ಸಣ್ಣ ಸ್ವಿಫ್ಟ್ ಡಿಜೈರ್ ಕಾರಿಗೆ ದರನೂ ಕಡಿಮೆ

2011 New Swift Dzire
ಕೆಲವು ಉತ್ಪನ್ನಗಳ ಗಾತ್ರ ಸಣ್ಣದಾದರೆ ಅದಕ್ಕೆ ವಿಧಿಸುವ ಸುಂಕ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿ ಚಹಾ ಹುಡಿ, ಹಾಲಿನ ಪ್ಯಾಕೇಟ್, ಎಣ್ಣೆ ಪ್ಯಾಕೇಟ್ ಗಳೆಲ್ಲ ಕೆಲವು ಗ್ರಾಂ ಕಡಿಮೆ ಮಾಡಿ ಅಥವಾ ಹೆಚ್ಚಿಸಿ ಹೆಚ್ಚುವರಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡದ್ದು ಹಳೆಯ ಕತೆ. ಮಾರುತಿ ಸುಜುಕಿ ತನ್ನ ಆಕರ್ಷಕ ಕಾರು 2011ರ ಸ್ವಿಫ್ಟ್ ಡಿಜೈರನ ಗಾತ್ರವನ್ನು ತಗ್ಗಿಸಲು ಯೋಚಿಸಿದೆ. ನೂತನ ಸ್ವಿಫ್ಟ್ ಡಿಜೈರ್ ನಾಲ್ಕು ಮೀಟರ್ ಗಿಂತ ಕಡಿಮೆ ಉದ್ದವಿರುವುದರಿಂದ ಅದಕ್ಕೆ ವಿಧಿಸಿರುವ ಅಬಕಾರಿ ಸುಂಕವೂ ಕಡಿಮೆಯಾಗಲಿದೆ.

ಪ್ರಸಕ್ತ ಅಬಕಾರಿ ಸುಂಕ ನೀತಿಯಂತೆ ನಾಲ್ಕು ಮೀಟರ್ ಗಿಂತ ಉದ್ದವಾದ ಕಾರುಗಳಿಗೆ ಶೇ. 22ರಷ್ಟು ಸುಂಕ ವಿಧಿಸಲಾಗುತ್ತದೆ. ಆದರೆ ನಾಲ್ಕು ಮೀಟರ್ ಗಿಂತ ಕಡಿಮೆ ಇರುವ ಕಾರುಗಳಿಗೆ ಕೇವಲ ಶೇ. 10ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ನೂತನ ಸ್ವೀಫ್ಟ್ ಗೆ ಸುಂಕ ಕಡಿಮೆಯಾಗಿರುವುದರಿಂದ ಅದರ ದರ ಸುಮಾರು 30 ಸಾವಿರ ರೂ.ನಿಂದ 40 ಸಾವಿರದಷ್ಟು ಕಡಿಮೆಯಾಗಲಿದೆ.

ಹಾಗಂತ ಗಾತ್ರ ಸಣ್ಣದಾಗಿಸಲು ಮಾರುತಿ ಪ್ರಯತ್ನಿಸಿದ್ದು ಕೇವಲ ಅಬಕಾರಿ ಸುಂಕವನ್ನು ಗಮನದಲ್ಲಿಟ್ಟುಕೊಂಡಲ್ಲ. ಡಿಜೈರ್ ಮತ್ತು ಎಸ್ ಎಕ್ 4 ಕಾರುಗಳೆರಡರ ನಡುವಿನ ಸಾಮ್ಯತೆ ತಗ್ಗಿಸುವುದು ಕೂಡ ಆಗಿದೆ. ಇವೆರಡು ಕಾರುಗಳು ಒಂದೇ ರೀತಿಯ ಎಂಜಿನ್ ಮತ್ತು ಪವರ್ ಟ್ರೈನ್ ಗಳನ್ನು ಹೊಂದಿದೆ.

ಎಸ್ ಎಕ್ಸ್ 4 ಮಾರಾಟದಲ್ಲಿ ಹೆಚ್ಚಿನ ಪ್ರಗತಿಯನ್ನೇನೂ ದಾಖಲಿಸಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಈ ಸೆಗ್ಮೆಂಟ್ ಕಾರುಗಳಾದ ಸ್ಕೋಡಾ ಕಾರು, ನಿಸ್ಸಾನ್ ಸನ್ನಿ, ಹ್ಯುಂಡೈ ವೆರ್ನಾ ಮತ್ತು ಫೋರ್ಡ್ ಫಿಯೆಸ್ಟಾ ಕಾರುಗಳು ನೀಡುತ್ತಿರುವ ಪೈಪೋಟಿ. ಹೀಗಾಗಿ ತನ್ನದೇ ಕಂಪನಿಯ ಎಸ್ ಎಕ್ಸ್ 4 ಮತ್ತು ಡಿಜೈರ್ ನಡುವೆ ಪೈಪೋಟಿ ಬಯಸದ ಮಾರುತಿ ಡಿಜೈರ್ ಗಾತ್ರ ತಗ್ಗಿಸಿ ಸ್ಮಾರ್ಟಾಗಿದೆ.

More from DriveSpark

Article Published On: Monday, May 2, 2011, 14:26 [IST]
English summary
The 2011 Swift Dzire will be shorter than four metres and will attract lower excise duty. This will reduce the price of the new model by Rs 30,000 to 40,000. The reduced size is also meant to differentiate Maruti Suzuki's other sedan, the SX4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+