50,000 ಭಾರತೀಯರಿಗೆ ಫೋಕ್ಸ್‌ವ್ಯಾಗನ್ ಉದ್ಯೋಗವಕಾಶ?
ಪ್ರಪಂಚದ ಅತಿ ದೊಡ್ಡ ವಾಹನ ಉತ್ಪಾದಕ ಕಂಪನಿ ಎಂದೆನಿಸಿಕೊಳ್ಳುವ ಗುರಿಯಿರಿಸಿಕೊಂಡಿರುವ ಫೋಕ್ಸ್‌ವ್ಯಾಗನ್, 2018ರ ವೇಳೆಗೆ ಭಾರತ ಸೇರಿದಂತೆ ಚೀನಾದವರಿಗೆ 50,000ದಷ್ಟು ಉದ್ಯೋಗವಕಾಶ ನೀಡಲು ಮುಂದಾಗುತ್ತಿದೆ.
ಈಗಾಗಲೇ 5,50,000 ಸಿಬ್ಬಂದಿಗಳನ್ನು ಹೊಂದಿರುವ ಜರ್ಮನಿಯ ಈ ನೆಚ್ಚಿನ ಕಾರು ಬ್ರಾಂಡ್ ಕಂಪನಿಯು ಈ ಸಂಖ್ಯೆಯನ್ನು 6,00,000ಕ್ಕೆ ಏರಿಸುವ ಇರಾದೆ ಹೊಂದಿದೆ. ಇದರಂತೆ 50,000ದಷ್ಟು ನೂತನ ಉದ್ಯೋಗ ಸೃಷ್ಟಿಯಾಗಲಿದೆ.
ಅಂದರೆ ನೂತನ ಉದ್ಯೋಗವು ತವರೂರಾದ ಜರ್ಮನಿ ಅಥವಾ ಯುರೋಪ್ ಖಂಡವನ್ನು ತಲಹದಿಯಲ್ಲಿರುವುದಿಲ್ಲ. ಬದಲಾಗಿ ಬೆಳೆದು ಬರುತ್ತಿರುವಂತಹ ಭಾರತ, ಚೀನಾ ಹಾಗೂ ರಷ್ಯಾದಿಂದ ಆಮದು ಮಾಡಿಕೊಳ್ಳಲು ಗುರಿಯಿರಿಸಿಕೊಂಡಿದೆ.
ಸಮಕಾಲೀನ ಯುರೋಪ್ ವಾತಾವರಣ ಮಾರುಕಟ್ಟೆಗೆ ಉತ್ತೇಜನ ನೀಡುವ ನಿರೀಕ್ಷೆಯನ್ನು ಫೋಕ್ಸ್‌ವ್ಯಾಗನ್ ಹೊಂದಿಲ್ಲ. ಇದರಂತೆ ಇತರ ದೇಶಗಳತ್ತ ಗಮನ ಕೇಂದ್ರಿಕರಿಸಿದೆ. ಪ್ರಸ್ತುತ ಯುರೋಪ್‌ನ ಅತಿ ದೊಡ್ಡ ಕಾರು ತಯಾರಕ ಕಂಪನಿ ಎನಿಸಿಕೊಂಡರೂ ಫೋಕ್ಸ್‌ವ್ಯಾಗನ್ ಭಾರತ, ಚೀನಾ ಹಾಗೂ ರಷ್ಯಾಗಳಂತಹ ಎರ್ಮಿಜಿಂಗ್ ಮಾರುಕಟ್ಟೆ ಮೇಲೆ ನಿಗಾ ವಹಿಸುತ್ತಿದೆ.


Click it and Unblock the Notifications









