ನಿಸ್ಸಾನ್ ಮೈಕ್ರಾ 11,170 ರೂ. ದುಬಾರಿ

ಈ ಹಿಂದೆ ಮೈಕ್ರಾ ಪೆಟ್ರೊಲ್ ಆವೃತ್ತಿಗಳು 4.06 ಲಕ್ಷ ರೂ.ನಿಂದ 4.36 ಲಕ್ಷ ರೂ. ಆಸುಪಾಸಿನಲ್ಲಿ ದೊರಕುತ್ತಿತ್ತು. ಡೀಸಲ್ ಆವೃತ್ತಿಗಳು 5.59 ಲಕ್ಷ ರೂ.ನಿಂದ 6.05 ಲಕ್ಷ ರೂ.ಗೆ ದೊರಕುತ್ತಿತ್ತು. ಈಗ ನಿಸ್ಸಾನ್ ಮೈಕ್ರಾ ಖರೀದಿಸಲು ಗ್ರಾಹಕರು ಕೆಲವು ಸಾವಿರ ರೂಪಾಯಿ ಹೆಚ್ಚು ಪಾವತಿಸಬೇಕಿದೆ. ಆದಗ್ಯೂ, ಕಂಪನಿಯು ಎಕ್ಸ್-ಟ್ರೈಲ್ ಎಸ್ ಯುವಿ, ಐಷಾರಾಮಿ ಸೆಡಾನ್ ಕಾರ್ ಟೀನಾ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ 370ಝಡ್ ದರಗಳನ್ನು ಹೆಚ್ಚಿಸಿಲ್ಲ.
ಕಚ್ಚಾ ಸಾಮಾಗ್ರಿ ದರ ಏರಿಕೆ ಮುಂದುವರೆದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇತ್ತೀಚೆಗೆ ದೇಶದ ಇತರ ವಾಹನ ಕಂಪನಿಗಳು ದರ ಹೆಚ್ಚಳ ಮಾಡಿದ್ದವು. ಮಾರುತಿ ಸುಜುಕಿ ತನ್ನ ಕಾರುಗಳಿಗೆ 1,100 ರೂ.ನಿಂದ 9 ಸಾವಿರ ರೂ. ವರೆಗೆ ಹೆಚ್ಚಿಸಿತ್ತು. ಮಹೀಂದ್ರ ಆಂಡ್ ಮಹೀಂದ್ರ 15 ಸಾವಿರ ರೂ.ವಿನಷ್ಟು ಹೆಚ್ಚಿಸುವುದಾಗಿ ಹೇಳಿತ್ತು. ನ್ಯಾನೊ ಹೊರತುಪಡಿಸಿ ಟಾಟಾ ಮೋಟರ್ಸ್ ತನ್ನ ಕಾರುಗಳ ದರವನ್ನು ಸುಮಾರು 36 ಸಾವಿರ ರೂ.ವಿನಷ್ಟು ಹೆಚ್ಚಿಸಿತ್ತು. ಹ್ಯುಂಡೈ ಕೂಡ ದರ ಹೆಚ್ಚಿಸುವ ನಿರೀಕ್ಷೆಯಿದೆ.


Click it and Unblock the Notifications








