ರಸ್ತೆ ಅಪಘಾತ: ಪರಿಹಾರ ಪಡೆಯೋದು ಹೇಗೆ?

ಭಾರತದಲ್ಲಿ ವಾಹನ ಅಪಘಾತ ಪರಿಹಾರ ಪಡೆಯಲು ಪ್ರತ್ಯೇಕ ನ್ಯಾಯಮಂಡಳಿಯಿದೆ. ಇಂತಹ ಪ್ರಕರಣಗಳ ವಿಚಾರಣೆಗಾಗಿ 1988ರ ಮೋಟಾರ್ ವೆಹಿಕಲ್ ಕಾಯಿದೆ ಅನ್ವಯ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ಸ್(ಎಂಎಸಿಟಿ) ಸ್ಥಾಪಿಸಲಾಗಿದೆ. ಇಲ್ಲಿ ವಾಹನ ಅಪಘಾತಕ್ಕೆ ಸಂಬಂಧಿಸಿದ ವಿಚಾರಣೆ ನಡೆಯುತ್ತದೆ. ನ್ಯಾಯಯುತವಾಗಿ ಪರಿಹಾರ ಪಡೆಯಲು ಎಂಎಸಿಟಿ ನೆರವಾಗುತ್ತದೆ.
ಪರಿಹಾರ ದೊರಕುವ ಅಪಘಾತಗಳು
ರಸ್ತೆ ಅಪಘಾತದಿಂದ ಯಾರಾದರೂ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದರೆ ಅಥವಾ ಆಸ್ತಿಪಾಸ್ತಿಗೆ ನಷ್ಟವುಂಟಾಗಿದ್ದರೆ ಪರಿಹಾರ ಬಯಸಿ ಎಎಂಸಿಟಿಗೆ ಅರ್ಜಿ ಸಲ್ಲಿಸಬಹುದು.
ಪರಿಹಾರ ಕ್ಲೈಮ್ ಮಾಡುವುದು ಹೇಗೆ?
ಅಪಘಾತದಲ್ಲಿ ಗಾಯಗೊಂಡವರು, ಅಥವಾ ಆಸ್ತಿಪಾಸ್ತಿ ನಷ್ಟಗೊಂಡವರು ಅಥವಾ ಸಾವನಪ್ಪಿದ ವ್ಯಕ್ತಿಯ ಹತ್ತಿರದ ಸಂಬಂಧಿ ನ್ಯಾಯಮಂಡಳಿಯ ಪ್ರತಿನಿಧಿಯೊಬ್ಬರ ಮೂಲಕ ಅರ್ಜಿ ಸಲ್ಲಿಸಬೇಕು. ಈ ಅಪ್ಲಿಕೇಷನ್ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ಸ್ ನಿಂದ ಪಡೆಯಬೇಕು. ಪರಿಹಾರ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಪ್ರಶ್ನಿಸುವ ಅಧಿಕಾರ ಸಿವಿಲ್ ಕೋರ್ಟ್ ಗಳಿಗೆ ಇಲ್ಲ.
ಪರಿಹಾರ ಬಯಸುವ ವ್ಯಕ್ತಿ ನ್ಯಾಯಮಂಡಳಿಗೆ ರಾಷ್ ಮತ್ತು ಅಜಾಗರುಕತೆಯ ಡೈವಿಂಗ್ ಮಾಡಿರುವುದನ್ನು ಸಾಬೀತು ಪಡಿಸಬೇಕಾಗುತ್ತದೆ. ಅಜಾಗರುಕತೆಯ ಡ್ರೈವಿಂಗ್ ಎಂದರೆ
1. ಸಿಗ್ನಲ್ ಗೆ ಕಾಯದೇ ವಾಹನವೊಂದರ ಮುಂದುಗಡೆಯಿಂದ ಓವರ್ ಟೆಕ್ ಮಾಡುವುದು.
2. ಟ್ರಾಫಿಕ್ ನಿಯಮಗಳನ್ನು ಪಾಲೀಸದಿರುವುದು.
3. ಅತೀವೇಗ.
4. ರಾಂಗ್ ಸೈಡ್ ಅಥವ ಅತ್ಯಂತ ವೇಗವಾಗಿ ಸಾಗಿ ತಿರುವನ್ನು ಗಮನಿಸದೇ ಅಪಘಾತವಾಗುವುದು.
5. ಬೇರೊಂದು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಯುವುದು.
ಕೆಲವೊಮ್ಮೆ ಎರಡು ಕಡೆಯವರಿಂದಲೂ ಅಜಾಗರೂಕತೆಯಿಂದ ಅಪಘಾತವಾಗುತ್ತದೆ. ಇಂತಹ ಸಮಯದಲ್ಲಿ ನ್ಯಾಯಮಂಡಳಿ ರಸ್ತೆ ಅಪಘಾತ ಪರಿಹಾರ ಧನವನ್ನು ಕಡಿಮೆ ಮಾಡಬಹುದು. ಅಂದರೆ ಡ್ಯಾಮೇಜ್ ಮೇಲಿನ ಹೊಣೆಯನ್ನು ಎರಡೂ ಪಾರ್ಟಿಯವರಿಗೆ ಸಮನಾಗಿ ಪರಿಗಣಿಸಿ ಪರಿಹಾರ ವಿತರಣೆ ಮಾಡಲಾಗುತ್ತದೆ. ಬಸ್ ನಲ್ಲಿ ಪ್ರಯಾಣಿಕನೊಬ್ಬ ಕಿಟಕಿ ಹೊರಗೆ ಕೈಹಾಕಿದರೆ ಆತನ ಕೈಗೆ ಗಾಯವಾದರೆ, ಅಲ್ಲಿ ಪ್ರಯಾಣಿಕನ ತಪ್ಪಿರುವುದರಿಂದ ನೀಡುವ ಪರಿಹಾರ ಧನ ಕಡಿಮೆಯಾಗಿರುತ್ತದೆ.
ಅಪಘಾತ ನಡೆದ ರಾಜ್ಯ ಒಂದು, ಅಪಘಾತಕ್ಕೆ ಒಳಗಾದ ಎರಡು ಪಾರ್ಟಿಯವರು ಬೇರೆ ಬೇರೆ ರಾಜ್ಯದವರಾಗಿದ್ದರೆ ಅವರು ಇಚ್ಚಿಸಿದ ರಾಜ್ಯದಲ್ಲಿಯೇ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ಆಕ್ಸಿಡೆಂಟ್ ಬೆಂಗಳೂರಿನಲ್ಲಿ ನಡೆದಿದ್ದರೆ, ಅಪಘಾತಕ್ಕೆ ಒಳಗಾದ ಎರಡು ಪಾರ್ಟಿಯವರು ಮುಂಬೈ ಮತ್ತು ದೆಹಲಿಯವರಾಗಿದ್ದರೆ, ಬೆಂಗಳೂರು ಅಥವಾ ದೆಹಲಿ ಅಥವಾ ಮುಂಬೈ ನ್ಯಾಯಮಂಡಳಿಯಲ್ಲಿ ಎಲ್ಲಿ ಬೇಕಾದರೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅಪಘಾತದಲ್ಲಿ ಸಾವನ್ನಪ್ಪಿದರೆ, ಅಥವಾ ದೇಹಕ್ಕೆ ಹೆಚ್ಚಿನ ಗಾಯಗಳಾಗಿದ್ದರೆ ಅದನ್ನು ಹತ್ತಿರದ ಪೋಲಿಸ್ ಸ್ಟೇಷನ್ ಗೆ ತಿಳಿಸಬೇಕು. ಯಾಕೆಂದರೆ ಪೋಲಿಸ್ ಅಧಿಕಾರಿ ಈ ವರದಿಯನ್ನು ನ್ಯಾಯಮಂಡಳಿಗೆ 30 ದಿನಗಳ ಒಳಗೆ ಕಳುಹಿಸಬೇಕಾಗುತ್ತದೆ.


Click it and Unblock the Notifications








