು ಕಳೆದೆರಡು ವರ್ಷಗಳಲ್ಲಿ ಇಲ್ಲಿನ ವಾಹನ ಮಾರುಕಟ್ಟೆಯ ಪ್ರಗತಿ ಇದಕ್ಕೆಲ್ಲ ಕಾರಣವಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 30 ಲಕ್ಷ ಪ್ರಯಾಣಿಕ ಕಾರುಗಳು ಮಾರಾಟಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಶೇ. 16ರಿಂದ ಶೇ. 18ರಷ್ಟು ಪ್ರಗತಿ ಕಾಣಲಿದ್ದು ಬ್ರೆಝಿಲ್ ಹಿಂದಕ್ಕೆ ಸರಿಯಲಿದೆ. ಚೀನಾ, ಅಮೆರಿಕ, ಜಪಾನ್, ಜರ್ಮನಿ ಮತ್ತು ಕೊರಿಯಾ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಭಾರತಕ್ಕಿಂತ ಮುಂದಿರುವ ಇತರ ದೇಶಗಳಾಗಿವೆ.

2010-11ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಸುಮಾರು 25 ಲಕ್ಷ ಕಾರುಗಳು ಮಾರಾಟಗೊಂಡಿವೆ ಎಂದು ಎಸ್ಐಎಎಂ ವರದಿ ಹೇಳಿದೆ. ಕಮಾಡಿಟಿ ದರ ಏರಿಕೆ ಹಿನ್ನಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿನ ಮಾರಾಟ ಅಷ್ಟೇನೂ ಚೇತೋಹಾರಿಯಾಗಿರುವು ನಿರೀಕ್ಷೆಗಳಿಲ್ಲ ಎಂದು ಎಸ್ಐಎಎಂ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. 64 ಹೊಸ ಆವೃತ್ತಿಗಳ ನೆರವಿನಿಂದ ವಾಹನ ಮಾರಾಟ ಶೇ. 30ರಷ್ಟು ಏರಿಕೆ ಕಂಡಿದೆ.

ಉಕ್ಕು, ರಬ್ಬರ್, ತಾಮ್ರ ಇತ್ಯಾದಿ ಕಚ್ಚಾ ವಸ್ತುಗಳ ದರ ಹೆಚ್ಚಳದ ಹಿನ್ನಲೆಯಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ವಾಹನ ಮಾರುಕಟ್ಟೆ ಸುಮಾರು ಶೇ. 12ರಿಂದ ಶೇ. 15ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಇದೇ ಅವಧಿಯಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ. 12-15ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಮೂರು ಚಕ್ರದ ವಾಹನ ಸೆಗ್ಮೆಂಟ್ ಶೇ. 9-11ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದರು.

More from DriveSpark

Article Published On: Monday, April 11, 2011, 11:32 [IST]
English summary
The ongoing fiscal is set to create the trend in passenger car market with India to climb the sixth spot, leaving behind Brazil. This could be adduced to the recent growth in two years and the arrival of most global companies. The Indian passenger car market is witnessing a growth of 16-18% with the sale volume of 3 million units in this fiscal.
Read more on ಕಾರು car bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+