ಎಫ್1ಗೆ ಡ್ರೈವರ್ ಬೇಕಾಗಿದ್ದಾರೆ, ಕನ್ನಡಿಗರು ಪ್ರಯತ್ನಿಸಬಾರದೇಕೆ?

ವಿಜಯ್ ಮಲ್ಯ
ವ್ರೋಂ.. ವ್ರೋಂ.. ಅಂತ ರೇಸಿಂಗ್ ಕಾರು ಚಾಲಕರಾಗಬೇಕೆಂಬ ಕನಸಿನಲ್ಲಿರುವರಿಗೊಂದು ಸುವರ್ಣ ಅವಕಾಶ ಇಲ್ಲಿದೆ. ವಿಜಯ್ ಮಲ್ಯರ ಪ್ರತಿಷ್ಠಿತ ಎಫ್1 ರೇಸಿಂಗ್ ಕಾರಿಗೆ ಸೂಕ್ತ ಚಾಲಕರ ಹುಡುಕಾಟ ಆರಂಭವಾಗಿದೆ. ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲೂ ನಡೆಯಲಿದೆ. ಪ್ರಾದೇಶಿಕ ಆಯ್ಕೆಯಾಗಿ ಬೆಂಗಳೂರಿನಲ್ಲಿ 14 ಜನರನ್ನು ವಿಜಯ್ ಮಲ್ಯರ ಎಫ್1 ಟೀಮ್ ಅಕಾಡಮಿ ಆಯ್ಕೆ ಮಾಡಲಿದ್ದು, ಅವರಲ್ಲಿ ಒಬ್ಬರಿಗೆ ಅಂತಿಮ ಆಯ್ಕೆ ಪ್ರಕ್ರಿಯೆಗೆ ಪ್ರವೇಶಿಸುವ ಅವಕಾಶವಿದೆ. ಅಲ್ಲೂ ಗೆದ್ದರೆ ಪ್ರತಿಷ್ಠಿತ ಫಾರ್ಮುಲಾ ಒನ್ ಕಾರಿಗೆ ಚಾಲಕರಾಗಬಹುದು.

ಮೋಟರ್ ಸ್ಪಾಟ್ ರೇಸಿಂಗ್ ವಿಶ್ವ ಚಾಂಪಿಯನ್ ಷಿಪ್ ಗಾಗಿ ಸೂಕ್ತ ಚಾಲಕರೊಬ್ಬರಿಗಾಗಿ ಉದ್ಯಮಿ ಮತ್ತು ಕರ್ನಾಟಕದ ರಾಜಸಭೆಯ ಸದಸ್ಯರಾದ ವಿಜಯ್ ಮಲ್ಯ ಹುಡುಕಾಟದಲ್ಲಿದ್ದಾರೆ. ಎಫ್1 ಚಾಲಕರಿಗಾಗಿ "ಫೋರ್ಸ್ ಇಂಡಿಯಾ ಎಫ್1 ಟೀಮ್ ಅಕಾಡಮಿ" ದೇಶಾದ್ಯಂತ ಹುಡುಕಾಟ ನಡೆಸಲಿದ್ದು, ನೂರಾರು ಜನರಿಗೆ ಪಾಲ್ಗೊಳ್ಳಲು ಅವಕಾಶವಿದೆ.

"ದೇಶಾದ್ಯಂತ ಸೂಕ್ತ ಎಫ್1 ಡ್ರೈವರ್ ಅನ್ವೇಷಣೆಯನ್ನು ಏಪ್ರಿಲ್ 25ರಿಂದ ಆರಂಭಿಸಲಿದ್ದೇವೆ. ಒಂದು ಕೋಟಿ ಜನರಲ್ಲಿ ಒಬ್ಬರ ಆಯ್ಕೆ" ಕಾನ್ಸೆಪ್ಟ್ ಮೂಲಕ ಆಯ್ಕೆ ಮಾಡಲಾಗುವುದು. ಅಕಾಡಮಿಯ ಆಯ್ಕೆ ಪ್ರಕ್ರಿಯೆಯಲ್ಲಿ ದೇಶದ 14ರಿಂದ 17 ವಯಸ್ಸಿನ ಯುವಕ ಯುವತಿಯರು ಪಾಲ್ಗೊಳ್ಳಬಹುದು" ಎಂದು ವಿಜಯ್ ಮಲ್ಯ ಬೆಂಗಳೂರಿನಲ್ಲಿ ಪ್ರಕಟಿಸಿದ್ದಾರೆ.

"ಆಯ್ಕೆ ಮತ್ತು ತರಬೇತಿ ಅಕಾಡಮಿಯ ಪಾಲುದಾರಿಕೆಯನ್ನು ಪ್ರಮುಖ ಜಾಗತಿಕ ಕಂಪನಿ "ಎಕ್ಸಾನ್ ಮೊಬಿಲ್" ಹೊಂದಲಿದೆ. ಈ ಅಕಾಡಮಿ, ಸ್ಪೋರ್ಟ್ಸ್ ರೇಸಿಂಗ್ ಟಾಲೆಂಟ್ ಗಳ ಹಂಟ್ ಮಾಡಲಿದೆ ಮತ್ತು ವೃತ್ತಿಪರ ಕ್ರೀಡಾ ಚಾಲಕರಾಗಿ ಅವರಿಗೆ ತರಬೇತಿ ನೀಡಲಿದೆ" ಎಂದರು.

ಸೂಕ್ರ ಪ್ರತಿಭೆಗಳ ಹುಡುಕಾಟ ಬೆಂಗಳೂರು, ಚೆನ್ನೈ, ಗೋವಾ, ಹೈದರಾಬಾದ್, ಮುಂಬೈ ಸೇರಿದಂತೆ ಹೆಚ್ಚಿನ ನಗರಗಳಲ್ಲಿ ನಡೆಯಲಿದೆ. ಏಪ್ರಿಲ್ 25 ಮತ್ತು ಜೂನ್ 7ರ ನಡುವೆ ಎರಡು ಸುತ್ತಿನಲ್ಲಿ ಪ್ರತಿಭಾನ್ವೆಷಣೆ ನಡೆಯಲಿದೆ. ಈ ಅಕಾಡಮಿಯು ಅಂತಿಮವಾಗಿ ಪ್ರತಿನಗರದಲ್ಲೂ 14 ಜನರನ್ನು ಪ್ರಾದೇಶಿಕ ಟ್ರಯಲ್ ಗಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅಂತಿಮ ಪಟ್ಟಿಗೆ ತಲುಪಿದ ನೂರು ಮಂದಿಯಲ್ಲಿ ಅಗ್ರಸ್ಥಾನ ಪಡೆದ 10 ಜನರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಅಂತಿಮ ಪಟ್ಟಿಯಲ್ಲಿರುವ 10 ವೇಗದ ಸವಾರರಿಗೆ ಬ್ರಿಟನ್ ನಲ್ಲಿ ಒಂದು ವಾರದ ತರಬೇತಿ ನೀಡಲಾಗುವುದು. ಇಲ್ಲಿ ಅವರೆಲ್ಲ್ಲರು ಫಿಟ್ ನೆಸ್, ಚಾಲನೆ ಪಾಠ, ಮಾಧ್ಯಮ ತರಬೇತಿ, ಸುರಕ್ಷತೆ ಇತ್ಯಾದಿ ತರಬೇತಿ ಪಡೆಯಲಿದ್ದಾರೆ.

"ಹತ್ತು ಮಂದಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರನ್ನು ನೋಯ್ಡಾದಲ್ಲಿ ಆಕ್ಟೋಬರ್ ನಲ್ಲಿ ನಡೆಯಲ್ಲಿರು ಮೊದಲ ಇಂಡಿಯನ್ ಗ್ರಾಂಡ್ ಫಿಕ್ಸ್ ಗೆ ಆಯ್ಕೆ ಮಾಡಲಾಗುವುದು. ಇದರಲ್ಲಿ ಮೊದಲ ಸ್ಥಾನ ಪಡೆದಾತ ಬ್ರಿಟನ್ ನಲ್ಲಿ ನಡೆಯಲಿರುವ ವಿಶ್ವಚಾಂಪಿಯನ್ ಷಿಪ್ ಗೆ ಚಾಲಕರಾಗುತ್ತಾರೆ" ಎಂದು ಮಲ್ಯ ಹೇಳಿದ್ದಾರೆ.

"ರನ್ನರ್ ಅಪ್ ಆದವರು ಭಾರತದಲ್ಲಿ ನಡೆಯುವ ಚಾಂಪಿಯನ್ ಷಿಪ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಎರಡನೇ ರನ್ನರ್ ಅಪ್ ಗೆ ಏಷ್ಯಾನ್ ರೇಸಿಂಗ್ ಸ್ಕೂಲ್ ನಲ್ಲಿ ವಿಶೇಷ ತರಬೇತಿ ನೀಡಲಾಗುವುದು" ಎಂದು ಕರ್ನಾಟಕದ ರಾಜ್ಯಸಭೆಯ ಸದಸ್ಯರೂ ಆಗಿರುವ ವಿಜಯ್ ಮಲ್ಯ ಹೇಳಿದ್ದಾರೆ. ಭಾಗವಹಿಸಲಿಚ್ಚಿಸುವರು www.onefromabillion.com ನಲ್ಲಿ ಹೆಸರು ದಾಖಲಿಸಬಹುದು.

More from DriveSpark

Article Published On: Wednesday, April 13, 2011, 14:44 [IST]
English summary
Vijay Mallya is on a hunt for an Indian driver to compete in the Formula 1 (F1) motor sport racing world championship through his Force India F1 Team Academy. The talent hunt will begin in Bangalore, Amritsar, Chennai, Goa, Hyderabad, Kolhapur, Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+