ವಿಶ್ವ ವಾಹನ ಮಾರುಕಟ್ಟೆಯಲ್ಲಿ ಭಾರತಕ್ಕೆ 4ನೇ ಸ್ಥಾನ

ಭಾರತವು 2020ಕ್ಕೆ ವಾರ್ಷಿಕ 60 ಲಕ್ಷ ವಾಹನ ಉತ್ಪಾದಿಸಿಲು ಯೋಜಿಸಿದೆ. ಇದು ಯುರೋಪನ್ನು ಹಿಂದಿಕ್ಕಲು ನೆರವಾಗಲಿದೆ. 2025ಕ್ಕೆ ಜಾಗತಿಕ ಕಾರ್ ಮಾರುಕಟ್ಟೆಗೆ ಶೇಕಡಾ 80ರಷ್ಟು ಕಾರನ್ನು ಅಮೆರಿಕ, ಭಾರತ ಮತ್ತು ಚೀನಾದಂತಹ ಪ್ರಮುಖ ದೇಶಗಳು ಪೂರೈಸಲಿವೆ ಎಂದು ವರದಿ ಹೇಳಿದೆ.
ಭಾರತವು ಎ ಮತ್ತು ಬಿ ಸೆಗ್ಮೆಂಟ್(ಸಣ್ಣ ಕಾರ್) ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಿದೆ. ಆದರೆ ಚೀನಾ ಸಿ ಮತ್ತು ಡಿ ಸೆಗ್ಮೆಂಟ್ ವಾಹನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೂ ಅಮೆರಿಕ ಹೈಯರ್ ಸೆಗ್ಮೆಂಟ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ದೇಶದ ಮಾರುತಿ ಸುಜುಕಿಯಂತಹ ಕಂಪನಿಗಳ ದೇಶಿಯ ಮಾರಾಟಕ್ಕೆ ಹೊಡೆತ ಬೀಳಲಿದೆ.
ಈಗ ಮಾರುತಿ ಸುಜುಕಿ ದೇಶದ ಮಾರುಕಟ್ಟೆಯಲ್ಲಿ ಶೇಕಡಾ 50ರಷ್ಟು ಪಾಲು ಹೊಂದಿದೆ. ಕಂಪನಿಯು ವೋಕ್ಸ್ ವ್ಯಾಗನ್, ಹ್ಯುಂಡೈ, ಫೋರ್ಡ್ ಮತ್ತು ಟೊಯೊಟಾದಂತಹ ವಿದೇಶಿ ಕಂಪನಿಗಳಿಂದ ಪ್ರಬಲ ಪೈಪೋಟಿ ಎದುರಿಸುತ್ತಿದೆ. ವಿದೇಶಿ ಕಂಪನಿಗಳು ದೇಶದಲ್ಲಿ ವರ್ಷಕ್ಕೆ ಸುಮಾರು 200 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡುತ್ತಿವೆ.


Click it and Unblock the Notifications








