ಮಾರುತಿ ಆಲ್ಟೊ ಕಾರಿಗೆ ವಿಶ್ವ ನಂಬರ್ ಒನ್ ಪಟ್ಟ

Maruti Alto
ದೇಶದ ವಾಹನ ಕಂಪನಿಯೊಂದು ಸಣ್ಣ ಕಾರ್ ಸೆಗ್ಮೆಂಟ್ ನಲ್ಲಿ ಜಾಗತಿಕವಾಗಿ ಹೊಸ ದಾಖಲೆ ಬರೆದಿದೆ. ಮಾರುತಿ ಸುಜುಕಿಯ ಆಲ್ಟೊ ಮಾಡೆಲ್ ವಿಶ್ವದಲ್ಲಿಯೇ ಅತ್ಯಧಿಕ ಮಾರಾಟದ ಕಾರೆಂಬ ಕೀರ್ತಿಗೆ ಪಾತ್ರವಾಗಿದೆ. ಆಲ್ಟೊ ಕಾರು ಈ ಹಿಂದಿನ ಟಾಪರ್ ಗಳಾದ ಫೋಕ್ಸ್ ವ್ಯಾಗನ್ ಗಾಲ್ಫ್ ಮತ್ತು ಫಿಯೆಟ್ ಯುನೊ ಇತ್ಯಾದಿ ಆವೃತ್ತಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

2010ರಲ್ಲಿ ಸುಮಾರು 3,00,956 ಯುನಿಟ್ ಮಾರಾಟ ಮಾಡುವ ಮೂಲಕ ಆಲ್ಟೊ ಜಾಗತಿಕವಾಗಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ಫೋಕ್ಸ್ ವ್ಯಾಗನ್ ಗಾಲ್ಫ್ ಕಾರು 2,93,738 ಯುನಟ್ ಮತ್ತು ಫೋಕ್ಸ್ ವ್ಯಾಗನ್ ಗೋಲ್ 2,51,078 ಯುನಿಟ್ ಮಾರಾಟಗೊಂಡು ನಂತರದ ಸ್ಥಾನ ಪಡೆದಿವೆ. ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಆಲ್ಟೊ ಅತ್ಯಧಿಕ ಮಾರಾಟದ ಕಾರೆಂಬ ಖ್ಯಾತಿ ಪಡೆದ ದೇಶದ ಮೊದಲ ಕಾರಾಗಿದೆ. 2005-06ರ ಆರ್ಥಿಕ ವರ್ಷದವರೆಗೆ ದೇಶದ ರಸ್ತೆಯಲ್ಲಿ ಆಲ್ಟೊ ಅತ್ಯಧಿಕ ಮಾರಾಟದ ಕಾರಾಗಿದೆ.

ಹತ್ತು ವರ್ಷದ ಹಿಂದೆ ಅಂದರೆ 2000ರ ಸೆಪ್ಟಂಬರ್ ನಲ್ಲಿ ಮಾರುತಿ ಆಲ್ಟೊ ರಸ್ತೆಗಿಳಿದಿತ್ತು. ಅಂದಿನಿಂದಲೇ ಮಾರಾಟದಲ್ಲಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಇಲ್ಲಿವರೆಗೆ ಒಟ್ಟಾರೆ 16.68 ಲಕ್ಷ ಆಲ್ಟೊ ಕಾರುಗಳು ಮಾರಾಟಗೊಂಡಿವೆ. ಕೇವಲ ಎಂಟು ವರ್ಷಗಳಲ್ಲಿ ಸುಮಾರು 10 ಲಕ್ಷ ಆಲ್ಟೊ ಕಾರುಗಳು ಮಾರಾಟಗೊಂಡಿದ್ದವು.

ಆಗಸ್ಟ್ 2010ರಲ್ಲಿ ಆಲ್ಟೊ ಕೆ10 ಕಾರು ರಸ್ತೆಗಿಳಿದಿದ್ದು ಒಂದು ತಿಂಗಳಲ್ಲಿ ಸುಮಾರು 32 ಯುನಿಟ್ ಮಾರಾಟಗೊಂಡಿತ್ತು. ಈ ವರ್ಷದ ಮಾರ್ಚ್ ವೇಳೆಗೆ ಸುಮಾರು 3.47 ಲಕ್ಷ ಕೆ10 ಕಾರುಗಳು ಮಾರಾಗೊಂಡಿವೆ. ಆಲ್ಟೊ ಕಾರಿಗೆ ಬಿಸಿ ಮೋಟರಿಂಗ್ ವರ್ಷದ ಕಾರು ಪ್ರಶಸ್ತಿ, ಓವರ್ ಡ್ರೈವ್ ಆಫ್ ದಿ ಕಾರ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ದೊರಕಿವೆ.

ಆಲ್ಟೊ ದಾಖಲೆ

* ದೇಶದಲ್ಲಿ 5 ವರ್ಷಗಳಲ್ಲಿ 5 ಲಕ್ಷ ಕಾರುಗಳ ಮಾರಾಟ
* 2 ವರ್ಷ 2 ತಿಂಗಳಲ್ಲಿ ಮತ್ತೆ 5 ಲಕ್ಷ ಆಲ್ಟೊ ಕಾರುಗಳ ಮಾರಾಟ
* 2008ರ ಫೆಬ್ರವರಿವರೆಗೆ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸಲಾಗಿತ್ತು.
* ಒಂದು ಆರ್ಥಿಕ ವರ್ಷದಲ್ಲಿ 2 ಲಕ್ಷ ಕಾರು ಮಾರಾಟಗೊಂಡು ಮೊದಲ ಬ್ರಾಂಡ್.
* 2005-06ರವರೆಗೆ ಭಾರತದಲ್ಲಿ ಅತ್ಯಧಿಕ ಮಾರಾಟದ ಕಾರು.
* 150 ದಿನಗಳಲ್ಲಿ ಒಂದು ಲಕ್ಷ ಆಲ್ಟೊ ಮಾರಾಟ

More from DriveSpark

Article Published On: Tuesday, April 19, 2011, 16:47 [IST]
English summary
Alto has beaten all cars in the world to become no. 1 best selling car of the world. This is the first time when any Indian car model has outsold global best sellers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+