ದೇಶದಲ್ಲೇ ತಮಿಳುನಾಡಿನಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ

By Nagaraja

ರಾಷ್ಟ್ರೀಯ ಅಪರಾಧ ದಾಖಲೆ ಇಲಾಖೆ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 2013ನೇ ಸಾಲಿನಲ್ಲಿ ದೇಶದಲ್ಲಿ 4,00,517 ಆಕಸ್ಮಿಕ ಮರಣಗಳು ಸಂಭವಿಸಿದೆ. ಇದು ಹಿಂದಿನ ವರ್ಷಗಿಂತಲೂ ಶೇಕಡಾ 1.4ರಷ್ಟು ಹೆಚ್ಚಾಗಿದೆ.

ಈ ಪೈಕಿ ಶೇಕಡಾ 34.3ರಷ್ಟು ರಸ್ತೆ ಅಪಘಾತದಿಂದಲೇ ಸಾವನ್ನಪ್ಪಿರುವುದಾಗಿ ಇಲಾಖೆ ತಿಳಿಸಿದೆ. ಉಳಿದಂತೆ ಹಠಾತ್ ಸಾವು (7.8%), ಮುಳುಗಿ ಸತ್ತು ಹೋಗುವುದು (7.5%), ವಿಷ ಸೇವನೆ (7.3%), ರೈಲ್ವೇ ಅಪಘಾತ (7.2%) ಮತ್ತು ಅಗ್ನಿ ಆಕಸ್ಮಿಕ (5.5%) ದಾಖಲಾಗಿವೆ.

Tamil Nadu

ಈ ಪೈಕಿ ತಮಿಳುನಾಡಿನಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ದೇಶದ ಒಟ್ಟು ರಸ್ತೆ ಅಪಘಾತ ಪ್ರಕರಣದ ಶೇಕಡಾ 15ರಷ್ಟು ಅಂದರೆ 66,238 ರಸ್ತೆ ಅಪಘಾತ ಪ್ರಕರಣಗಳು ತಮಿಳುನಾಡಿನಲ್ಲಿ ಸಂಭವಿಸಿದೆ.

ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ 701 (50.5%) ರೈಲ್ವೇ-ರಸ್ತೆ ಅಪಘಾತಗಳು ಹಾಗೆಯೇ ಮಹಾರಾಷ್ಟ್ರದಲ್ಲಿ 8,165 (26.1%) ರೈಲ್ವೇ ಅಪಘಾತ ಪ್ರಕರಣಗಳು ದಾಖಲಾಗಿವೆ. ಇಲ್ಲಿ ಅಚ್ಚರಿಯ ವಿಷಯವೆಂದರೆ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿರುವ ಒಟ್ಟು ಆಕಸ್ಮಿಕ ಮರಣಗಳ ಪೈಕಿ ಶೇಕಡಾ 63.5ರಷ್ಟು ರಸ್ತೆ ಅಪಘಾತದಿಂದಲೇ ಸಂಭವಿಸಿದೆ.

ಇವೆಲ್ಲದರ ಹೊರತಾಗಿ ಸಮಾಧಾನಕರ ಸಂಗತಿಯೆಂದರೆ 2009ರಲ್ಲಿ 1.4ರಷ್ಟಿದ್ದ ಸಾವಿರ ವಾಹನಗಳಿಗೆ ಮರಣ ಪ್ರಮಾಣವು 2013ನೇ ಸಾಲಿನಲ್ಲಿ 0.9ರಷ್ಟಕ್ಕೆ ಇಳಿಕೆ ಕಂಡಿದೆ. ಅದೇ ರೀತಿ ದೇಶದಲ್ಲಿ ರಸ್ತೆ ಅಪಘಾತಗಳ ಪ್ರಮಾಣವು 2012ರಿಂದ (1,39,091) 2013ಕ್ಕೆ (1,37,423) ಶೇಕಡಾ 1.2ರಷ್ಟು ಇಳಿಕೆ ಕಂಡುಬಂದಿದೆ.

Most Read Articles

Kannada
Story first published: Tuesday, July 1, 2014, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X