ಮಾರುತಿಯಲ್ಲಿ 2,300 ಉದ್ಯೋಗವಕಾಶ, ರೆಡಿಯಾಗಿರಿ

ನೂತನ ನೇಮಕಾತಿ ಪ್ರಕ್ರಿಯೆಯಿಂದ ಕಂಪನಿಯ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 11 ಸಾವಿರಕ್ಕೆ ತಲುಪಲಿದ್ದು, ಶೇ. 27ರಷ್ಟು ಏರಿಕೆ ಕಾಣಲಿದೆ. ಉತ್ಪಾದನೆ, ಪೂರೈಕೆ, ಮಾರುಕಟ್ಟೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಅವಶ್ಯಕತೆಗಾಗಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗುವುದು ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ಕಾರ್ಯನಿರ್ವಹಣಾಧಿಕಾರಿ ಎಸ್. ವೈ. ಸಿದ್ದಿಕ್ಕಿ ಹೇಳಿದ್ದಾರೆ.
ಮಾನೆಸರ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘಟಕಕ್ಕಾಗಿ ಕಂಪನಿ ಸುಮಾರು 3,625 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇವೆರಡು ಘಟಕಗಳು ವಾರ್ಷಿಕವಾಗಿ 2.5 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ ಹೊಂದಿರಲಿದೆ. ಕಂಪನಿಯು ಪ್ರಸಕ್ತ ಸೆಪ್ಟಂಬರ್-ಅಕ್ಟೋಬರ್ ಅವಧಿಯಲ್ಲಿ ಎರಡನೇ ಘಟಕವನ್ನು ತೆರೆಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಮತ್ತೊಂದು ಘಟಕ 2012-13ರ ತ್ರೈಮಾಸಿಕದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.


Click it and Unblock the Notifications








